ಸೀಮಂತ ಶಾಸ್ತ್ರದ ಸಂಭ್ರಮದಲ್ಲಿ ನಟಿ ರಚನಾ ದಶರಥ್

Public TV
1 Min Read
rachana dashrath

ಸ್ಯಾಂಡಲ್‌ವುಡ್ ನಟಿ ರಚನಾ ದಶರಥ್ (Rachana Dashrath) ಅವರು ಮೊದಲ ಮಗುವಿನ ಆಗಮನದ ನಿರೀಕ್ಷೆಯಲ್ಲಿದ್ದಾರೆ. ತುಂಬು ಗರ್ಭಿಣಿಯಾಗಿರುವ ನಟಿಯ ಸೀಮಂತ ಶಾಸ್ತ್ರ (Baby Shower) ಇದೀಗ ಸರಳವಾಗಿ ನಡೆದಿದೆ. ಸೀಮಂತ ಶಾಸ್ತ್ರದ ಫೋಟೋಗಳು ಇಲ್ಲಿವೆ.

rachana

ಸಿನಿಮಾ, ಕಿರುತೆರೆ ನಟಿ ರಚನಾ ಅವರ ಮನೆಯಲ್ಲಿ ಸರಳವಾಗಿ ಇತ್ತೀಚಿಗೆ ಸೀಮಂತ ಶಾಸ್ತ್ರ ಮಾಡಲಾಯಿತು. ಆಪ್ತರು, ಕುಟುಂಬಸ್ಥರ ಸಮ್ಮುಖದಲ್ಲಿ ಕಾರ್ಯಕ್ರಮ ಜರುಗಿದೆ. ಇದೀಗ 8 ತಿಂಗಳ ತುಂಬು ಗರ್ಭಿಣಿಯಾಗಿದ್ದು, ಚೊಚ್ಚಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ. ಇದನ್ನೂ ಓದಿ:ರಚಿತಾ ರಾಮ್ ತರ ಹುಡುಗಿ ಸಿಗಬೇಕು- ಮದುವೆ ಬಗ್ಗೆ ಹನುಮಂತ ಪ್ರತಿಕ್ರಿಯೆ

rachana dashrath

‘ಡಿಂಗ'(Dinga) ಚಿತ್ರದ ಹೀರೋ ಲೋಕೇಶ್ (Actor Lokesh) ಜೊತೆ ರಚನಾಗೆ ಪ್ರೇಮಾಂಕುರವಾಗಿತ್ತು. ತಮ್ಮ ಎರಡು ಕುಟುಂಬಕ್ಕೂ ಪ್ರೀತಿ ವಿಚಾರ ಪ್ರಸ್ತಾಪಿಸಿ, ಈ ವರ್ಷ ಗುರು ಹಿರಿಯರ ಸಮ್ಮುಖದಲ್ಲಿ ಜನವರಿ 27ರಂದು ಚಾಮರಾಜನಗರದ ಅನುಭವ ಮಂಟಪದಲ್ಲಿ ಮದುವೆಯಾದರು.

ರಚನಾ ದಶರಥ್ ಅವರು ಅಗ್ರಸೇನಾ, ಎಬಿ ಪಾಸಿಟಿವ್ ಸಿನಿಮಾಗಳಲ್ಲಿ ನಟಿಸಿದ್ದಾರೆ. ಮೊದಲ ಮಗುವಿನ ನಂತರ ಚೊಚ್ಚಲ ಮಗುವಿನ ಆರೈಕೆಯ ಜೊತೆಗೆ ನಟನೆಗೆ ಕಮ್ ಬ್ಯಾಕ್ ಆಗುವ ಬಗ್ಗೆ ನಟಿ ಅಭಿಲಾಷೆ ಹೊಂದಿದ್ದಾರೆ.

Share This Article