ಬೆಂಗಳೂರು: ನಟ ಚೇತನ್ ಒಡೆತನದ ಫೈರ್ ಸಂಸ್ಥೆಯಲ್ಲಿ ಫೈರ್ ಆಗಿದೆ. ಸ್ಯಾಂಡಲ್‍ವುಡ್‍ನಲ್ಲಿ ಕಳೆದ ವಾರದಿಂದ ನಡೆಯುತ್ತಿರುವ ವಿವಾದದಿಂದಾಗಿ, ನಟಿ ಪ್ರಿಯಾಂಕ ಉಪೇಂದ್ರ ಅವರು ಚೇತನ್ ಒಡೆತನದ ಸಂಸ್ಥೆಗೆ ರಾಜೀನಾಮೆ ಕೊಡಲು ನಿರ್ಧರಿಸಿದ್ದಾರೆ.
Advertisement
ಸಂಸ್ಥೆಯಲ್ಲಿ ಆಂತರಿಕ ಸಮಸ್ಯೆ ಉಂಟಾಗಿದ್ದು ಪ್ರಿಯಾಂಕ ಉಪೇಂದ್ರ ಜೊತೆ, ಹಲವು ಸದಸ್ಯರು ಸಂಸ್ಥೆಯಿಂದ ಹೊರಬರುವುದಕ್ಕೆ ನಿರ್ಧರಿಸಿದ್ದಾರೆ. ಜೊತೆಗೆ ನಟಿ ರೂಪಾ ಅಯ್ಯರ್ ರೇಖಾರಾಣಿ ಕೂಡ ಸಂಸ್ಥೆಯಿಂದ ಹೊರಬರುತ್ತಾರೆ ಅನ್ನುವ ಸುದ್ದಿ ಹಬ್ಬಿದೆ. ಮಹಿಳೆಯರ ಒಳಿತಿಗಾಗಿ ಹುಟ್ಟಿಕೊಂಡ ಫೈರ್ ಸಂಸ್ಥೆ ರಾಜಕೀಯ, ಜಾತಿಪರ ತಳುಕು ಹಾಕಿಕೊಂಡಿದೆ. ಹೀಗಾಗಿ ಪ್ರಿಯಾಂಕ ಉಪೇಂದ್ರ ಜೊತೆ, ಇತರೇ ಸದಸ್ಯರು ವಾಪಸ್ ಆಗೋಕೆ ನಿರ್ಧರಿಸಿದ್ದಾರೆ.
Advertisement
Advertisement
ಈ ವಿಚಾರದ ಬಗ್ಗೆ ಪ್ರತಿಕ್ರಿಯಿಸಿದ ಪ್ರಿಯಾಂಕ, ಹೆಣ್ಣು ಮಕ್ಕಳಿಗೆ ಆಗುತ್ತಿರುವ ದೌರ್ಜನ್ಯದ ವಿರುದ್ಧ ಧನಿ ಎತ್ತಲು ನಾವು ಈ ಸಂಸ್ಥೆಯನ್ನು ಶುರು ಮಾಡಿದ್ದೆವು. ಆದರೆ ಮುಂದಿನ ದಿನಗಳಲ್ಲಿ ಈ ಸಂಸ್ಥೆ ಬೇರೆ ರೂಪವನ್ನು ತಾಳುತ್ತಿವೆ. ಹೀಗಾಗಿ ನಾನು ಅಧ್ಯಕ್ಷೆಯಾಗಿ ಪೂರ್ತಿ ತನ್ನನ್ನು ತಾನು ತೊಡಗಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಅಷ್ಟೇ ಅಲ್ಲದೇ ಶೃತಿ ಹರಿಹರನ್ ಅವರು ಈ ಬಗ್ಗೆ ಫೇಸ್‍ಬುಕ್‍ನಲ್ಲಿ ಬರೆದು ಮಾರನೆ ದಿನವೇ ಪತ್ರಿಕಾಗೋಷ್ಠಿ ಕರೆದಿದ್ದಾರೆ. ನಾವು ಇಲ್ಲದ ವೇಳೆ ಪತ್ರಿಕಾಗೋಷ್ಠಿ ಮಾಡಿದ್ದಾರೆ ಇದು ನನಗೆ ಸರಿ ಅನ್ನಿಸುತ್ತಿಲ್ಲ. ಹೀಗಾಗಿ ನಾನು ರಾಜೀನಾಮೆ ಕೊಡಬೇಕೆಂದುಕೊಂಡಿದ್ದೇನೆ ಎಂದು ತಿಳಿಸಿದ್ದಾರೆ.
Advertisement
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv