ಬಹುಭಾಷಾ ನಟಿ ಪ್ರಿಯಾಂಕ ಮೋಹನ್ (Priyanka Mohan) ಅವರು ನಾನು ತಮಿಳು, ಮಲಯಾಳಂ ಸಿನಿಮಾ ಮಾಡಿದ್ರು ನಾನು ಕನ್ನಡದವಳು. ಕನ್ನಡ ಚಿತ್ರರಂಗ ಇಡೀ ದೇಶನೇ ತಿರುಗಿ ನೋಡುವಂತೆ ಮಾಡಿದೆ ಎಂದು ಕನ್ನಡ ಚಿತ್ರರಂಗವನ್ನು ನಟಿ ಹಾಡಿಹೊಗಳಿದ್ದಾರೆ.
Advertisement
ಮಾರ್ಚ್ 1ರಂದು ನಡೆದ 16ನೇ ಬೆಂಗಳೂರು ಅಂತಾರಾಷ್ಟ್ರೀಯ ಫಿಲ್ಮ್ ಫೆಸ್ಟಿವಲ್‌ನಲ್ಲಿ ಅತಿಥಿಯಾಗಿ ಪ್ರಿಯಾಂಕ ಮೋಹನ್ ಭಾಗಿಯಾಗಿದ್ದರು. ಈ ವೇಳೆ, ಕನ್ನಡ ಸಿನಿಮಾ ರಂಗವನ್ನು ಕೊಂಡಾಡಿದ್ದಾರೆ. ಈ ಸಮಾಂಭದಲ್ಲಿ ನಾನು ಭಾಗವಾಗಿರೋದು ತುಂಬಾ ಖುಷಿಯಿದೆ ಎಂದಿದ್ದಾರೆ. ಸಾಧುಕೋಕಿಲ ಸರ್ ನನ್ನ ಕರೆದಿದ್ದಕ್ಕೆ ಧನ್ಯವಾದಗಳು ಎಂದಿದ್ದಾರೆ. ಇದನ್ನೂ ಓದಿ:ತಲೈವಾ ಜೊತೆ ಸೊಂಟ ಬಳುಕಿಸಲು 2 ಕೋಟಿ ಸಂಭಾವನೆ ಪಡೆದ್ರಾ ಪೂಜಾ ಹೆಗ್ಡೆ?
Advertisement
Advertisement
ಸಿನಿಮಾಗೆ ಭಾಷೆ ಬೇಲಿ ಇಲ್ಲ, ಅದು ನಿಜ. ನಾನು ತಮಿಳು, ತೆಲುಗು, ಮಲಯಾಳಂನಲ್ಲಿ ಸಿನಿಮಾ ಮಾಡಿದ್ರು ಕೂಡ ನಾನು ಹುಟ್ಟಿ ಬೆಳೆದಿದ್ದು ಬೆಂಗಳೂರಿನಲ್ಲಿ ಇದರ ಬಗ್ಗೆ ಹೆಮ್ಮೆ ಇದೆ. ಕನ್ನಡ ಚಿತ್ರರಂಗ ದೊಡ್ಡದಾಗಿ ಬೆಳೆದಿದೆ. ಇಡೀ ದೇಶನೇ ತಿರುಗಿ ನೋಡೋ ಹಾಗೇ ಕನ್ನಡ ಚಿತ್ರರಂಗ ಸಿನಿಮಾ ಮಾಡುತ್ತಿದ್ದಾರೆ. ಇದರ ಬಗ್ಗೆ ತುಂಬಾ ಖುಷಿ ಮತ್ತು ಹೆಮ್ಮೆಯಿದೆ. ಸದ್ಯದಲ್ಲೇ ನಾನು ಕೂಡ ಕನ್ನಡ ಸಿನಿಮಾ ಮಾಡ್ತೀನಿ ಅಂತ ಭಾವಿಸಿದ್ದೇನೆ ಎನ್ನುತ್ತಾ ಕನ್ನಡ ಸಿನಿಮಾದಲ್ಲಿ ನಟಿಸುವ ಆಸೆಯನ್ನು ಹಂಚಿಕೊಂಡಿದ್ದಾರೆ.
Advertisement
ಈ ವೇಳೆ, ಕನ್ನಡ ಚಿತ್ರರಂಗದಲ್ಲಿ ಶಿವರಾಜ್‌ಕುಮಾರ್ ಸರ್ ಸೂಪರ್ ಸ್ಟಾರ್. ಆದರೂನು ತಮಿಳಿನಲ್ಲಿ ಜೈಲರ್, ‘ಕ್ಯಾಪ್ಟನ್ ಮಿಲ್ಲರ್’ ಮೂಲಕ ಅವರು ಫೇಮಸ್. ‘ಕ್ಯಾಪ್ಟನ್ ಮಿಲ್ಲರ್’ ಸಿನಿಮಾದಲ್ಲಿ ಶಿವಣ್ಣ ಸರ್ ಜೊತೆ ತೆರೆಹಂಚಿಕೊಂಡಿರೋದು ಹೆಮ್ಮೆಯಿದೆ ಎಂದರು. ಭಾಷೆಗೆ ಬೇಲಿ ಇಲ್ಲ. ಸಿನಿಮಾ ಅಂದರೆ ನಾವೆಲ್ಲ ಒಂದೇ. ಹೀಗೆ ಬೆಂಬಲಿಸುತ್ತಾ ಇರಿ ಎಂದು ನಟಿ ಮಾತನಾಡಿದ್ದಾರೆ.