ಬಾಲಿವುಡ್ (Bollywood) ಬ್ಯೂಟಿ ಪ್ರಿಯಾಂಕಾ ಚೋಪ್ರಾ (Priyanka Chopra) ಇದೀಗ ಹಾಲಿವುಡ್ (Hollywood) ರಂಗದಲ್ಲಿ ಮಿಂಚ್ತಿದ್ದಾರೆ. ‘ಸಿಟಾಡೆಲ್’ ವೆಬ್ ಸರಣಿ ಮೂಲಕ ಗಮನ ಸೆಳೆಯುತ್ತಿರುವ ನಟಿ ಈ ನಡುವೆ ಮೆಟಾ ಗಾಲಾ ಕಾರ್ಯಕ್ರಮದಲ್ಲಿ ಮಿಂಚಿದ್ದಾರೆ. ದುಬಾರಿ ಮೊತ್ತದ ನೆಕ್ಲೇಸ್ (Necklace) ಧರಿಸಿ ಎಲ್ಲರೂ ಹುಬ್ಬೇರುವಂತೆ ಮಾಡಿದ್ದಾರೆ.
ಇತ್ತೀಚಿಗೆ ಅಮೆರಿಕದ ಮೊಟ್ರೋಪಾಲಿಟನ್ ಮ್ಯೂಸಿಯಂ ಆಫ್ ಆರ್ಟ್‌ನಲ್ಲಿ ಮೆಟಾ ಗಾಲಾ 2023 (Meta Gala 2023) ಕಾರ್ಯಕ್ರಮ ನೆರವೇರಿದೆ. ಉದ್ಯಮಿ ಮುಖೇಶ್ ಅಂಬಾನಿ ಪುತ್ರಿ ಇಶಾ ಅಂಬಾನಿ, ಆಲಿಯಾ ಭಟ್, ಪ್ರಿಯಾಂಕಾ ಚೋಪ್ರಾ- ನಿಕ್ ಸೇರಿದಂತೆ ಹಲವರು ಭಾಗಿಯಾಗಿದ್ದರು. ಇದನ್ನೂ ಓದಿ:ಬ್ಲೌಸ್ ಇಲ್ಲದೇ ಸೀರೆಯುಟ್ಟು ಮಿಂಚಿದ ‘ಸಪ್ತ ಸಾಗರದಾಚೆ ಎಲ್ಲೋ’ ಚಿತ್ರದ ನಾಯಕಿ
View this post on Instagram
ಇದೀಗ ‘ಮೆಟಾ ಗಾಲಾ’ದಲ್ಲಿ ಪ್ರಿಯಾಂಕಾ ಚೋಪ್ರಾ ಕಪ್ಪು ಬಣ್ಣದ ಗೌನ್‌ನಲ್ಲಿ ಮಿಂಚಿದ್ದಾರೆ. ಸಖತ್ ಹಾಟ್ ಆಗಿ ಕಾಣಿಸಿಕೊಂಡಿದ್ದಾರೆ. ಕಪ್ಪು ಬಣ್ಣದ ಗೌನ್ ಜೊತೆ ಡೈಮೆಂಟ್ ನೆಕ್ಲೇಸ್ ಎಲ್ಲರ ಗಮನ ಸೆಳೆಯುತ್ತಿದೆ. ನೆಕ್ಲೇಸ್ ಅಸಲಿ ಬೆಲೆ ಕೇಳಿ ನೆಟ್ಟಿಗರು ಶಾಕ್ ಆಗಿದ್ದಾರೆ. ಇದರ ಬೆಲೆ ತಿಳಿದರೆ ನಿಜಕ್ಕೂ ನೀವು ಶಾಕ್ ಆಗ್ತೀರಾ.
ಮೆಟಾ ಗಾಲಾ ಕಾರ್ಯಕ್ರಮಕ್ಕೆ ಪತಿ ನಿಕ್ ಜೊತೆ ಪ್ರಿಯಾಂಕಾ ಚೋಪ್ರಾ ಆಗಮಿಸಿದ್ದರು. ಮೂಲಗಳ ಪ್ರಕಾರ, ಪ್ರಿಯಾಂಕಾ ಧರಿಸಿರುವ ಡೈಮಂಡ್ ನೆಕ್ಲೇಸ್ 25 ಮಿಲಿಯನ್ ಡಾಲರ್ ಮೌಲ್ಯದಾಗಿದೆ. ಇಂಡಿಯನ್ ಕರೆನ್ಸಿ ಪ್ರಕಾರ 204 ಕೋಟಿ ರೂಪಾಯಿದಾಗಿದೆ. ಇದೀಗ ಪಿಗ್ಗಿ ನೆಕ್ಲೇಸ್ ಗಾಸಿಪ್ ಪ್ರಿಯರ ಚರ್ಚೆಗೆ ಗ್ರಾಸವಾಗಿದೆ.