ನಟಿ ಪ್ರಿಯಾಂಕಾ ಚೋಪ್ರಾ (Priyanka Chopra) ಸದ್ಯ ಹಾಲಿವುಡ್ (Hollywood) ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಈ ನಡುವೆ ಶೂಟಿಂಗ್ ಸೆಟ್ನಲ್ಲಿ ನಟಿಗೆ ಗಾಯ ಮಾಡಿಕೊಂಡಿದ್ದಾರೆ. ಚಿತ್ರೀಕರಣ ವೇಳೆ ಏನಾಯ್ತು ಎಂದು ಪ್ರಿಯಾಂಕಾ ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿದ್ದಾರೆ. ಇದನ್ನೂ ಓದಿ:ಡಿವೋರ್ಸ್ ನಂತರ ಹೊಸ ರೀಲ್ಸ್ ಶೇರ್ ಮಾಡಿದ ನಿವೇದಿತಾ ಗೌಡ
Advertisement
ಹಾಲಿವುಡ್ನಲ್ಲಿ ರೊಮ್ಯಾನ್ಸ್ ಮಾಡೋಕೆ ಅವಕಾಶವೇ ಇಲ್ಲ. ಹೀಗಾಗಿ `ಆ್ಯಕ್ಷನ್ ಲೇಡಿ’ ಆಗಿ ಮಿಂಚಲು ನಟಿ ಪಣ ತೊಟ್ಟಂತಿದೆ. ಭಾರೀ ಉತ್ಸಾಹದಲ್ಲಿ ‘ದಿ ಬ್ಲಫ್’ (The Bluff) ಚಿತ್ರಕ್ಕೋಸ್ಕರ ಹೊಡೆದಾಡುವ ದೃಶ್ಯವೊಂದರಲ್ಲಿ ಭಾಗಿಯಾಗಿದ್ದರು. ಈ ಸಮಯದಲ್ಲಿ ಪ್ರಿಯಾಂಕ ಚೋಪ್ರಾ ಕತ್ತಿನ ಭಾಗಕ್ಕೆ ಸರಿಯಾಗಿ ಹೊಡೆತ ಬಿದ್ದಿದೆ. ಈ ಕುರಿತು ತಮ್ಮ ಈ ಅನುಭವವನ್ನ ಫೋಟೋ ಸಮೇತ ಹಂಚಿಕೊಂಡಿದ್ದಾರೆ. ನಟಿಯ ಅವಸ್ಥೆ ನೋಡಿ ಫ್ಯಾನ್ಸ್ ಚಿಂತೆಗೊಳಗಾಗಿದ್ದಾರೆ.
Advertisement
View this post on Instagram
ಈ ಮೊದಲು ಕೂಡ ಪ್ರಿಯಾಂಕಾ ಚೋಪ್ರಾ ಹಲವು ಬಾರಿ ಶೂಟಿಂಗ್ನಲ್ಲಿ ಗಾಯಗೊಂಡಿದ್ದರು. ಆದರೆ ಅವರು ಆ್ಯಕ್ಷನ್ ಸಿನಿಮಾಗಳಿಂದ ದೂರ ಹೋಗಿಲ್ಲ. ಇದನ್ನೂ ಓದಿ:ಅಪರೂಪದ ಕಾಯಿಲೆಯಿಂದ ಬಳಲುತ್ತಿದ್ದಾರೆ ಅನುಷ್ಕಾ ಶೆಟ್ಟಿ
Advertisement
Advertisement
ಇತ್ತೀಚೆಗೆ ಪತಿ ಮತ್ತು ಮಗಳ ಜೊತೆ ಅಯೋಧ್ಯೆಗೆ ಭೇಟಿ ನೀಡಿ ಬಾಲರಾಮನ ದರ್ಶನ ಪಡೆದಿದ್ದರು.