ಮೂಗಿನ ಶಸ್ತ್ರಚಿಕಿತ್ಸೆ ಬಳಿಕ ಖಿನ್ನತೆಗೆ ಒಳಗಾಗಿದ್ಯಾಕೆ? ಅಸಲಿ ವಿಚಾರ ಬಿಚ್ಚಿಟ್ಟ ಪ್ರಿಯಾಂಕಾ ಚೋಪ್ರಾ

Public TV
1 Min Read
priyanka chopra

ಬಾಲಿವುಡ್ (Bollywood) ಬ್ಯೂಟಿ ಪ್ರಿಯಾಂಕಾ ಚೋಪ್ರಾ (Priyanka Chopra) ಈಗ ಹಾಲಿವುಡ್ ರಂಗದಲ್ಲಿ ನಟಿಯಾಗಿ ಸಂಚಲನ ಮೂಡಿಸುತ್ತಿದ್ದಾರೆ. ಸಿಟಾಡೆಲ್ ನಂತರ ‘ಲವ್ ಅಗೇನ್’ (Love Again) ಎನುತ್ತಾ ಪಿಗ್ಗಿ ಎಂಟ್ರಿ ಕೊಟ್ಟಿದ್ದಾರೆ. ಇದೀಗ ಸಂದರ್ಶನವೊಂದರಲ್ಲಿ ತಾವು ಈ ಹಿಂದೆ ಶಸ್ತ್ರಚಿಕಿತ್ಸೆ ಮಾಡಿಸಿದ್ದಕ್ಕೆ ಸಿನಿಮಾದಿಂದ ಪ್ರಿಯಾಂಕಾ ಕಿಕ್ ಔಟ್ ಆಗಿದ್ದರ ಬಗ್ಗೆ ಬಾಯ್ಬಿಟ್ಟಿದ್ದಾರೆ.

priyanka chopra

ಹಾಲಿವುಡ್‌ನಲ್ಲಿ (Hollywood) ಸಿನಿಮಾ- ಆಲ್ಬಂ ಸಾಂಗ್‌ಗಳ ಮೂಲಕ ಸದ್ದು ಮಾಡ್ತಿದ್ದಾರೆ. ಮೂಗಿನ ಶಸ್ತ್ರಚಿಕಿತ್ಸೆಯಿಂದಾಗಿ ತಮ್ಮ ವೃತ್ತಿ ಜೀವನಕ್ಕೆ ಪೆಟ್ಟು ಬಿದ್ದಿದ್ದು ಹೇಗೆ ಎಂದು ಹಂಚಿಕೊಂಡಿದ್ದಾರೆ. 3 ಸಿನಿಮಾಗಳಿಗೆ ಪ್ರಿಯಾಂಕಾ ಸಹಿ ಹಾಕಿದ್ದರು. ಆದರೆ, ಮೂಗಿನ ಶಸ್ತ್ರಚಿಕಿತ್ಸೆಯಿಂದಾಗಿ ಪ್ರಿಯಾಂಕಾ ಚೋಪ್ರಾ ಅಂದ ಹಾಳಾಗಿತ್ತು. ನಟಿಯ ಮುಖ ಸಂಪೂರ್ಣವಾಗಿ ಬದಲಾಯಿತು. ಅವರ ವೃತ್ತಿ ಜೀವನದ ಮೇಲೆ ನೇರವಾಗಿ ಪರಿಣಾಮ ಬೀರಿತು. ಅವಕಾಶಗಳನ್ನ ಕಳೆದುಕೊಂಡ ಪ್ರಿಯಾಂಕಾ ಮಾನಸಿಕ ಖಿನ್ನತೆಗೆ ಒಳಗಾದರು ಎಂದು ಸಂದರ್ಶನವೊಂದರಲ್ಲಿ ನಟಿ ಮಾತನಾಡಿದ್ದಾರೆ. ಇದನ್ನೂ ಓದಿ:ಬಣ್ಣದ ಲೋಕಕ್ಕೆ ಡಾ ಬ್ರೋ- ‘ಡೇರ್ ಡೆವಿಲ್ ಮುಸ್ತಾಫಾ’ಗೆ ಬೆಂಬಲ

priyanka chopra

ನೇಸಲ್ ಕ್ಯಾವಿಟಿಯಲ್ಲಿನ ಪಾಲಿಪ್ ತೆಗೆಯಬೇಕು ಎಂದು  ಪ್ರಿಯಾಂಕಾಗೆ ಡಾಕ್ಟರ್ ಸಲಹೆ ನೀಡಿದ್ದರು. ಹಾಗಾಗಿ ಪಿಗ್ಗಿ ಮೂಗಿನ ಶಸ್ತ್ರಚಿಕಿತ್ಸೆ ಮಾಡಿಸಿದ್ದರು. ಆಗ ಅವಕಾಶಗಳನ್ನ ಕಳೆದುಕೊಂಡು ಡೀಪ್ ಡಿಪ್ರೆಶನ್‌ಗೆ ಜಾರಿದ್ದ ಮಗಳು ಪ್ರಿಯಾಂಕಾಗೆ ಆತ್ಮಸ್ಥೈರ್ಯ ತುಂಬಿದ್ದು, ತಂದೆ ಅಶೋಕ್ ಚೋಪ್ರಾ. ಶಸ್ತ್ರಚಿಕಿತ್ಸೆಯಿಂದ ಹಾಳಾಗಿದ್ದ ಮೂಗನ್ನ ಸರಿಪಡಿಸಲು ಮತ್ತೊಂದು ಸರ್ಜರಿ ಮಾಡಿಸುವಂತೆ ಅಶೋಕ್ ಚೋಪ್ರಾ ಸಲಹೆ ನೀಡಿದರು. ಎರಡನೇ ಬಾರಿ ಶಸ್ತ್ರಚಿಕಿತ್ಸೆ ನಡೆಯುವಾಗ ಪ್ರಿಯಾಂಕಾ ಜೊತೆಗೆ ಆಪರೇಶನ್ ಥಿಯೇಟರ್‌ನಲ್ಲಿ ಡಾ.ಅಶೋಕ್ ಚೋಪ್ರಾ ಇದ್ದರು. ಎರಡನೇ ಬಾರಿಗೆ ಶಸ್ತ್ರಚಿಕಿತ್ಸೆ ಯಶಸ್ವಿಯಾಯಿತು. ಆ ನಂತರ ಪ್ರಿಯಾಂಕಾಗೆ ಧೈರ್ಯ ಹೆಚ್ಚಾಯಿತು ಎಂದು ನಟಿ ಹಳೆಯ ದಿನಗಳ ಸವಾಲುಗಳ ಬಗ್ಗೆ ಹಂಚಿಕೊಂಡಿದ್ದಾರೆ.

priyanka chopra 1

ಪ್ರಿಯಾಂಕಾ ಚೋಪ್ರಾ ಸದ್ಯ ಹಾಲಿವುಡ್ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಮಗಳ ಆರೈಕೆ ಹೊಣೆ ಜೊತೆ ಸಿನಿಮಾಗಳತ್ತ ಕೂಡ ಗಮನ ಹರಿಸುತ್ತಿದ್ದಾರೆ. ‘ಲವ್ ಅಗೇನ್’ ಸಿನಿಮಾದಲ್ಲಿ ಪ್ರಿಯಾಂಕಾ ಚೋಪ್ರಾ- ಪತಿ ನಿಕ್ ಜೋನಸ್ ಕೂಡ ತೆರೆ ಹಂಚಿಕೊಂಡಿದ್ದಾರೆ.

Share This Article