ಬಾಲಿವುಡ್ (Bollywood) ಬ್ಯೂಟಿ ಪ್ರಿಯಾಂಕಾ ಚೋಪ್ರಾ (Priyanka Chopra) ಮದುವೆಯ (Wedding) ನಂತರ ಮತ್ತಷ್ಟು ಬೋಲ್ಡ್ & ಫಿಟ್ ಆಗಿದ್ದಾರೆ. ಸದ್ಯ ಮುಂಬೈಗೆ ಬಂದಿರುವ ಪ್ರಿಯಾಂಕಾ ದಂಪತಿ ಕಾರ್ಯಕ್ರಮವೊಂದರಲ್ಲಿ ಮುದ್ದಾಗಿ ಕ್ಯಾಮೆರಾಗೆ ಪೋಸ್ ನೀಡಿದ್ದಾರೆ.
Advertisement
ಹಿಂದಿ ಸಿನಿಮಾರಂಗದಲ್ಲಿ ಸ್ಟಾರ್ ನಟಿಯಾಗಿ ಗುರುತಿಸಿಕೊಂಡಿರುವ ಪ್ರಿಯಾಂಕಾ, ನಿಕ್ ಜೋನಸ್ (Nick Jonas) ಜೊತೆ ಮದುವೆಯಾದ್ಮೇಲೆ ಹಾಲಿವುಡ್‌ನತ್ತ (Hollywood) ಮುಖ ಮಾಡಿದ್ದಾರೆ. ಸದ್ಯ ಮುಂಬೈಗೆ ಬಂದಿರುವ ಪ್ರಿಯಾಂಕಾ ಚೋಪ್ರಾ ತಮ್ಮ ಹೊಸ ಫೋಟೋಶೂಟ್‌ನಿಂದ ಅಭಿಮಾನಿಗಳ ಗಮನ ಸೆಳೆಯುತ್ತಿದ್ದಾರೆ.
Advertisement
View this post on Instagram
Advertisement
ಈಚೆಗೆ ನೀತಾ ಮುಖೇಶ್ ಅಂಬಾನಿ ಅವರು ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ನಿಕ್ ಜೋನಸ್- ಪ್ರಿಯಾಂಕಾ ದಂಪತಿ ಕೂಡ ಭಾಗಿಯಾಗಿದ್ದರು. ಸಮಾರಂಭದಲ್ಲಿ ಮಸ್ತ್ ಆಗಿ ಡ್ಯಾನ್ಸ್ ಮಾಡಿರೋದಲ್ಲದೇ, ಕಲರ್‌ಫುಲ್ ಡ್ರೆಸ್‌ನಲ್ಲಿ ಮಿಂಚಿದ್ದಾರೆ. ಸದ್ಯ ನಟಿ ಶೇರ್ ಮಾಡಿರುವ ಚೆಂದದ ಫೋಟೋಶೂಟ್ ಸಖತ್ ವೈರಲ್ ಆಗುತ್ತಿದೆ. ಇದನ್ನೂ ಓದಿ: ವೇದಿಕೆ ಮೇಲೆ ವಿದೇಶಿ ಮಾಡೆಲ್‌ಗೆ ಮುತ್ತಿಟ್ಟ ವರುಣ್ ಧವನ್‌ಗೆ ನೆಟ್ಟಿಗರಿಂದ ತರಾಟೆ
Advertisement
View this post on Instagram
ಪ್ರಿಯಾಂಕಾ ಸಹೋದರ ಸಂಬಂಧಿ ಪರಿಣಿತಿ ಚೋಪ್ರಾ- ರಾಘವ್ ಚಡ್ಡಾ ಮದುವೆ ಸುದ್ದಿ ಬಿಟೌನ್‌ನಲ್ಲಿ ಗಾಸಿಪ್ ಪ್ರಿಯರ ಚರ್ಚೆಗೆ ಕಾರಣವಾಗಿದೆ. ಈ ಸಂದರ್ಭದಲ್ಲಿ ಪ್ರಿಯಾಂಕಾ ಕೂಡ ಅಮೆರಿಕದಿಂದ ಮುಂಬೈಗೆ ಬಂದಿರೋದು ಪರಿಣಿತಿ ಮದುವೆ ಸುದ್ದಿಗೆ ಮತ್ತಷ್ಟು ಪುಷ್ಟಿ ನೀಡಿದೆ.