ಅಯೋಧ್ಯೆ ರಾಮಮಂದಿರಕ್ಕೆ ಪ್ರಿಯಾಂಕಾ ಚೋಪ್ರಾ ಭೇಟಿ

Public TV
1 Min Read
priyanka chopra 1

ಹಾಲಿವುಡ್ ನಟಿ ಪ್ರಿಯಾಂಕಾ ಚೋಪ್ರಾ (Priyanka Chopra) ಅವರು ಕುಟುಂಬ ಸಮೇತ ಅಯೋಧ್ಯೆಗೆ (Ayodhya) ಭೇಟಿ ನೀಡಿದ್ದಾರೆ. ಪತಿ ನಿಕ್ ಜೋನಸ್ ಮತ್ತು ಮಗಳ ಜೊತೆ ರಾಮಮಂದಿರಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದ್ದಾರೆ. ಪ್ರಿಯಾಂಕಾ ಚೋಪ್ರಾ ಅಯೋಧ್ಯೆಗೆ ಭೇಟಿ ನೀಡಿರುವ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡುತ್ತಿವೆ. ಇದನ್ನೂ ಓದಿ:ಮಾಸ್ಕ್ ಮಹಿಮೆ : ಮಾಸ್ಕ್ ಇಲ್ಲದೇ ಮನೆಯಿಂದಾಚೆ ಬರಲ್ಲ ಡಿಜೆ ಅಲೆನ್ ವಾಕರ್

priyanka 1ಈಗ ಪತಿ ನಿಕ್ ಮತ್ತು ಪುತ್ರಿ ಜೊತೆ ಅಯೋಧ್ಯೆಗೆ (Ayodhya) ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದ್ದಾರೆ. ರಾಮಮಂದಿರದಲ್ಲಿ ಕೆಲ ಸಮಯ ಕಳೆದಿದ್ದಾರೆ. ಭಾರತಕ್ಕೆ ಬಂದು ಬಿಡುವು ಮಾಡಿಕೊಂಡು ಅಯೋಧ್ಯೆಗೆ ಪ್ರಿಯಾಂಕಾ ಭೇಟಿ ಕೊಟ್ಟಿರೋದು ನೋಡಿ ಫ್ಯಾನ್ಸ್ ಮೆಚ್ಚುಗೆ ಸೂಚಿಸಿದ್ದಾರೆ.

priyanka chopra 1 1ಕಳೆದ ವರ್ಷ ಪರಿಣಿತಿ ಚೋಪ್ರಾ ಎಂಗೇಜ್‌ಮೆಂಟ್‌ಗೆ ಹಾಜರಿ ಹಾಕಿದ ಬಳಿಕ ಇದೀಗ ಭಾರತಕ್ಕೆ ಪ್ರಿಯಾಂಕಾ ಚೋಪ್ರಾ ಬಂದಿದ್ದಾರೆ. ಪ್ರಿಯಾಂಕಾ ತವರು ಮನೆ ಮುಂಬೈನಲ್ಲಿ (Mumbai) ಸಮಯ ಕಳೆಯುತ್ತಿದ್ದಾರೆ. ಅಂಬಾನಿ ಮನೆ ಪಾರ್ಟಿ ಸೇರಿದಂತೆ ಹಲವು ಕಡೆ ಭೇಟಿ ನೀಡುತ್ತಿದ್ದಾರೆ.

ಪ್ರಿಯಾಂಕಾ ಚೋಪ್ರಾ ಸದ್ಯ ಹಾಲಿವುಡ್ ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. ಮತ್ತೆ ಅದ್ಯಾವಾಗ ಹಿಂದಿ ಸಿನಿಮಾಗೆ ನಟಿ ಕಮ್‌ಬ್ಯಾಕ್ ಆಗುತ್ತಾರೆ ಎಂದು ಫ್ಯಾನ್ಸ್ ಎದುರು ನೋಡಿದ್ದಾರೆ.

Share This Article