ಮುಂಬೈ: ಬಾಲಿವುಡ್ ನಟಿ ಪ್ರಿಯಾಂಕಾ ಚೋಪ್ರಾ ಹಾಗೂ ಪತಿ ನಿಕ್ ಜೋನಸ್ ಜೊತೆಗೆ ಅಮೆರಿಕಾದಲ್ಲಿ ಲಕ್ಷ್ಮೀ ಪೂಜೆ ಮಾಡಿ ಅಭಿಮಾನಿಗಳ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.
ನಟಿ ಪ್ರಿಯಾಂಕಾ ಚೋಪ್ರಾ ಖ್ಯಾತ ಪಾಪ್ ಸಿಂಗರ್ ನಿಕ್ ಜೋನಸ್ ಜೊತೆ ವಿವಾಹವಾದ ನಂತರ ಅಮೆರಿಕದಲ್ಲಿಯೇ ಸೆಟಲ್ ಆಗಿದ್ದಾರೆ. ಅವರು ಭಾರತ ತೊರೆದರೂ ಇಲ್ಲಿಯ ಸಂಸ್ಕೃತಿಯನ್ನು ಚೂರೂ ಮರೆತಿಲ್ಲ. ಇದಕ್ಕೆ ಸಾಕ್ಷಿ ಇವರು ಅಮೆರಿಕಾದಲ್ಲಿ ಇಂದು ಹಬ್ಬ ಆಚರಣೆ ಮಾಡಿರುವ ಫೋಟೋಗಳಾಗಿವೆ. ಇದನ್ನೂ ಓದಿ: ರಾಜ್ಯದಲ್ಲಿ ಮುಂದಿನ ಮೂರು ದಿನ ಭಾರೀ ಮಳೆ ಸಾಧ್ಯತೆ
ಮಹಾಲಕ್ಷ್ಮಿ ದೇವಿಯ ಆಶೀರ್ವಾದದೊಂದಿಗೆ ನಾವು ಅವಳ ಕೃಪೆ ಮತ್ತು ಸಮೃದ್ಧಿಯನ್ನು ನಮ್ಮ ಮನೆಗೆ ಆಹ್ವಾನಿಸುತ್ತೇವೆ. ದೀಪಾವಳಿಯ ಶುಭಾಶಯಗಳು ಎಂದು ಬರೆದುಕೊಂಡು ಫೋಟೋ ಶೇರ್ ಮಾಡಿದ್ದಾರೆ. ಅಭಿಮಾನಿಗಳು ಪ್ರಿಯಾಂಕಾ ಅವರ ದೇಶ ಪ್ರೇಮ ಮತ್ತು ಸಂಸ್ಕೃತಿ ಕುರಿತಾಗಿ ಇರುವ ಕಾಳಜಿಗೆಗೆ ಮೆಚ್ಚುಗೆ ಸೂಚಿಸಿದ್ದಾರೆ. ಇದನ್ನೂ ಓದಿ: ಗೌಡ್ರ ಕುಟುಂಬದಲ್ಲಿ ಸಂಭ್ರಮ – ನಿಖಿಲ್, ರೇವತಿ ದಂಪತಿಗೆ ಗಂಡು ಮಗು
View this post on Instagram
ಪತಿ ನಿಕ್ ಜೋನಸ್ ಜೊತೆ ಸೇರಿಕೊಂಡು ಪ್ರಿಯಾಂಕಾ ಹಬ್ಬವನ್ನು ಆಚರಣೆ ಮಾಡಿದ್ದಾರೆ. ನಿಕ್ ಜೋನಸ್ ಬಿಳಿ ಕುರ್ತಾ ತೊಟ್ಟರೆ, ಪ್ರಿಯಾಂಕಾ ಹಳದಿ ಬಣ್ಣದ ಸೀರೆ ಉಟ್ಟಿದ್ದಾರೆ. ವಿದೇಶದಲ್ಲಿ ಇದ್ದುಕೊಂಡು ಭಾರತೀಯ ಸಂಸ್ಕೃತಿಯನ್ನು ಆಚರಿಸುತ್ತಿದ್ದಾರೆ. ಈಗ ದೀಪಾವಳಿ ಹಬ್ಬದ ಸಂಭ್ರಮ. ಹಿಂದುಗಳ ಪಾಲಿಗೆ ಇದು ದೊಡ್ಡ ಹಬ್ಬ. ಇದನ್ನು ಪ್ರಿಯಾಂಕಾ ಚೋಪ್ರಾ ಸಂಭ್ರಮದಿಂದ ಆಚರಿಸಿದ್ದಾರೆ.