ಹಲವು ಕಾರ್ಯಕ್ರಮಗಳ ನಿಮಿತ್ತ ಮುಂಬೈಗೆ (Mumbai) ಬಂದಿಳಿದಿರುವ ನಟಿ ಪ್ರಿಯಾಂಕಾ ಚೋಪ್ರಾ (Priyanka Chopra), ಬೆಳಗ್ಗೆ ಮುಂಬೈನ ಪ್ರಸಿದ್ಧ ಗಣಪತಿ, ಆಂಜನೇಯನ ದೇವಸ್ಥಾನಕ್ಕೆ (Ganesh Temple) ಮಗಳೊಂದಿಗೆ ಭೇಟಿ ನೀಡಿದ್ದಾರೆ. ಗಣಪತಿ ಬಗ್ಗೆ ಅಪಾರ ಭಕ್ತಿ ಹೊಂದಿರುವ ಅವರು ಮಗಳಿಗೆ ಗಣಪತಿಯ ದರ್ಶನ ಮಾಡಿಸಿದ್ದಾರೆ. ಮಗಳ ಭವಿಷ್ಯಕ್ಕಾಗಿ ಪ್ರಾರ್ಥಿಸಿದ್ದಾರೆ.
Advertisement
ಅಂಬಾನಿ ಸಾಂಸ್ಕೃತಿಕ ಭವನೆ ಉದ್ಘಾಟನಾ ಸಮಾರಂಭಕ್ಕೆ ಆಗಮಿಸಿರುವ ಅವರು ಇದೇ ಮೊದಲ ಬಾರಿಗೆ ಭಾರತಕ್ಕೆ ಮಗಳನ್ನೂ ಕರೆತಂದಿದ್ದಾರೆ. ಅಮೆರಿಕಾದಲ್ಲಿ ಬೀಡುಬಿಟ್ಟಿರುವ ಪ್ರಿಯಾಂಕಾ, ಮಗಳು ಹುಟ್ಟಿದ ನಂತರ ಇದೇ ಮೊದಲ ಬಾರಿಗೆ ಅವರು ಭಾರತಕ್ಕೆ ಕಾಲಿಟ್ಟಿದ್ದಾರೆ. ಹಾಗಾಗಿ ಹಿಂದಿನ ಎಲ್ಲ ನೆನಪುಗಳನ್ನೂ ಅವರು ಮರುಸೃಷ್ಟಿ ಮಾಡುತ್ತಿದ್ದಾರೆ. ಇದನ್ನೂ ಓದಿ: ಸುದೀಪ್ ಖಾಸಗಿ ವಿಡಿಯೋ ಬೆದರಿಕೆ ಹಿಂದೆ ಕಾರು ಡ್ರೈವರ್ ಇರುವ ಶಂಕೆ
Advertisement
Advertisement
ಮೊನ್ನೆಯಷ್ಟೇ ಪತಿ ನಿಕ್ ಜೊತೆ ಆಟೋದಲ್ಲಿ ಮುಂಬೈ ಸುತ್ತಿದ್ದ ಪ್ರಿಯಾಂಕಾ, ಆಟೋದಲ್ಲಿಯೇ ಪತಿಗೆ ಮುಂಬೈ ಪರಿಚಯಿಸಿದ್ದರು. ಆಟೋ ಪ್ರಯಾಣದ ಅನುಭವನ್ನು ಅಭಿಮಾನಿಗಳ ಜೊತೆ ಅವರು ಹಂಚಿಕೊಂಡಿದ್ದರು. ಅಲ್ಲದೇ, ತಾವು ಓಡಾಡಿದ ಜಾಗವನ್ನೆಲ್ಲ ಪತಿಗೆ ಪ್ರಿಯಾಂಕಾ ಪರಿಚಯಿಸುತ್ತಿದ್ದಾರೆ.
Advertisement
ಬಾಲಿವುಡ್ ತೊರೆದ ನಂತರ ಪ್ರಿಯಾಂಕಾ ಹಾಲಿವುಡ್ ನಲ್ಲಿ ಬ್ಯುಸಿಯಾಗಿದ್ದಾರೆ. ಹಲವಾರು ವೆಬ್ ಸೀರಿಸ್ ನಲ್ಲಿ ಮತ್ತು ಬ್ಯುಸಿನೆಸ್ ನಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ. ಬಾಲಿವುಡ್ ಸಿನಿಮಾಗಳನ್ನು ಒಪ್ಪಿಕೊಳ್ಳದೇ ಇಂಗ್ಲಿಷ್ ನ ಹಲವಾರು ಶೋಗಳಲ್ಲಿ ಪ್ರಿಯಾಂಕಾ ಭಾಗಿಯಾಗಿದ್ದಾರೆ.