ದೇಸಿ ಗರ್ಲ್ ಪ್ರಿಯಾಂಕಾ ಚೋಪ್ರಾ (Priyanka Chopra) ಅವರು ಸ್ಟಾರ್ ನಟಿಯರಾದ ಆಲಿಯಾ ಭಟ್, ಕರೀನಾ ಕಪೂರ್, ದೀಪಿಕಾ ಪಡುಕೋಣೆ, ನಯನತಾರಾರನ್ನೇ ಹಿಂದಿಕ್ಕಿದ್ದಾರೆ. ಮಹೇಶ್ ಬಾಬು ನಟನೆಯ ಹೊಸ ಸಿನಿಮಾದಲ್ಲಿ ನಟಿಸಲು ಪ್ರಿಯಾಂಕಾ ಚೋಪ್ರಾ 30 ಕೋಟಿ ರೂ. ಸಂಭಾವನೆಗೆ ಮಾತುಕತೆ ನಡೆಸಿದ್ದಾರೆ. ಈ ಮೂಲಕ ಸ್ಟಾರ್ ನಟಿಯರಿಗೆ ಪ್ರಿಯಾಂಕಾ ಸೆಡ್ಡು ಹೊಡೆದಿದ್ದಾರೆ.
ಕಿಯಾರಾ, ಆಲಿಯಾ, ದೀಪಿಕಾ ಪಡುಕೋಣೆ ಸೇರಿದಂತೆ ಕೆಲ ಟಾಪ್ ನಟಿಯರು ಒಂದು ಸಿನಿಮಾಗೆ 5ರಿಂದ 15 ಕೋಟಿ ರೂ. ಸಂಭಾವನೆ ಪಡೆಯುತ್ತಾರೆ. ಹೀಗಿರುವಾಗ 30 ಕೋಟಿ ರೂ. ಸಂಭಾವನೆಯನ್ನು ಪ್ರಿಯಾಂಕಾ ಪಡೆಯುವ ಮೂಲಕ ಎಲ್ಲರ ಹುಬ್ಬೆರಿಸಿದ್ದಾರೆ. ಒಂದು ಸಿನಿಮಾಗೆ 30 ಕೋಟಿ ರೂ. ಸಂಭಾವನೆ ಪಡೆದ ಭಾರತದ ಮೊದಲ ನಟಿ ಎಂಬ ಹೆಗ್ಗಳಿಕೆಗೆ ಅವರು ಪಾತ್ರರಾಗಿದ್ದಾರೆ.
ಕಳೆದ ಕೆಲವು ವರ್ಷಗಳಿಂದ ದೇಸಿ ಗರ್ಲ್ ಹಾಲಿವುಡ್ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದರು. ಇದೀಗ ಮಹೇಶ್ ಬಾಬು (Mahesh Babu) ನಟನೆಯ 29ನೇ ಚಿತ್ರಕ್ಕೆ (SSMB29) ಅವರು ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ. ಅದಷ್ಟೇ ಅಲ್ಲ, ಒಡಿಶಾ, ವಿಶಾಖಪಟ್ಟಣಂ, ಹೈದರಾಬಾದ್‌ನಲ್ಲಿ ಈಗಾಗಲೇ ಶೂಟಿಂಗ್ ನಡೆಯುತ್ತಿದ್ದು, ನಟಿ ಕೂಡ ಭಾಗಿಯಾಗಿದ್ದಾರೆ. ಈ ಸಿನಿಮಾವನ್ನು ರಾಜಮೌಳಿ (Rajamouli) ನಿರ್ದೇಶನ ಮಾಡುತ್ತಿದ್ದಾರೆ. ಇದನ್ನೂ ಓದಿ:‘ಡ್ರ್ಯಾಗನ್’ ಚಿತ್ರದ ಬಳಿಕ ಹೆಚ್ಚಿದ ಬೇಡಿಕೆ- ‘ಮುಗಿಲ್‌ಪೇಟೆ’ ನಟಿಗೆ ಬಂಪರ್ ಆಫರ್
ಈ ಹಿಂದೆ ರಾಮ್ ಚರಣ್, ದಳಪತಿ ವಿಜಯ್ ಜೊತೆ ತೆಲುಗು ಸಿನಿಮಾಗಳಲ್ಲಿ ಪ್ರಿಯಾಂಕಾ ನಟಿಸಿದ್ದಾರೆ. ಈಗ ಮಹೇಶ್ ಬಾಬುಗೆ ನಾಯಕಿಯಾಗಿ ಬರೋಬ್ಬರಿ 20 ವರ್ಷಗಳ ಬಳಿಕ ಸೌತ್ ಸಿನಿಮಾರಂಗಕ್ಕೆ ನಟಿ ಕಮ್ ಬ್ಯಾಕ್ ಆಗ್ತಿದ್ದಾರೆ.