ಮುಂಬೈ: ಬಾಲಿವುಡ್ ಬೆಡಗಿ ಪ್ರಿಯಾಂಕ ಚೋಪ್ರಾ ಮತ್ತು ನಿಕ್ ಜೋನಸ್ ಪರಸ್ಪರ ಪ್ರೀತಿಸಿ ಮೂರು ತಿಂಗಳ ಹಿಂದೆ ಮದುವೆಯಾಗಿದ್ದಾರೆ. ಆದರೆ ಅಷ್ಟರಲ್ಲಿಯೇ ಅವರಿಬ್ಬರ ದಾಂಪತ್ಯದಲ್ಲಿ ಬಿರುಕು ಕಾಣಿಸಿಕೊಂಡಿದ್ದು, ಡಿವೋರ್ಸ್ ಗೆ ಅರ್ಜಿ ಸಲ್ಲಿಸಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ.
ಪ್ರಿಯಾಂಕ ಮತ್ತು ನಿಕ್ ಒಬ್ಬೊಬ್ಬರನ್ನು ಪ್ರೀತಿಸಿ ಆರು ತಿಂಗಳ ಡೇಟಿಂಗ್‍ನಲ್ಲಿ ಇದ್ದು ಕಳೆದ ವರ್ಷ ಡಿಸೆಂಬರ್ ನಲ್ಲಿ ಅದ್ದೂರಿಯಾಗಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. ಆದರೆ ‘ಓಕೆ’ ಎಂಬ ಮ್ಯಾಗ್‍ಜೀನ್‍ನಲ್ಲಿ ಈಗಾಗಲೇ ಪ್ರಿಯಾಂಕ-ನಿಕ್ ಜೋಡಿ ವಿಚ್ಛೇದನಕ್ಕೆ ಮುಂದಾಗಿದೆ ಎಂದು ವರದಿ ಮಾಡಿದೆ.
Advertisement
Advertisement
ಈ ವರದಿಯ ಪ್ರಕಾರ ಪ್ರಿಯಾಂಕ ಮತ್ತು ನಿಕ್ ಮಧ್ಯೆ ಸಣ್ಣ ಪುಟ್ಟ ಅಂದರೆ ಕೆಲಸ, ಪಾರ್ಟಿ ಮತ್ತು ಒಟ್ಟಿಗೆ ಸಮಯ ಕಳೆಯುವ ವಿಚಾರಗಳಿಗೂ ಜಗಳ ಮನಸ್ತಾಪ ವಾಗುತ್ತಿದೆಯಂತೆ. ಮದುವೆಗೂ ಮೊದಲು ಪ್ರಿಯಾಂಕ ತುಂಬಾ ಪ್ರೀತಿಯಿಂದ ಇರುತ್ತಿದ್ದು, ಈಗ ತುಂಬಾ ಕೋಪ ಮಾಡಿಕೊಳ್ಳುತ್ತಿದ್ದಾರಂತೆ. ಈ ಹಿನ್ನೆಲೆಯಲ್ಲಿ ನಿಕ್ ಜೋನಸ್ ಕುಟುಂಬದ ಸಂಬಂಧ ಕೂಡ ಹದಗೆಟ್ಟಿದೆ ಎಂದು ಹೇಳಲಾಗುತ್ತಿದೆ.
Advertisement
ಅಷ್ಟೇ ಅಲ್ಲದೇ ಇವರಿಬ್ಬರ ವಿಚ್ಛೇದನಕ್ಕೆ ಹಣಕಾಸು ವಿಚಾರವೇ ಪ್ರಮುಖ ಕಾರಣವಾಗಿದೆ ಎಂದು ತಿಳಿದು ಬಂದಿದೆ. ಆದರೆ ಕುಟುಂಬಸ್ಥರು ಇದೆಲ್ಲಾ ಸುಳ್ಳು ಸುದ್ದಿ. ಇಬ್ಬರು ಪರಸ್ಪರ ಚೆನ್ನಾಗಿದ್ದಾರೆ. ಅವರ ದಾಂಪತ್ಯ ಜೀವನ ಉತ್ತಮವಾಗಿದೆ ಎಂದು ಅವರಿಬ್ಬರ ವಿಚ್ಛೇಧನ ವಿಚಾರವನ್ನು ತಳ್ಳಿಹಾಕಿದೆ.
Advertisement
https://www.instagram.com/p/Bvh8zQzniPE/?utm_source=ig_embed
ಇತ್ತೀಚೆಗಷ್ಟೆ ಪ್ರಿಯಾಂಕ ನಿಕ್ ಕುಟುಂಬದ ಜೊತೆ ಮಿಯಾಮಿಯಲ್ಲಿ ಸಂತೋಷದಿಂದ ಕಳೆದಿದ್ದು, ನಿಕ್, ಸೋಫಿ ಟರ್ನರ್, ಜೋ ಜೋನಸ್ ಮತ್ತು ಕೆವಿನ್ ಜೋನಸ್ ಒಟ್ಟಿಗೆ ಫೋಟೋ ಕ್ಲಿಕ್ಕಿಸಿಕೊಂಡಿದ್ದಾರೆ. ಜೊತೆಗೆ ಪತಿಯ ಜೊತೆ ಖುಷಿಯಿಂದಿದ್ದ ಫೋಟೋವನ್ನು ಇನ್ಸ್ ಸ್ಟಾಗ್ರಾಂನಲ್ಲಿ ಅಪ್ಲೋಡ್ ಮಾಡಿದ್ದಾರೆ.
https://www.instagram.com/p/BvmWYxpHDrx/