BollywoodCinemaLatestMain PostSouth cinema

ಅಲ್ಲು ಅರ್ಜುನ್ ನಟನೆಯ `ಪುಷ್ಪ 2′ ಚಿತ್ರದಲ್ಲಿ ಪ್ರಿಯಾಮಣಿ

Advertisements

ನ್ನಡತಿ ಪ್ರಿಯಾಮಣಿ ಸ್ಯಾಂಡಲ್‌ವುಡ್ ಮಾತ್ರವಲ್ಲದೇ ಪರಭಾಷೆ ಸಿನಿಮಾಗಳಲ್ಲೂ ಛಾಪೂ ಮೂಡಿಸುತ್ತಿರುವ ನಟಿ ಸದ್ಯ ಬಹುನಿರೀಕ್ಷಿತ ಚಿತ್ರ `ಪುಷ್ಪ 2′ ಚಿತ್ರತಂಡ ಸೇರಿಕೊಂಡಿದ್ದಾರೆ. ಅಲ್ಲು ಅರ್ಜುನ್ ನಟನೆಯ ಈ ಸಿನಿಮಾದಲ್ಲಿ ಪ್ರಿಯಾಮಣಿ ಕಾಣಿಸಿಕೊಳ್ತಿದ್ದಾರೆ.

`ಪುಷ್ಪ’ ಸಿನಿಮಾ ಯಾರು ಊಹಿಸಿರದ ಮಟ್ಟಿಗೆ ಸಕ್ಸಸ್ ಕಂಡಿರುವ ಚಿತ್ರ. ಇಡೀ ದೇಶವೇ ಪುಷ್ಪ 2ಗಾಗಿ ಕಾಯ್ತಿದ್ದಾರೆ. ಹೀಗಿರುವಾಗ ಆಗಸ್ಟ್ನಲ್ಲಿ ಶೂಟಿಂಗ್ `ಪುಷ್ಪ 2′ ಸಿನಿಮಾ ಚಿತ್ರೀಕರಣ ಶುರುವಾಗಲಿದೆ. ಐಕಾನ್ ಸ್ಟಾರ್ ಸಿನಿಮಾಗೆ ಸೂಪರ್ ಸ್ಟಾರ್‌ಗಳ ಎಂಟ್ರಿ ಆಗುತ್ತಿದೆ. ಇತ್ತೀಚೆಗಷ್ಟೇ ವಿಜಯ್ ಸೇತುಪತಿ ಈ ಚಿತ್ರತಂಡ ಸೇರಿಕೊಂಡಿದ್ದರು. ಈಗ ಬಹುಭಾಷಾ ನಟಿ ಪ್ರಿಯಾಮಣಿ ಈ ಚಿತ್ರಕ್ಕೆ ಸಾಥ್ ನೀಡಲಿದ್ದಾರೆ. ಇದನ್ನೂ ಓದಿ:ಶ್ರದ್ಧಾ ಹೆಸರಿನ ಮುಂದಿರುವ ಈ ರಮಾ ಯಾರು?

ಕನ್ನಡ ಸೇರಿದಂತೆ ಬಹುಭಾಷಾ ಚಿತ್ರಗಳಲ್ಲಿ ಬ್ಯುಸಿಯಿರುವ ಬ್ಯೂಟಿ ಕ್ವೀನ್ ಪ್ರಿಯಾಮಣಿ ಸದ್ಯ `ಪುಷ್ಪ 2′ ಚಿತ್ರಕ್ಕೆ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ. ಚಿತ್ರದಲ್ಲಿ ಪವರ್‌ಫುಲ್ ಪಾತ್ರದಲ್ಲಿ ನಟಿ ಕಾಣಿಸಿಕೊಳ್ತಿದ್ದಾರೆ. ವಿಜಯ್ ಸೇತುಪತಿ ಅವರ ಪತ್ನಿಯ ಪಾತ್ರದಲ್ಲಿ ಪ್ರಿಯಾಮಣಿ ಬಣ್ಣ ಹಚ್ಚಲಿದ್ದಾರೆ. ವಿಜಯ್ ಈ ಚಿತ್ರದಲ್ಲಿ ಫಾರೆಸ್ಟ್ ಆಫೀಸರ್ ಪಾತ್ರದಲ್ಲಿ ನಟಿಸಲಿದ್ದಾರೆ. ಪುಷ್ಪ ಪಾರ್ಟ್ 2 ಚಿತ್ರದಲ್ಲಿ ದಿನದಿಂದ ದಿನಕ್ಕೆ ಕಲಾವಿದರ ದಂಡೇ ಸೇರ್ಪಡೆಯಾಗುತ್ತಿದೆ. ಈ ಸುದ್ದಿ ಕೇಳಿ ಫ್ಯಾನ್ಸ್ ಕೂಡ ಥ್ರಿಲ್ ಆಗಿದ್ದಾರೆ.

Live Tv

Leave a Reply

Your email address will not be published.

Back to top button