ಶಾರುಖ್‌ ಖಾನ್‌ ಜೊತೆ ಕನ್ನಡತಿ ಪ್ರಿಯಾಮಣಿ ರೊಮ್ಯಾನ್ಸ್

Public TV
1 Min Read
PRIYAMANI

ಹುಭಾಷಾ ನಟಿ, ಕನ್ನಡತಿ ಪ್ರಿಯಾಮಣಿ (Priyamani) ಅವರು ಮತ್ತೆ ಶಾರುಖ್ ಖಾನ್ (Sharukh Khan) ಜೊತೆ ನಟಿಸುವ ಬಗ್ಗೆ ಸಿಹಿಸುದ್ದಿ ನೀಡಿದ್ದಾರೆ. ಈ ಹಿಂದೆ ʻಚೆನ್ನೈ ಎಕ್ಸಪ್ರೆಸ್’ (Chennai Express) ಸಿನಿಮಾದಲ್ಲಿ ಸೊಂಟ ಬಳುಕಿಸಿದ್ದ ನಟಿ ಮತ್ತೆ ಶಾರುಖ್ ಜೊತೆ ನಟಿಸುವ ಬಿಗ್ ಚಾನ್ಸ್ ಗಿಟ್ಟಿಸಿಕೊಂಡಿದ್ದಾರೆ. ಈ ಬಗ್ಗೆ ಪ್ರಿಯಾಮಣಿ ರಿಯಾಕ್ಟ್ ಮಾಡಿದ್ದಾರೆ.

sharukh khan 3

ಪ್ಯಾನ್ ಇಂಡಿಯಾ ನಟಿಯಾಗಿ ಪ್ರಿಯಾಮಣಿ, ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಸದ್ಯ ಶಾರುಖ್ ನಟನೆಯ ‘ಜವಾನ್’ (Jawan) ಚಿತ್ರದಲ್ಲಿ ಪ್ರಿಯಾಮಣಿ ನಟಿಸುತ್ತಿದ್ದಾರೆ. ಈ ಬಗ್ಗೆ ನಟಿ ಕೂಡ ಖುಷಿಯಿಂದ ರಿಯಾಕ್ಟ್ ಮಾಡಿದ್ದಾರೆ.‌ ಇದನ್ನೂ ಓದಿ:ಮದುವೆಯಾಗಿ ಮೂರುವರೆ ತಿಂಗಳಿಗೆ ಗರ್ಭಿಣಿ: ಸ್ವರಾ ಭಾಸ್ಕರ್ ಸಿಕ್ಕಾಪಟ್ಟೆ ಟ್ರೋಲ್

priyamani 1

ಅಟ್ಲಿ ನಿರ್ದೇಶನದ ‘ಜವಾನ್’ ಚಿತ್ರದಲ್ಲಿ ಮಲ್ಟಿ ಸ್ಟಾರ್ಸ್ ನಟಿಸುತ್ತಿದ್ದಾರೆ. ಆ ಸಾಲಿಗೆ ಈಗ ಪ್ರಿಯಾಮಣಿ ಕೂಡ ಸೇರ್ಪಡೆಯಾಗಿದ್ದಾರೆ. ಈ ಹಿಂದೆ ಚೆನ್ನೈ ಎಕ್ಸ್‌ಪ್ರೆಸ್ ಸಿನಿಮಾದಲ್ಲಿ 1,2,3,4 ಎಂಬ ಹಾಡಿಗೆ ಶಾರುಖ್ ಜೊತೆ ಮಸ್ತ್ ಆಗಿ ಡ್ಯಾನ್ಸ್ ಮಾಡಿದ್ದರು. ಈಗ ಮತ್ತೆ ಶಾರುಖ್- ಪ್ರಿಯಾ ಒಟ್ಟಿಗೆ ನಟಿಸುತ್ತಿದ್ದಾರೆ. ಇದನ್ನೂ ಓದಿ:ಮತ್ತೆ ಕಿರುತೆರೆಗೆ ಮರಳಿದ ‘ಬಿಗ್‌ ಬಾಸ್‌’ ಚೈತ್ರಾ ಹಳ್ಳಿಕೇರಿ

priyamani

‘ಜವಾನ್’ ಚಿತ್ರದಲ್ಲಿ ಶಾರುಖ್ ಜೊತೆ ನಟಿಸುತ್ತಿದ್ದೇನೆ ಎಂಬ ಬಗ್ಗೆ ಖುಷಿಯಿದೆ. ಈ ಚಿತ್ರವನ್ನು ಜನ ಯಾವಾಗ ನೋಡ್ತಾರೋ ಅಂತಾ ನಾನು ಕಾಯ್ತಿದ್ದೀನಿ. ಶಾರುಖ್ ಖಾನ್ (Sharukh Khan) ಜೊತೆ ಕೆಲಸ ಮಾಡುವುದು ಮ್ಯಾಜಿಕಲ್ ಅನುಭವ. ಅವರು ನನ್ನನ್ನು ನೆನಪಿಟ್ಟುಕೊಂಡಿದ್ದಾರೆ ಎಂಬುದೇ ಖುಷಿಯ ವಿಚಾರ ಎಂದು ಮಾತನಾಡಿದ್ದಾರೆ.

ನಾನು ಸೆಟ್‌ಗೆ ಬರುವಾಗ ಅವರಿಗೆ ನಾನು ನೆನಪಿರುತ್ತೇನಾ ಎಂಬ ಗೊಂದಲವಿತ್ತು. ಅವರು ನೆನಪಿಟ್ಟುಕೊಂಡು ಮಾತನಾಡಿದ ರೀತಿ ಖುಷಿಯಾಯ್ತು. ಈ ಹಿಂದೆ ಸಿನಿಮಾವೊಂದಕ್ಕಾಗಿ ಕೇವಲ ಒಂದು ಸಾಂಗ್‌ನಲ್ಲಿ ಶಾರುಖ್ ಜೊತೆ ನಟಿಸಿದ್ದೇ. ಈಗ ಮತ್ತೆ ತೆರೆಹಂಚಿಕೊಳ್ತಿರೋದು ಖುಷಿ ಕೊಟ್ಟಿದೆ ಎಂದು ಪ್ರಿಯಾಮಣಿ ರಿಯಾಕ್ಟ್ ಮಾಡಿದ್ದಾರೆ. ಜವಾನ್‌ನಲ್ಲಿ ಪ್ರಿಯಾಮಣಿ ಪಾತ್ರ ಹೇಗಿರಲಿದೆ ಎಂಬುದರ ಬಗ್ಗೆ ನಟಿ ಗುಟ್ಟು ಬಿಟ್ಟು ಕೊಟ್ಟಿಲ್ಲ.

Share This Article