ಕನ್ನಡತಿ ಪ್ರಿಯಾಮಣಿ (Priyamani) ಇದೀಗ ಬಾಲಿವುಡ್ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಅರ್ಟಿಕಲ್ 370, ಮೈದಾನ್ ಸಿನಿಮಾದ ಸಕ್ಸಸ್ ನಂತರ ಇದೀಗ ತಮ್ಮ ವೈಯಕ್ತಿಕ ಬದುಕಿನ ಬಗ್ಗೆ ನಟಿ ಮಾತನಾಡಿದ್ದಾರೆ. ಟ್ರೋಲಿಂಗ್ ಮತ್ತು ನೆಗೆಟಿವ್ ಕಾಮೆಂಟ್‌ಗಳಿಂದ ಆದ ಪರಿಣಾಮದ ಬಗ್ಗೆ ಸಂದರ್ಶನವೊಂದರಲ್ಲಿ ಪ್ರಿಯಾಮಣಿ ಮೌನ ಮುರಿದಿದ್ದಾರೆ.
Advertisement
ಜನರ ಕಾಮೆಂಟ್‌ಗಳು ಕೇವಲ ನನಗೆ ಮಾತ್ರವಲ್ಲದೆ, ನನ್ನ ಕುಟುಂಬದ ಮೇಲೂ, ವಿಶೇಷವಾಗಿ ನನ್ನ ತಂದೆ, ತಾಯಿಯ ಮೇಲೆ ತುಂಬಾ ಪರಿಣಾಮ ಬೀರಿತ್ತು. ಆಗ ನಮಗಾಗಿದ್ದ ನೋವು ವಿವರಿಸಲು ಅಸಾಧ್ಯ ಎಂದು ಪ್ರಿಯಾಮಣಿ ಬೇಸರ ತೊಡಿಕೊಂಡಿದ್ದಾರೆ. ಆಗ ನನ್ನ ಪತಿ ನನ್ನ ಪರವಾಗಿ ಬಂಡೆಗಲ್ಲಿನಂತೆ ನಿಂತಿದ್ದರು. ಏನು ಬೇಕಾದರೂ ಆಗಲಿ, ಅವೆಲ್ಲವೂ ಮೊದಲು ನನಗೆ ಬರುವಂತೆ ನೋಡಿಕೊಳ್ಳುತ್ತೇನೆ. ಅದೆಂಥ ಸಂದರ್ಭದಲ್ಲೂ ನನ್ನ ಕೈ ಹಿಡಿದುಕೋ ಮತ್ತು ಪ್ರತಿ ಹೆಜ್ಜೆಯಲ್ಲೂ ನನ್ನ ಜೊತೆಯಾಗಿರು ಎಂದು ಪತಿ ಹೇಳಿದ್ದರು ಎಂದು ನಟಿ ಹೇಳಿಕೊಂಡಿದ್ದಾರೆ. ಇದನ್ನೂ ಓದಿ:ತೆಲುಗಿನ ‘ಕಣ್ಣಪ್ಪ’ ಚಿತ್ರತಂಡ ಸೇರಿಕೊಂಡ ಅಕ್ಷಯ್ ಕುಮಾರ್
Advertisement
Advertisement
ಮದುವೆಗೂ ಮುನ್ನವೇ ಸಾಕಷ್ಟು ಸವಾಲುಗಳನ್ನು ಎದುರಿಸಿದ್ದೆವು. ಈ ಬಗ್ಗೆ ಮುಸ್ತಫಾ ಜೊತೆ ಚರ್ಚಿಸಿದಾಗ, ನನ್ನೊಂದಿಗೆ ನಿಲ್ಲು ಮತ್ತು ನನ್ನನ್ನು ನಂಬು ಎಂದಷ್ಟೇ ಹೇಳಿದ್ದರು. ಆಗಲೇ ನಾವಿಬ್ಬರು ಕಷ್ಟಗಳ ಹಾದಿಯಲ್ಲಿ ಜೊತೆಯಾಗಿಯೇ ಸಾಗುವ ಮತ್ತು ಮುಂಬರುವ ಬಿರುಗಾಳಿಯನ್ನು ಧೈರ್ಯದಿಂದ ಎದುರಿಸುವ ನಿರ್ಧಾರ ಮಾಡಿದೆವು ಎಂದು ವಿವರಿಸಿದ್ದಾರೆ ಪ್ರಿಯಾಮಣಿ.
Advertisement
ಈ ರೀತಿ ಟ್ರೋಲ್ಸ್, ಟೀಕೆ ಕೇಳಿ ಬಂದಾಗ ನಾನು ಮುಂಬೈನಲ್ಲಿ ಇರಲಿಲ್ಲ. ಪತಿ ಜೊತೆ ಬೆಂಗಳೂರಿನಲ್ಲಿದ್ದೆ. ಆದರೆ ಎಲ್ಲವನ್ನು ನಿಭಾಯಿಸಿದೆವು. ನಮ್ಮ ಕುಟುಂಬದವರಿಗೆ ಹೆಚ್ಚಿಗೆ ತಲೆ ಕೆಡಿಸಿಕೊಳ್ಳಬೇಡಿ ಅಂತ ಹೇಳಿದ್ದೇವು. ದಿನದ ಕೊನೆಗೆ ಉಳಿಯುವುದು ನಾವೇ ಎಂದು ಹೇಳಿ ಸಮಾಧಾನ ಮಾಡಿದ್ದೆ. ಅವರ ಆಶೀರ್ವಾದ ಮತ್ತು ಪ್ರಾರ್ಥನೆಯೇ ನಮಗೆ ಶ್ರೀರಕ್ಷೆ ಎಂದು ಪ್ರಿಯಾಮಣಿ ಮಾತನಾಡಿದ್ದಾರೆ.
2017ರಲಿ ಮುಸ್ತಫಾ ರಾಜ್ (Mustafa Raj) ಜೊತೆ ಪ್ರಿಯಾಮಣಿ ಮದುವೆಯಾಗಿದ್ದಾರೆ. ನಟಿಯ ಸಿನಿಮಾ ಕೆರಿಯರ್‌ಗೆ ಮುಸ್ತಫಾ ರಾಜ್ ಬೆಂಬಲವಾಗಿ ನಿಂತಿದ್ದಾರೆ. ಅಂದಹಾಗೆ, ರಾಮ್, ಅಣ್ಣಾಬಾಂಡ್ ಸೇರಿದಂತೆ ಕನ್ನಡದ ಹಲವು ಸಿನಿಮಾಗಳಲ್ಲಿ ಪ್ರಿಯಾಮಣಿ ನಟಿಸಿದ್ದಾರೆ. ಸೌತ್ ಮತ್ತು ಬಾಲಿವುಡ್‌ನಲ್ಲಿ ನಟಿಗೆ ಭಾರೀ ಬೇಡಿಕೆ ಇದೆ.