ಪ್ರಿಯಾಮಣಿ (Priyamani) ಯಾರಿಗೆ ಗೊತ್ತಿಲ್ಲ. ಮದುವೆಯಾದರೂ (Wedding) ಅದೇ ಗ್ಲಾಮರ್ ಉಳಿಸಿಕೊಂಡಿದ್ದಾರೆ. ಜವಾನ್‌ನಲ್ಲಿ (Jawan) ಶಾರುಖ್ ಜೊತೆ ಮಿಂಚಿದ ಮೇಲೆ ಇನ್ನಷ್ಟು ಜೋಶ್ ಬಂದಿದೆ. ಈ ಹೊತ್ತಲ್ಲೇ ಪ್ರಿಯಾಮಣಿಯನ್ನು ಯಾರೋ ಆಂಟಿ ಎಂದಿದ್ದಾರೆ. ಇದಕ್ಕೆ ರೊಚ್ಚಿಗೆದ್ದ ಮಲಯಾಳಿ ಕುಟ್ಟಿ ಕೊಟ್ಟ ಖಡಕ್ ಉತ್ತರ ಏನು ಗೊತ್ತೆ? ಇದನ್ನೂ ಓದಿ:Bigg Boss Kannada 10: ಊರ ಹಬ್ಬಕ್ಕೆ ರೆಡಿಯಾದ ಕಿಚ್ಚ ಸುದೀಪ್
ಪ್ರಿಯಾಮಣಿ ಮೊದಲ ಚಿತ್ರಕ್ಕೆ ಶ್ರೇಷ್ಟ ನಟಿ ರಾಷ್ಟ್ರ ಪ್ರಶಸ್ತಿ (National Award) ಪಡೆದ ಹುಡುಗಿ. ಆಮೇಲೆ ಪಂಚಭಾಷೆಗಳಲ್ಲಿ ಮಿಂಚಿದರು. ಅಭಿನಯಕ್ಕೂ ಸೈ-ಗ್ಲಾಮರ್‌ಗೂ ಜೈ ಎಂದರು. ಅದೇ ಪ್ರಿಯಾಮಣಿ ಡಿವೋರ್ಸಿಯನ್ನು (Divorce) ಮದುವೆಯಾದರು. ಆಗ ವಿವಾದ ಎದ್ದಿತ್ತು. ಇದೀಗ ಜವಾನ್‌ನಲ್ಲಿ ಕಿಂಗ್‌ಖಾನ್ ಜೊತೆ ಹಬ್ಬ ಮಾಡಿದ್ದಾರೆ. ಯಾರೋ ಒಬ್ಬ ಇಂಥ ಪ್ರಿಯಾಗೆ ಆಂಟಿ ಎನ್ನಬೇಕಾ? ಯಾರಿಗೆ ತಾನೇ ಪಿತ್ತ ನೆತ್ತಿಗೇರಲ್ಲ? ಪ್ರಿಯಾಮಣಿ ಕೊಟ್ಟಿದ್ದು ಉತ್ತರ ಅಲ್ಲ.ಜ್ವಾಲಾಮುಖಿ ಸೂಪು.
ಏಯ್ ನಂಗ್ಯಾರೊ ಆಂಟಿ ಅನ್ನೋರು? ನಂಗಿನ್ನೂ 38 ವರ್ಷ. ಹಾಗಿದ್ರೂ ಹಾಟ್ ಹಾಟ್ ಆಗಿದ್ದೀನಿ ಬಾಯ್ ಮುಚ್ಕೊಳ್ಳಿ ಪ್ರಿಯಾ ಕೊಟ್ಟ ಉತ್ತರಕ್ಕೆ ನೆಟ್ಟಿಗರು ಶಬ್ಬಾಶ್ ಎಂದಿದ್ದಾರೆ. ಮೂವತ್ತೆಂಟು ವಯಸ್ಸು ಆದ್ರೂ ಕಮ್ಮಿ ಇಲ್ಲ ತೇಜಸ್ಸು. ನೀನೇ ನಮ್ಮ ಕಲ್ಲಂಗಡಿ ಜ್ಯೂಸು ಹೀಗೆ ಹೊಗಳಿ ಹೊಗಳಿ ಹೊನ್ನ ಶೂಲಕ್ಕೆ ಏರಿಸಿಲ್ಲ ನಗಿಸಿದ್ದಾರೆ. ಪ್ರಿಯಾ ಮಣಿಯಂತೆ ವಯಸ್ಸನ್ನು ಹೇಳುವ ನಾ ಆಂಟಿ ಅಲ್ರಪ್ಪಾ ಎನ್ನುವ ಗತ್ತು ಯಾರಿಗಿದೆ?
ಸದ್ಯ ‘ಜವಾನ್’ (Jawan) ಸಿನಿಮಾದಲ್ಲಿ ಶಾರುಖ್ (Sharukh Khan) ಜೊತೆ ಪ್ರಿಯಾಮಣಿ ನಟಿಸಿ ಸೈ ಎನಿಸಿಕೊಂಡಿದ್ದಾರೆ. ಸಿನಿಮಾ ಸಕ್ಸಸ್‌ಫುಲ್ ಪ್ರದರ್ಶನ ಕಾಣುತ್ತಿದೆ.