ಬೆಂಗಳೂರು: ಬಹುಭಾಷಾ ನಟಿ ಪ್ರಿಯಾಮಣಿ ತಮ್ಮ ಅಭಿಮಾನಿಗಳಿಗೆ ಸಿಹಿ ಸುದ್ದಿ ನೀಡಿದ್ದಾರೆ. ಪ್ರಿಯಾಮಣಿ ಇತ್ತೀಚಿಗೆ ಒಂದು ಟ್ವೀಟ್ ಮಾಡಿದ್ದಾರೆ. ಈ ಟ್ವೀಟ್ ನೋಡಿದ ಅಭಿಮಾನಿಗಳು ಪ್ರಿಯಾಮಣಿ ತಾಯಿ ಆಗುತ್ತಿದ್ದಾರೆ ಎಂದು ಅವರಿಗೆ ಶುಭ ಕೋರುತ್ತಿದ್ದಾರೆ.
“ನಾನು ಮತ್ತು ನನ್ನ ಪತಿ ಮುಸ್ತಾಫ್ ರಾಜ್ ಕಡೆಯಿಂದ ಸಮ್‍ಥಿಂಗ್ ಇಂಟ್ರೆಸ್ಟಿಂಗ್ ಹಾಗೂ ಫನ್ ಸಂಗತಿಯೊಂದು ನಿಮ್ಮ ಮುಂದೆ ಬರಲಿದೆ. ವೇಟ್ ಆಂಡ್ ವಾಚ್” ಎಂದು ಪ್ರಿಯಾಮಣಿ ತಮ್ಮ ಪತಿ ಜೊತೆಯಿರುವ ಫೋಟೋವನ್ನು ಹಾಕಿ ಟ್ವೀಟ್ ಮಾಡಿದ್ದಾರೆ.
ಪ್ರಿಯಾಮಣಿ ಅವರ ಟ್ವೀಟ್ ನೋಡಿ ಅವರು ತಾಯಿ ಆಗುತ್ತಿದ್ದಾರಾ ಎಂಬ ಪ್ರಶ್ನೆ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಅಭಿಮಾನಿಗಳು ಕೂಡ ಅವರ ಟ್ವೀಟ್ ನೋಡಿ ಪ್ರಿಯಾಮಣಿ ಅಮ್ಮ ಆಗುತ್ತಿದ್ದಾರೆ ಎಂದು ತಿಳಿದು ಅವರಿಗೆ ಶುಭ ಕೋರುತ್ತಿದ್ದಾರೆ.
https://twitter.com/priyamani6/status/1023587440018243590
ಪ್ರಿಯಾಮಣಿ 2017 ಅಗಸ್ಟ್ 23ರಂದು ಮುಸ್ತಾಫ್ ರಾಜ್ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. ಈಗ ಈ ಟ್ವೀಟ್ ನೋಡಿ ಅಭಿಮಾನಿಗಳು ಪ್ರಿಯಾಮಣಿಗೆ ರೀ-ಟ್ವೀಟ್ ಮಾಡುವ ಮೂಲಕ ಜೂನಿಯರ್ ಪ್ರಿಯಾಮಣಿ ಬರುತ್ತಿರಬಹುದು ಎಂದು ಒಬ್ಬರು ಟ್ವೀಟ್ ಮಾಡಿದ್ದರೆ, ಮತ್ತೊಬ್ಬರು ಚೋಟಾ ಪ್ರಿಯಾಮಣಿ ಎಂದು ಟ್ವೀಟ್ ಮಾಡಿದ್ದಾರೆ.
ಇತ್ತ ಪ್ರಿಯಾಮಣಿ ಟ್ವೀಟ್‍ಗೆ ನಟಿ ಪರೂಲ್ ಯಾದವ್ ಸಹ ಮಗು ಐಸ್ ಕ್ರೀಂ ತಿನ್ನುವ ಜಿಫ್ ಹಾಕುವ ಮೂಲಕ ಶುಭಾಶಯ ಕೋರಿದ್ದಾರೆ. ಪರೂಲ್ ಟ್ವೀಟ್‍ಗೆ ಪ್ರತಿಕ್ರಿಯಿಸಿರುವ ಪ್ರಿಯಾಮಣಿ ಲವ್ ಸೂಚಕದ ಎಮೋಜಿ ಹಾಕಿ ಉತ್ತರಿಸಿದ್ದಾರೆ. ಸದ್ಯ ಪ್ರಿಯಾಮಣಿ ಈ ವಿಷಯದ ಬಗ್ಗೆ ಯಾವುದೇ ಅಧಿಕೃತ ಮಾಹಿತಿ ನೀಡಿಲ್ಲ. ಆದರೆ ಆ ಟ್ವೀಟ್ ನೋಡಿದ ಅಭಿಮಾನಿಗಳು ಪ್ರಿಯಾಮಣಿ ತಾಯಿ ಆಗುತ್ತಿದ್ದಾರೆ ಎಂದು ತಿಳಿದು ಶುಭಾಶಯಗಳ ಮಹಾಪೂರ ಹರಿಸುತ್ತಿದ್ದಾರೆ. ಸದ್ಯ ಪ್ರಿಯಾಮಣಿ ಅವರ ಸ್ಪೆಷಲ್ ಸುದ್ದಿ ಏನು ಎಂಬುದು ಕಾದು ನೋಡಬೇಕಿದೆ.
— Parul Yadav (@TheParulYadav) July 29, 2018