ಕೃಷಿ ಸಚಿವ, ನಟ ಬಿ.ಸಿ. ಪಾಟೀಲ್ (B.C. Patil) ಈ ಬಾರಿಯೂ ಚುನಾವಣೆಯಲ್ಲಿ ಗೆಲ್ಲುತ್ತಾರೆ ಎಂದು ನಟಿ ಪ್ರೇಮಾ (Prema) ಭವಿಷ್ಯ ನುಡಿದಿದ್ದಾರೆ. ಹಿರೇಕೆರೂರಿನಲ್ಲಿ (Hirekerur) ನಡೆದ ಕಾರ್ಯಕ್ರಮದಲ್ಲಿ ಭಾಗಿಯಾಗಲು ಬಂದಿದ್ದ ಅವರು ಬಿ.ಸಿ. ಪಾಟೀಲ್ ಅವರ ಮನೆಯಲ್ಲೇ ಮಾಧ್ಯಮಗಳ ಜೊತೆ ಮಾತನಾಡಿದ್ದಾರೆ. ಪಾಟೀಲರು ಈ ಕ್ಷೇತ್ರದಲ್ಲಿ ಒಳ್ಳೆಯ ಕೆಲಸ ಮಾಡಿದ್ದಾರೆ. ಹಾಗಾಗಿ ಮತ್ತೊಮ್ಮೆ ಅವರು ಆಯ್ಕೆಯಾಗುತ್ತಾರೆ ಎಂದಿದ್ದಾರೆ.
‘ಕೌರವ’ (Kaurava) ಸಿನಿಮಾದಲ್ಲಿ ಬಿ.ಸಿ ಪಾಟೀಲ್ ಮತ್ತು ಪ್ರೇಮಾ ಒಟ್ಟಾಗಿ ನಟಿಸಿದ್ದಾರೆ. ಈ ಸಿನಿಮಾದ ಮೂಲಕ ಈ ಜೋಡಿ ಕೂಡ ಫೇಮಸ್ ಆಗಿತ್ತು. ಕೌರವ ಜೋಡಿ ಎಂದು ಈಗಲೂ ಗುರುತಿಸುವಷ್ಟು ಆ ಸಿನಿಮಾ ನೋಡುಗನ ಮೇಲೆ ಪ್ರಭಾವ ಬೀರಿತ್ತು. ಈ ಬಾಂಧವ್ಯದ ಕಾರಣಕ್ಕಾಗಿ ಪ್ರೇಮಾ ಹಿರೇಕೆರೂರಿಗೆ ಆಗಮಿಸಿ, ಪಾಟೀಲ್ ಪರವಾಗಿ ಮಾತನಾಡಿದ್ದಾರೆ. ಇದನ್ನೂ ಓದಿ: ಪತಿ ದುಡ್ಡು ವೇಸ್ಟ್ ಮಾಡುತ್ತೀರಾ ಎಂದವರಿಗೆ ನಿವೇದಿತಾ ಗೌಡ ಖಡಕ್ ಉತ್ತರ
- Advertisement
- Advertisement
ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ‘ಬಿ.ಸಿ.ಪಾಟೀಲರು ಫೋನ್ ಮಾಡಿದ್ದರು. ನಮ್ಮ ತಂದೆ ನಿಧನರಾಗಿದ್ದಾಗ ಅವರು ಬಂದಿದ್ದರು. ಹೀಗಾಗಿ ಅವರ ಮೇಲಿನ ಗೌರವದಿಂದಾಗಿ ನಾನು ಬಂದಿದ್ದೇನೆ. ನನಗೆ ರಾಜಕೀಯದ ಬಗ್ಗೆ ಗೊತ್ತಿಲ್ಲ. ಅವರು ಕರೆದಿದ್ದರು ಅನ್ನುವ ಒಂದೇ ಒಂದು ಕಾರಣಕ್ಕಾಗಿ ಬಂದಿದ್ದೇನೆ ಅಷ್ಟೇ’ ಎಂದು ಅವರು ಮಾತನಾಡಿದರು.
ಬಿ.ಸಿ ಪಾಟೀಲ್ ರ ಪರವಾಗಿ ಪ್ರಚಾರ ಮಾಡಲು ಬರುತ್ತೀರಾ ಎನ್ನುವ ಪ್ರಶ್ನೆಗೆ, ‘ಪ್ರಚಾರದ ಬಗ್ಗೆ ನನಗೇನೂ ಗೊತ್ತಿಲ್ಲ. ನಾನು ಯಾವಾಗಲೂ ರಾಜಕೀಯದಿಂದ ದೂರ. ಪಾಟೀಲ್ ಅವರ ಜೊತೆ ಒಳ್ಳೆಯ ಬಾಂಧವ್ಯವಿದೆ. ಅದೇ ನನ್ನನ್ನು ಇಲ್ಲಿಗೆ ಕರೆತಂದಿದೆ’ ಎಂದಷ್ಟೇ ಪ್ರೇಮಾ ಹೇಳಿದರು.