ನಿಮಗೆ ನಾಚಿಕೆಯಾಗಬೇಕು – ಕೇರಳ ಕಾಂಗ್ರೆಸ್‌ ವಿರುದ್ಧ ಪ್ರೀತಿ ಝಿಂಟಾ ಕೆಂಡಾಮಂಡಲ

Public TV
3 Min Read
Preity Zinta 2

ನವದೆಹಲಿ: ನಿಮಗೆ ನಾಚಿಕೆಯಾಗಬೇಕು ಎಂದು ಬಾಲಿವುಡ್‌ ನಟಿ ಪ್ರೀತಿ ಝಿಂಟಾ (Preity Zinta) ಕೇರಳ ಕಾಂಗ್ರೆಸ್‌ (Kerala Congress) ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಸಾಮಾಜಿಕ ಜಾಲತಾಣದಲ್ಲಿ ಕೇರಳ ಕಾಂಗ್ರೆಸ್‌ ನ್ಯೂ ಇಂಡಿಯಾ ಕೋಆಪರೇಟಿವ್‌ ಬ್ಯಾಂಕ್‌ (New India Cooperative Bank) ಅಕ್ರಮದ ವಿಚಾರವನ್ನು ಪ್ರಸ್ತಾಪಿಸಿ ಪ್ರೀತಿ ಝಿಂಟಾ ವಿರುದ್ಧ ಗಂಭೀರ ಆರೋಪ ಮಾಡಿತ್ತು. ಈ ಆರೋಪಕ್ಕೆ ಪ್ರೀತಿ ಝಿಂಟಾ ಗರಂ ಆಗಿ ಕಾಂಗ್ರೆಸ್‌ ಪಕ್ಷವನ್ನು ತರಾಟೆಗೆ ತೆಗದುಕೊಂಡಿದ್ದಾರೆ.

ಕೇರಳ ಕಾಂಗ್ರೆಸ್‌ ಹೇಳಿದ್ದೇನು?
ಪ್ರೀತಿ ಝಿಂಟಾ ತಮ್ಮ ಸಾಮಾಜಿಕ ಮಾಧ್ಯಮ ಖಾತೆಗಳನ್ನು ಬಿಜೆಪಿಗೆ ನೀಡಿದ್ದಾರೆ. ಪ್ರೀತಿ ಝಿಂಟಾ ನ್ಯೂ ಇಂಡಿಯಾ ಕೋಆಪರೇಟಿವ್‌ ಬ್ಯಾಂಕ್‌ನಿಂದ 18 ಕೋಟಿ ರೂ. ಸಾಲ ಮಾಡಿದ್ದರು. ಈ ಸಾಲವನ್ನು ಮನ್ನಾ ಮಾಡಲಾಗಿದೆ. ಕಳೆದ ವಾರ ಬ್ಯಾಂಕ್‌ ದಿವಾಳಿಯಾಗಿದ್ದು ಠೇವಣಿದಾರರು ತಮ್ಮ ಹಣಕ್ಕಾಗಿ ಬೀದಿಗಿಳಿದಿದ್ದಾರೆ ಎಂದು ಪೋಸ್ಟ್‌ ಮಾಡಿತ್ತು.  ಇದನ್ನೂ ಓದಿ: 37 ವರ್ಷಗಳ ದಾಂಪತ್ಯಕ್ಕೆ ಅಂತ್ಯ ಹಾಡಿದ ನಟ ಗೋವಿಂದ, ಸುನೀತಾ ಅಹುಜಾ?

 

ಪ್ರೀತಿ ಝಿಂಟಾ ಹೇಳಿದ್ದೇನು?
ನನ್ನ ಸಾಮಾಜಿಕ ಮಾಧ್ಯಮ ಖಾತೆಗಳನ್ನು ನಾನೇ ನಿರ್ವಹಿಸುತ್ತೇನೆ. ನಕಲಿ ಸುದ್ದಿಗಳನ್ನು ಪ್ರಚಾರ ಮಾಡಿದ್ದಕ್ಕಾಗಿ ನಿಮಗೆ ನಾಚಿಕೆಯಾಗಬೇಕು ನನಗಾಗಿ ಯಾವುದೇ ಸಾಲ ಮನ್ನಾ ಮಾಡಿಲ್ಲ. ಒಂದು ರಾಜಕೀಯ ಪಕ್ಷ ಅಥವಾ ಅವರ ಪ್ರತಿನಿಧಿಯು ನಕಲಿ ಸುದ್ದಿಗಳನ್ನು ಪ್ರಚಾರ ಮಾಡುತ್ತಿರುವುದು ಮತ್ತು ನನ್ನ ಹೆಸರು ಮತ್ತು ಚಿತ್ರಗಳನ್ನು ಬಳಸಿಕೊಂಡು ಕೆಟ್ಟ ಗಾಸಿಪ್ ತೊಡಗಿರುವುದು ನನಗೆ ಆಘಾತವನ್ನುಂಟು ಮಾಡಿದೆ. ತೆಗೆದುಕೊಂಡ ಸಾಲವನ್ನು 10 ವರ್ಷಗಳ ಹಿಂದೆ ಸಂಪೂರ್ಣವಾಗಿ ಮರುಪಾವತಿಸಲಾಗಿದೆ ಎಂದು ಹೇಳಿದ್ದರು. ಇದನ್ನೂ ಓದಿ: ಕೋರ್ಟ್ ಹಾಲ್‌ನಲ್ಲಿ ಪವಿತ್ರಾ, ದರ್ಶನ್ ದೂರ ದೂರಾ – ಕಣ್ಣೀರಿಡುತ್ತ ತೆರಳಿದ ಗೆಳತಿ!

ಪ್ರೀತಿ ಝಿಂಟಾ ಸ್ಪಷ್ಟನೆಗೆ ಕೇರಳ ಕಾಂಗ್ರೆಸ್‌ ದೀರ್ಘ ಪೋಸ್ಟ್‌ ಮಾಡಿ ಪ್ರತ್ಯುತ್ತರ ನೀಡಿದೆ. ಮಾಧ್ಯಮವೊಂದರ ವರದಿಯನ್ನು ಉಲ್ಲೇಖಿಸಿ ಈ ಪೋಸ್ಟ್‌ ಮಾಡಲಾಗಿದೆ. ಕುಖ್ಯಾತ ಐಟಿ ಸೆಲ್‌ಗೆ ತಮ್ಮ ಖಾತೆಯನ್ನು ಹಸ್ತಾಂತರಿಸಿದ ಇತರ ಸೆಲೆಬ್ರಿಟಿಗಳಿಗಿಂತ ಭಿನ್ನವಾಗಿ ನೀವು ನಿಮ್ಮ ಸ್ವಂತ ಖಾತೆಯನ್ನು ನಿರ್ವಹಿಸುತ್ತಿದ್ದೀರಿ ಎಂದು ತಿಳಿದುಕೊಳ್ಳಲು ಸಂತೋಷವಾಯಿತು ಎಂದು ಹೇಳಿದೆ.

 

Share This Article