ನಟಿ ಪ್ರಣೀತಾ ಗಂಡನ ಪಾದಪೂಜೆ : ಸಮರ್ಥಿಸಿಕೊಂಡ ನಟಿ

Public TV
2 Min Read
pranitha subhash 1

ಳೆದ ಬಾರಿಯಂತೆ ಈ ಸಲವೂ ಭೀಮನ ಅಮವಾಸ್ಯೆ ದಿನ ಗಂಡನ ಪಾದಪೂಜೆ (Padapooje) ಮಾಡಿ ಫೋಟೋ ಶೇರ್ ಮಾಡಿದ್ದರು ನಟಿ ಪ್ರಣೀತಾ ಸುಭಾಷ್ (Pranitha Subhash). ಈ ಅಮವಾಸ್ಯೆಯ ಹಿನ್ನೆಲೆ, ಗಂಡನ ಪಾದಪೂಜೆ ಏಕೆ ಮಾಡಬೇಕು ಎಂಬಿತ್ಯಾದಿ ವಿವರಗಳನ್ನು ತಿಳಿಸಿದ್ದರು. ನಮ್ಮ ಸಂಸ್ಕೃತಿ, ಆಚಾರ ವಿಚಾರಗಳನ್ನು ಮರೆಯಬಾರದು ಎಂದು ಬೋಧನೆ ಕೂಡ ಮಾಡಿದ್ದರು.

pranitha subhash

ಕಳೆದ ಸಲವೂ ಕೆಲವರು ಈ ಪಾದಪೂಜೆಯ ಬಗ್ಗೆ ತಕರಾರು ತೆಗೆದಿದ್ದರು. ಈ ಬಾರಿಯೂ ಹಲವರು ಮತ್ತೆ ಪ್ರತಿರೋಧ ವ್ಯಕ್ತ ಪಡಿಸಿದ್ದಾರೆ. ಈ ಕುರಿತು ಪ್ರಣೀತಾ, ತಕ್ಕದಾದ ಉತ್ತರವನ್ನೇ ನೀಡಿದ್ದಾರೆ. ‘ನಾನು ನನ್ನ ಗಂಡನ ಪಾದಪೂಜೆ ಮಾಡಿದ್ದೇನೆ. ನಿಮಗೇನು ಸಮಸ್ಯೆ? ನೀವು ಏನೇ ಕಾಮೆಂಟ್ ಮಾಡಿದರೂ ನಾನು ತಲೆಕೆಡಿಸಿಕೊಳ್ಳುವುದಿಲ್ಲ. ನಾನು ನನ್ನ ಸಂಸ್ಕೃತಿಯಲ್ಲಿ ಬದುಕುತ್ತಿರುವೆ’ ಎಂದು ತಿರುಗೇಟು ನೀಡಿದ್ದಾರೆ. ಇದನ್ನೂ ಓದಿ:ಜ್ಯೂ.ಎನ್‌ಟಿಆರ್ ಸಿನಿಮಾದಲ್ಲಿ ಐಕಾನ್ ಸ್ಟಾರ್ ಪುತ್ರಿ?

pranitha subhash

ಜೊತೆಗೆ ಸನಾತನ ಧರ್ಮದಲ್ಲಿ ಒಂದೊಂದು ಆಚರಣೆಗೂ ಒಂದೊಂದು ಮಹತ್ವವಿದೆ ಎಂದಿರುವ ಪ್ರಣೀತಾ, ಎಲ್ಲ ಆಚರಣೆಗಳಿಗೂ ಅದರ ಹಿಂದೆ ಒಳಿತನ್ನು ಬಯಸುವುದೇ ಆಗಿದೆ ಎಂದಿದ್ದಾರೆ. ಎಲ್ಲದಕ್ಕೂ ಪಿತೃಪ್ರಧಾನ ವ್ಯವಸ್ಥೆಯನ್ನು ಎಳೆದು ತರಬೇಡಿ ಎಂದು ಕಿವಿ ಮಾತೂ ಹೇಳಿದ್ದಾರೆ. ಎಷ್ಟೋ ಬಾರಿ ಸ್ತ್ರಿ ದೇವತೆಗಳನ್ನೂ ನಾವು ಪೂಜಿಸುತ್ತವೆ. ಅದನ್ನು ನೆನಪಿಡಬೇಕು ಎನ್ನುವುದು ಪ್ರಣೀತಾ ವಾದ.

Pranita Subhash

ಕನ್ನಡ ಸಿನಿಮಾ ಮೂಲಕ ಸಿನಿ ರಂಗಕ್ಕ ಎಂಟ್ರಿ ಕೊಟ್ಟ ಪ್ರಣಿತಾ, ಹಿಂದಿ,ತೆಲುಗು, ತಮಿಳು ಸೇರಿದಂತೆ ಸ್ಟಾರ್ ನಟರ ಜೊತೆ ಪ್ರಣಿತಾ ನಟಿಸಿದ್ದಾರೆ. ಡಿಮ್ಯಾಂಡ್ ಇರುವಾಗಲೇ ಉದ್ಯಮಿ ನಿತಿನ್ ಜೊತೆ ಲಾಕ್‌ಡೌನ್‌ನಲ್ಲಿ ಮದುವೆಯಾದರು. ಹಲವು ವರ್ಷಗಳ ಪ್ರೀತಿಗೆ ಗುರುಹಿರಿಯರ ಸಮ್ಮತಿ ಪಡೆದು ದಾಂಪತ್ಯ (Wedding) ಜೀವನಕ್ಕೆ ನಟಿ ಕಾಲಿಟ್ಟರು. ಇವರ ಪ್ರೀತಿಗೆ ಸಾಕ್ಷಿಯಾಗಿ ಈಗ ಮುದ್ದಾದ ಮಗಳಿದ್ದಾಳೆ.

 

ನಿನ್ನೆ ಬೆಳಿಗ್ಗೆ ಭೀಮನ ಅಮಾವ್ಯಾಸೆಯಂದು(Bheemana Amavasye) ಪತಿ ನಿತಿನ್‌ಗೆ(Nithin) ಪಾದ ಪೂಜೆ ಮಾಡಿರುವ ಫೋಟೋವನ್ನ ನಟಿ ಶೇರ್ ಮಾಡಿದ್ದರು. ಸನಾತನ ಧರ್ಮದಲ್ಲಿ ಭೀಮನ ಅಮಾವ್ಯಾಸೆಗೆ ಹೆಚ್ಚಿನ ಮಹತ್ವವಿದೆ ಎಂದು ಎಂದಿದ್ದರು. ದೇವಿಯರನ್ನು ಸಮಾನವಾಗಿ ಪೂಜಿಸುವ ಕೆಲವು ನಂಬಿಕೆಗಳಲ್ಲಿ ಇದು ಒಂದಾಗಿದೆ ಎಂದು ನಟಿ ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ್ದರು. ಈ ಪೋಸ್ಟಕ್ ಹಲವರು ನೆಗೆಟಿವ್ ಕಾಮೆಂಟ್ ಮಾಡಿದ್ದರು. ಇಂತಹ ಗುಲಾಮಗಿರಿ ಬೇಡ ಎಂದು ಕಿವಿಮಾತು ಹೇಳಿದ್ದರು.

Web Stories

Share This Article