ಸ್ಯಾಂಡಲ್‌ವುಡ್ ನಟಿ ಪ್ರಣಿತಾ ಸುಭಾಷ್ ಸೀಮಂತದ ಸಂಭ್ರಮದ ಖುಷಿಯಲ್ಲಿದ್ದಾರೆ. ಈ ವೇಳೆ ತಮ್ಮ ಸೀಮಂತ ಶಾಸ್ತ್ರದ ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಸದ್ಯ ಪ್ರಣಿತಾ ಸೀಮಂತದ ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ಭಾರೀ ವೈರಲ್ ಆಗುತ್ತಿದೆ.
Advertisement
ನಟಿ ಪ್ರಣಿತಾ `ಪೊರ್ಕಿ’ ಚಿತ್ರದ ಮೂಲಕ ಬಣ್ಣದ ಲೋಕಕ್ಕೆ ಪರಿಚಿತರಾದ್ರು. ನಂತರ ಕನ್ನಡ ಜತೆ ತೆಲುಗು, ಹಿಂದಿ ಸೇರಿದಂತೆ ಸಾಕಷ್ಟು ಸಿನಿಮಾಗಳಲ್ಲಿ ನಟಿಸಿ ಸೈ ಎನಿಸಿಕೊಂಡ್ರು. ಕಳೆದ ವರ್ಷ ಲಾಕ್‌ಡೌನ್‌ನಲ್ಲಿ ಗುರು ಹಿರಿಯರ ಸಮ್ಮುಖದಲ್ಲಿ ಉದ್ಯಮಿ ನಿತಿನ್ ರಾಜು ಜತೆ ಹಸೆಮಣೆ ಏರಿದ್ರು.ಇತ್ತೀಚೆಗಷ್ಟೇ ತಾವು ತಾಯಿಯಾಗುತ್ತಿರುವ ಕುರಿತು ವಿಶೇಷ ಫೋಟೋಶೂಟ್ ಮೂಲಕ ಅಭಿಮಾನಿಗಳಿಗೆ ಗುಡ್ ನ್ಯೂಸ್ ತಿಳಿಸಿದ್ರು. ಈಗ ಸೀಮಂತದ ಫೋಟೋಗಳನ್ನು ನಟಿ ಪ್ರಣಿತಾ ತಮ್ಮ ಇನ್ಸ್ಟಾಗ್ರಾಂ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.
Advertisement
Advertisement
ನಟಿ ಪ್ರಣಿತಾ ಕನ್ನಡ, ತೆಲುಗು, ತಮಿಳು ಮತ್ತು ಹಿಂದಿ ಚಿತ್ರರಂಗದಲ್ಲೂ ಆಕ್ಟೀವ್ ಆಗಿದ್ರು. ಬೇಡಿಕೆಯಲ್ಲಿರುವಾಗಲೇ ಕಳೆದ ವರ್ಷ ಮೇನಲ್ಲಿ ನಿತಿನ್ ರಾಜು ಜೊತೆ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದರು. ಇಬ್ಬರು ಪರಸ್ಪರ ಪ್ರೀತಿಸಿ ಗುರು ಹಿರಿಯರ ಒಪ್ಪಿಗೆಯ ಮೇರೆಗೆ ಹಸೆಮಣೆ ಏರಿದ್ದಾರೆ. ಇದೀಗ ಹಳದಿ ಬಣ್ಣದ ಸೀರೆಯುಟ್ಟು ಮಿರ ಮಿರ ಅಂತಾ ಸೀಮಂತದ ಶಾಸ್ತ್ರದಲ್ಲಿ ಪ್ರಣಿತಾ ಮಿಂಚಿದ್ದಾರೆ.
Advertisement
View this post on Instagram
ಕುಟುಂಬಸ್ಥರ ಮತ್ತು ಆಪ್ತರ ಸಮ್ಮುಖದಲ್ಲಿ ಸೀಮಂತ ಶಾಸ್ತ್ರ ನೆರವೇರಿದ್ದು, ಪ್ರಣಿತಾ ಕೆಂಪು ಕಲರ್ ಬ್ಲೋಸ್ ಜತೆ ಹಳದಿ ಬಣ್ಣದ ಸೀರೆಯುಟ್ಟು ತುಂಬಾ ಮುದ್ದಾಗಿ ಕಾಣಿಸಿಕೊಂಡಿದ್ದಾರೆ. ನೆಚ್ಚಿನ ನಟಿಯ ಸೀಮಂತದ ಸಂಭ್ರಮದ ಖುಷಿ ನೋಡಿ ಅಭಿಮಾನಿಗಳು ಖುಷಿಪಟ್ಟಿದ್ದಾರೆ. ಸದ್ಯ ಈ ಫೋಟೋಗಳು ಭಾರೀ ವೈರಲ್ ಆಗುತ್ತಿದೆ.