ಭೀಮನ ಅಮಾವ್ಯಾಸೆಗೆ ಪತಿಯ ಪಾದ ಪೂಜೆ ಮಾಡಿದ ಪ್ರಣಿತಾ

Public TV
1 Min Read
pranitha subhash

ಸ್ಯಾಂಡಲ್‌ವುಡ್ ನಟಿ ಪ್ರಣಿತಾ (Pranitha) ಅವರು ಬಹುಭಾಷಾ ನಾಯಕಿಯಾಗಿ ಮಿಂಚ್ತಿದ್ದಾರೆ. ಮದುವೆಯಾಗಿ, ಮಗುಯಾದ್ಮೇಲೆ ಮತ್ತೆ ಮಲಯಾಳಂ ಸಿನಿಮಾ ಮೂಲಕ ‘ಪೊರ್ಕಿ’ (Porki) ಬ್ಯೂಟಿ ನಟನೆಗೆ ಕಮ್‌ಬ್ಯಾಕ್ ಆಗುತ್ತಿದ್ದಾರೆ. ಶುಭ ಸೋಮವಾರ ಇಂದು (ಜುಲೈ 17) ರಂದು ಭೀಮನ ಅಮಾವ್ಯಾಸೆಗೆ ಪ್ರಣಿತಾ, ಪತಿ ಪಾದಾ ಪೂಜೆ ಮಾಡಿದ್ದಾರೆ. ಪೂಜೆಯ ಫೋಟೋವನ್ನು ನಟಿ ಸಾಮಾಜಿಕ ಜಾಲತಾಣದಲ್ಲಿ ನಟಿ ಶೇರ್ ಮಾಡಿದ್ದಾರೆ.

pranitha subhash

ಕನ್ನಡ ಸಿನಿಮಾ ಮೂಲಕ ಸಿನಿ ರಂಗಕ್ಕ ಎಂಟ್ರಿ ಕೊಟ್ಟ ಪ್ರಣಿತಾ, ಹಿಂದಿ,ತೆಲುಗು, ತಮಿಳು ಸೇರಿದಂತೆ ಸ್ಟಾರ್ ನಟರ ಜೊತೆ ಪ್ರಣಿತಾ ನಟಿಸಿದ್ದಾರೆ. ಡಿಮ್ಯಾಂಡ್ ಇರುವಾಗಲೇ ಉದ್ಯಮಿ ನಿತಿನ್ ಜೊತೆ ಲಾಕ್‌ಡೌನ್‌ನಲ್ಲಿ ಮದುವೆಯಾದರು. ಹಲವು ವರ್ಷಗಳ ಪ್ರೀತಿಗೆ ಗುರುಹಿರಿಯರ ಸಮ್ಮತಿ ಪಡೆದು ದಾಂಪತ್ಯ (Wedding) ಜೀವನಕ್ಕೆ ನಟಿ ಕಾಲಿಟ್ಟರು. ಇವರ ಪ್ರೀತಿಗೆ ಸಾಕ್ಷಿಯಾಗಿ ಈಗ ಮುದ್ದಾದ ಮಗಳಿದ್ದಾರೆ. ಇದನ್ನೂ ಓದಿ:ಜ್ಯೂ.ಎನ್‌ಟಿಆರ್ ಸಿನಿಮಾದಲ್ಲಿ ಐಕಾನ್ ಸ್ಟಾರ್ ಪುತ್ರಿ?

Pranitha Subhash oolala

ಇಂದು ಬೆಳಿಗ್ಗೆ ಭೀಮನ ಅಮಾವ್ಯಾಸೆಯಂದು(Bheemana Amavasye) ಪತಿ ನಿತಿನ್‌ಗೆ(Nithin) ಪಾದ ಪೂಜೆ ಮಾಡಿರುವ ಫೋಟೋವನ್ನ ನಟಿ ಶೇರ್ ಮಾಡಿದ್ದಾರೆ. ಸನಾತನ ಧರ್ಮದಲ್ಲಿ ಭೀಮನ ಅಮಾವ್ಯಾಸೆಗೆ ಹೆಚ್ಚಿನ ಮಹತ್ವವಿದೆ ಎಂದು ಎಂದಿದ್ದಾರೆ. ದೇವಿಯರನ್ನು ಸಮಾನವಾಗಿ ಪೂಜಿಸುವ ಕೆಲವು ನಂಬಿಕೆಗಳಲ್ಲಿ ಇದು ಒಂದಾಗಿದೆ ಎಂದು ನಟಿ ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ್ದಾರೆ.

pranitha subhash 1

‘ಪೊರ್ಕಿ’ ಸಿನಿಮಾದ ಮೂಲಕ ಸ್ಯಾಂಡಲ್‌ವುಡ್‌ಗೆ ಪರಿಚಿತರಾದ ಪ್ರಣಿತಾ, ಜರಾಸಂದ, ಮಿ.420, ಅಂಗಾರಕ ಸೇರಿದಂತೆ ಹಲವು ಕನ್ನಡ ಸಿನಿಮಾದಲ್ಲಿ ಪ್ರಣಿತಾ ನಟಿಸಿದ್ದಾರೆ. ಬಳಿಕ ತೆಲುಗು- ತಮಿಳು ಸಿನಿಮಾರಂಗದಲ್ಲಿ ನಟಿ ಬ್ಯುಸಿಯಾದರು. ಮದುವೆಗೂ ಮುನ್ನ ಬಾಲಿವುಡ್‌ನ ಹಂಗಾಮ 2, ಭುಜ್ ಸಿನಿಮಾದಲ್ಲಿ ಪೊರ್ಕಿ ನಾಯಕಿ ಅಭಿನಯಿಸಿದ್ದರು.

ಇದೀಗ ಪ್ರಣಿತಾ, ನಟ ದಿಲೀಪ್‌ಗೆ ನಾಯಕಿಯಾಗುವ ಮೂಲಕ ಮಾಲಿವುಡ್‌ಗೆ (Mollywood) ಎಂಟ್ರಿ ಕೊಟ್ಟಿದ್ದಾರೆ. ದಿಲೀಪ್‌ಗೆ ಪ್ರಣಿತಾ ಮತ್ತು ತಮನ್ನಾ ನಾಯಕಿಯರಾಗಿದ್ದಾರೆ. ಪ್ರಣಿತಾ ಭಾಗದ ಚಿತ್ರೀಕರಣ ಕೇರಳದಲ್ಲಿ ನಡೆದಿದೆ. ಶೂಟಿಂಗ್‌ಗೂ ಹಾಜರಾಗಿ ಬಂದಿದ್ದಾರೆ.

[web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

Share This Article