ಬಹುಭಾಷಾ ನಟಿ ಪ್ರಣಿತಾ ಸುಭಾಷ್ (Pranitha Subhash) ಸದಾ ಒಂದಲ್ಲಾ ಒಂದು ಸುದ್ದಿ ಮೂಲಕ ಸೌಂಡ್ ಮಾಡ್ತಿರುತ್ತಾರೆ. ಇದೀಗ ಮುದ್ದು ಮಗಳ ಫೋಟೋ ಹಾಕಿ, ಮುಖ ತೋರಿಸದೇ ಇರೋದಕ್ಕೆ ನಟಿಗೆ ನೆಟ್ಟಿಗರು ಖಡಕ್ ಕ್ಲಾಸ್ ತೆಗೆದುಕೊಂಡಿದ್ದಾರೆ.
ಕನ್ನಡತಿ ಪ್ರಣಿತಾ ಸುಭಾಷ್, ಬಹುಭಾಷಾ ನಾಯಕಿಯಾಗಿ ಸಂಚಲನ ಮೂಡಿಸಿದವರು. ಇದೀಗ ಮದುವೆ, ಪತಿ, ಮಗಳು ಅಂತಾ ತಮ್ಮ ವೈಯಕ್ತಿಕ ಜೀವನದಲ್ಲಿ ಬ್ಯುಸಿಯಾಗಿದ್ದಾರೆ. ಆಗಾಗ ಮಗಳ ಜೊತೆಗಿನ ಫೋಟೋ ಹಂಚಿಕೊಳ್ಳುತ್ತಾರೆ. ಇದೀಗ ಪ್ರಣಿತಾಗೆ ಸೋಷಿಯಲ್ ಮೀಡಿಯಾದಲ್ಲಿ ನೆಟ್ಟಿಗರು ಕ್ಲಾಸ್ ತೆಗೆದುಕೊಂಡಿದ್ದಾರೆ. ಇದನ್ನೂ ಓದಿ: ಪ್ರೀ ವೆಡ್ಡಿಂಗ್ ಪಾರ್ಟಿಯಲ್ಲಿ ಮಿಂಚಿದ `ಬಿಂದಾಸ್’ ನಟಿ ಹನ್ಸಿಕಾ ಮೋಟ್ವಾನಿ
View this post on Instagram
ಇತ್ತೀಚೆಗೆ ಮುದ್ದು ಮಗಳು ಆರ್ನಾ ಫೋಟೋ ಅಪ್‌ಲೋಡ್ ಮಾಡಿದ್ದರು. ಆದರೆ ಮಗುವಿನ ಮುಖ ಮಾತ್ರ ತೋರಿಸುತ್ತಿರಲಿಲ್ಲ. ಆ ರೀತಿ ಹಲವು ಬಾರಿ ನಡೆದಿತ್ತು. ಮಗುವಿನ ಮುಖ ತೋರಿಸಲ್ಲ ಅಂದ್ಮೇಲೆ ಫೋಟೋ ಯಾಕೆ ಹಾಕಬೇಕು. ಫೋಟೋ ಹಾಕಬೇಡಿ ಎಂದು ನಟಿಗೆ ನೆಟ್ಟಿಗರು ತರಾಟೆಗೆ ತೆಗೆದುಕೊಂಡಿದ್ದಾರೆ.
View this post on Instagram
ಇನ್ನೂ ಪ್ರಣಿತಾ ಸುಭಾಷ್ ಮದುವೆಗೂ ಮುನ್ನ ನಟಿಸಿರುವ ಕನ್ನಡದ `ರಾಮನ ಅವತಾರ’ (Ramana Avatara) ಮುಂದಿನ ವರ್ಷ ತೆರೆ ಕಾಣಲಿದೆ. ಮದುವೆ ನಂತರ ಮತ್ತಷ್ಟು ಫಿಟ್ ಆಗಿರುವ ಪ್ರಣಿತಾ ಸಿನಿಮಾ ರಂಗಕ್ಕೆ ಮತ್ತೆ ಕಂಬ್ಯಾಕ್ ಮಾಡುತ್ತಾರಾ ಅಂತಾ ಕಾದುನೋಡಬೇಕಿದೆ.