ಬಹುಭಾಷಾ ನಟಿ ಪ್ರಣೀತಾ ಸುಭಾಷ್ (Pranitha Subhash) ಅವರು ಮಗನ ಜೊತೆಗಿನ ಫೋಟೋ ಹಂಚಿಕೊಂಡಿದ್ದಾರೆ. ಡೆಲಿವರಿ ಬಳಿಕ ಮೊದಲ ಬಾರಿಗೆ ಮಗನ ಫೋಟೋ ಹಂಚಿಕೊಂಡಿದ್ದಾರೆ. ಇದನ್ನೂ ಓದಿ:BBK 11: ದೊಡ್ಮನೆಯ 4ನೇ ಸ್ಪರ್ಧಿಯಾಗಿ ಗೋಲ್ಡ್ ಸುರೇಶ್
ಇತ್ತೀಚೆಗೆ ನಟಿ ಪ್ರಣೀತಾ ಎರಡನೇ ಮಗುವಿಗೆ ಜನ್ಮ ನೀಡಿದ್ದರು. ಮಗನ ಪಾಲನೆಯಲ್ಲಿ ಬ್ಯುಸಿಯಿದ್ದ ನಟಿ ಮಗುವಿನ ಜೊತೆಗಿನ ಫೋಟೋ ಶೇರ್ ಮಾಡಿ 40 ದಿನಗಳ ಕಾಲ ಹೆಕ್‌ಟಿಕ್ ಆಗಿತ್ತು. ಆದರೂ ಯೋಗ್ಯವಾಗಿತ್ತು ಎಂದು ನಟಿ ಬರೆದುಕೊಂಡಿದ್ದಾರೆ. ಮಗನನ್ನು ತಬ್ಬಿ ಮುದ್ದಾಡುತ್ತಿರುವ ನಟಿಯ ಫೋಟೋ ನೋಡುಗರ ಗಮನ ಸೆಳೆದಿದೆ.
View this post on Instagram
ಅಂದಹಾಗೆ, ಲಾಕ್‌ಡೌನ್ ವೇಳೆ 2021ರಲ್ಲಿ ಉದ್ಯಮಿ ನಿತಿನ್ ಜೊತೆ ಪ್ರಣೀತಾ ದಾಂಪತ್ಯ (Wedding) ಜೀವನಕ್ಕೆ ಕಾಲಿಟ್ಟರು. 2022ರಲ್ಲಿ 2ನೇ ಮಗುವಿನ ಜನ್ಮ ನೀಡಿದರು. ಆ ಮಗುವಿಗೆ ಆರ್ನಾ ಎಂದು ಹೆಸರನಿಟ್ಟಿದ್ದಾರೆ. 2 ವರ್ಷಗಳ ನಂತರ ಈಗ 2ನೇ ಮಗುವಿನ ಆಗಮನವಾಗಿದೆ.
ಪ್ರಣೀತಾ ಅವರು ಕನ್ನಡ, ಮಲಯಾಳಂ, ತೆಲುಗು, ತಮಿಳು ಸೇರಿದಂತೆ ಹಲವು ಭಾಷೆಗಳಲ್ಲಿ ಅವರು ನಟಿಸಿದ್ದಾರೆ. ಮದುವೆಯಾದ್ಮೇಲೆಯೂ ನಟಿ ಆ್ಯಕ್ಟೀವ್ ಆಗಿದ್ದಾರೆ.