ಬಹುಭಾಷಾ ನಟಿ ಪ್ರಣಿತಾ ಸುಭಾಷ್ (Pranitha Subhash) ಅವರ ಬದುಕಿಗೆ ಹೊಸ ಅತಿಥಿಯ ಆಗಮನವಾಗಿದೆ. ಸದ್ಯ ಮುದ್ದು ಮಗಳ ಪಾಲನೆಯಲ್ಲಿ ಬ್ಯುಸಿಯಾಗಿದ್ದಾರೆ. ಇನ್ನು ವೈಯಕ್ತಿಕ ಜೀವನದಲ್ಲಿ ಬ್ಯುಸಿಯಿರುವ ನಟಿ ತಮ್ಮ ಫಿಟ್ನೆಸ್ ಕಡೆಗೂ ಅಷ್ಟೇ ಗಮನ ಕೊಡ್ತಿದ್ದಾರೆ. ಹೆರಿಗೆಯ ನಂತರ ಪ್ರಣಿತಾ ಮತ್ತಷ್ಟು ಬೋಲ್ಡ್ ಆಗಿ ಕಾಣಿಸಿಕೊಳ್ತಿದ್ದಾರೆ.
View this post on Instagram
Advertisement
ಕನ್ನಡದ `ಪೊರ್ಕಿ’ ಚಿತ್ರದ ಮೂಲಕ ನಟನಾ ಕ್ಷೇತ್ರಕ್ಕೆ ಪರಿಚಿತರಾದ ಪ್ರಣಿತಾ ಬಳಿಕ ಬಹುಭಾಷಾ ನಾಯಕಿಯಾಗಿ ಛಾಪೂ ಮೂಡಿಸಿದ್ದರು. ಬೇಡಿಕೆ ಇರುವಾಗಲೇ ಕಳೆದ ವರ್ಷ ಉದ್ಯಮಿ ನಿತಿನ್(Nithin) ಜೊತೆ ಹಸೆಮಣೆ ಏರಿದ್ದರು. ಈಗ ಮುದ್ದು ಮಗಳು ಅರ್ನಾ (Arna) ಆರೈಕೆಯಲ್ಲಿ ಬ್ಯುಸಿಯಾಗಿದ್ದಾರೆ. ಅದೆಷ್ಟೇ ಬ್ಯುಸಿಯಿದ್ದರು ಕೂಡ ತಮ್ಮ ಫಿಟ್ನೆಸ್ ಕಡೆ ವಿಶೇಷ ಆಸಕ್ತಿ ವಹಿಸಿದ್ದಾರೆ.
Advertisement
View this post on Instagram
Advertisement
ಹೆರಿಗೆಯ ಬಳಿಕ ಮತ್ತಷ್ಟು ಫಿಟ್ ಆ್ಯಂಡ್ ಬ್ಯೂಟಿಫುಲ್ ಆಗಿದ್ದಾರೆ. ಆಗಾಗ ಹೊಸ ಫೋಟೋಶೂಟ್ ಮೂಲಕ ಕ್ಯಾಮೆರಾ ಕಣ್ಣಿಗೆ ಬೋಲ್ಡ್ ಆಗಿ ಪೋಸ್ ಕೊಟ್ಟಿದ್ದಾರೆ. ಪ್ರಣಿತಾ ಹೊಸ ಲುಕ್ ನೋಡಿ ಫ್ಯಾನ್ಸ್ `ಸಂತೂರ್ ಮಮ್ಮಿ’ ಅಂತಾ ಸೋಷಿಯಲ್ ಮೀಡಿಯಾದಲ್ಲಿ ನಟಿಗೆ, ಮೆಚ್ಚುಗೆಯಿಂದ ಕಾಮೆಂಟ್ ಮಾಡುತ್ತಿದ್ದಾರೆ. ಇದನ್ನೂ ಓದಿ:ಬಾಲಿವುಡ್ನಲ್ಲಿ ರಶ್ಮಿಕಾ ಮಂದಣ್ಣಗೆ ಭರ್ಜರಿ ಡಿಮ್ಯಾಂಡ್
Advertisement
View this post on Instagram
ನಟಿ ಪ್ರಣಿತಾ ಕಡೆಯದಾಗಿ ಬಾಲಿವುಡ್ನ (Bollywood) `ಹಂಗಾಮ 2′, `ಭುಜ್ʼ ದಿ ಪ್ರೈಡ್ ಆಫ್ ಇಂಡಿಯಾ ಸಿನಿಮಾದಲ್ಲಿ ನಾಯಕಿಯಾಗಿ ಅದ್ಬುತವಾಗಿ ನಟಿಸಿ ಸೈ ಎನಿಸಿಕೊಂಡಿದ್ದರು. ಇದೀಗ ಕನ್ನಡದ `ರಾಮನ ಅವತಾರ’ ಚಿತ್ರದ ಮೂಲಕ ಮತ್ತೆ ಬೆಳ್ಳಿತೆರೆಯಲ್ಲಿ ಮಿಂಚಲಿದ್ದಾರೆ.
Live Tv
[brid partner=56869869 player=32851 video=960834 autoplay=true]