ಬಾಲಿವುಡ್ ಹಾಟ್ ಬೆಡಗಿ ಪೂನಂ ಪಾಂಡೆ (Poonam Pandey) ನಿಧನದ ಸುದ್ದಿ ಸದ್ಯ ಬಾಲಿವುಡ್‌ಗೆ (Bollywood) ಶಾಕ್ ಕೊಟ್ಟಿದೆ. ಕೇವಲ 32ನೇ ವಯಸ್ಸಿಗೆ ನಟಿ (ಇಂದು) ಫೆ.2 ವಿಧಿವಶರಾಗಿದ್ದಾರೆ. ಸಿನಿಮಾ, ಮಾಡೆಲಿಂಗ್ ಎಂದು ಸುದ್ದಿಯಾಗಿದ್ದ ಪೂನಂ ವೈಯಕ್ತಿಕ ಬದುಕಿನಲ್ಲೂ ಕೂಡ ಅವರಿಗೆ ಖುಷಿ ಇರಲಿಲ್ಲ. ಅಂದು ಇಬ್ಬರು ಮಕ್ಕಳ ತಂದೆಯನ್ನು ಪೂನಂ ಮದುವೆಯಾಗಿ ಆಮೇಲೆ ದೂರವಾಗಿದ್ದೇಕೆ? ಇಲ್ಲಿದೆ ಮಾಹಿತಿ.
ಕಾಂಟ್ರವರ್ಸಿ ಮೂಲಕನೇ ಬಾಲಿವುಡ್ ರಂಗ ತನ್ನ ಕಡೆ ತಿರುಗುವಂತೆ ಮಾಡಿದ್ದ ಪೂನಂ ಪಾಂಡೆ ವೃತ್ತಿರಂಗದಲ್ಲಿ ಸಾಕಷ್ಟು ಏರಿಳಿತಗಳನ್ನು ಕಂಡಿದ್ದರು. ಹಾಗಂತ ವೈಯಕ್ತಿಕ ಜೀವನದಲ್ಲೂ ಕೂಡ ನಟಿ ಸುಖವಾಗಿ ಇರಲಿಲ್ಲ. ಇದನ್ನೂ ಓದಿ: ಕನ್ನಡ ಸಿನಿಮಾದಲ್ಲೂ ಸೊಂಟ ಬಳುಕಿಸಿದ್ದ ಯುವಕರ ಫೇವರೇಟ್ ನಟಿ ಪೂನಂ
ನಿರ್ಮಾಪಕ ಸ್ಯಾಮ್ ಬಾಂಬೆ (Sam Bombay) ಎಂಬವರ ಜೊತೆ 2020ರಲ್ಲಿ ಪೂನಂ ಮದುವೆಯಾಗಿದ್ದರು. ಇಬ್ಬರ ಮಕ್ಕಳು ಇರುವ ವಿಚಾರ ತಿಳಿದಿದ್ದರೂ ಕೂಡ ಪ್ರೀತಿಸಿ ಉದ್ಯಮಿ ಸ್ಯಾಮ್ ಬಾಂಬೆ ಅವರನ್ನು ಪೂನಂ ವರಿಸಿದ್ದರು. ಆದರೆ ಇವರ ಸಂಬಂಧ ಹೆಚ್ಚು ದಿನ ಉಳಿಯಲಿಲ್ಲ.
2020ರಲಲಿ ಮದುವೆಯಾದ ಕೆಲವೇ ತಿಂಗಳಿಗೆ ಇಬ್ಬರ ಜಗಳ ಬೀದಿಗೆ ಬಂದಿತ್ತು. ಸ್ಯಾಮ್ ಬಾಂಬೆ ದೈಹಿಕ ಹಲ್ಲೆ ಮಾಡಿರೋದಾಗಿ ಪೂನಂ ದೂರು ದಾಖಲಿಸಿದ್ದರು. ನಂತರ ಮುಂಬೈ ಪೊಲೀಸರು ಅವರನ್ನು ಬಂಧಿಸಿದ್ದರು. ಪೂನಂ ಅವರ ತಲೆ, ಕಣ್ಣು ಮತ್ತು ಮುಖಕ್ಕೆ ಗಾಯಗಳಾಗಿತ್ತು ಎಂಬ ಸುದ್ದಿ ವೈರಲ್ ಆಗಿತ್ತು. ವೈಯಕ್ತಿಕ ಮನಸ್ತಾಪಗಳಿಂದ ಸ್ಯಾಮ್ ಜೊತೆಗಿನ ದಾಂಪತ್ಯಕ್ಕೆ ಪೂನಂ ಬ್ರೇಕ್ ಹಾಕಿದ್ದರು.