ಬಾಲಿವುಡ್ ಹಾಟ್ ನಟಿ ಪೂನಂ ಪಾಂಡೆ (Poonam Pandey) ನಿಧನದ ಸುದ್ದಿ ಇನ್ನೂ ಅಭಿಮಾನಿಗಳು ಒಪ್ಪಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಪೂನಂ ಹಠಾತ್ ನಿಧನ (ಫೆ.2) ಫ್ಯಾನ್ಸ್‌ಗೆ ಶಾಕ್ ಕೊಟ್ಟಿದೆ. ಇನ್ನೂ ಸದಾ ವಿವಾದಗಳಿಂದ ಸುದ್ದಿಯಾಗ್ತಿದ್ದ ನಟಿ ಪೂನಂಗೆ ಬದುಕು ಬದಲಿಸುವ ಉತ್ತಮ ಪ್ರಾಜೆಕ್ಟ್‌ಗಳು ಸಿಗಲೇ ಇಲ್ಲ. ಕೆಲಸ ಇಲ್ಲದಿರುವ ಬಗ್ಗೆ ನಟಿ ಓಪನ್ ಆಗಿ ಮಾತನಾಡಿದ್ದರು.
ಸದಾ ಒಂದಲ್ಲಾ ಒಂದು ಕಾಂಟ್ರವರ್ಸಿ ಮೂಲಕ ಪೂನಂ ಸದ್ದು ಮಾಡುತ್ತಿದ್ದರು. ಸಿನಿಮಾ ಸಿಗಬೇಕು, ಕೆಲಸ ಮಾಡಬೇಕು ಎಂದಿದ್ದ ಪೂನಂಗೆ ಸರಿಯಾದ ಅವಕಾಶಗಳು ಸಿಕ್ಕಿರಲಿಲ್ಲ. 2022ರಲ್ಲಿ ಕಂಗನಾ ರಣಾವತ್ ನಡೆಸಿಕೊಟ್ಟಿದ್ದ ‘ಲಾಕಪ್’ ರಿಯಾಲಿಟಿ ಶೋನಲ್ಲಿ ಸ್ಪರ್ಧಿಸಿದ್ದರು. ಈ ವೇಳೆ ಅವರು ಹಲವು ವಿಚಾರಗಳನ್ನು ಹೇಳಿಕೊಂಡಿದ್ದರು. ಇದನ್ನೂ ಓದಿ:ಗದಗ ಕಟೌಟ್ ದುರಂತ: ಗಾಯಾಳುಗಳ ಕುಟುಂಬಕ್ಕೆ ಯಶ್ 1 ಲಕ್ಷ ಪರಿಹಾರ

2013ರಲ್ಲಿ ‘ನಶಾ’ (Nasha) ಎಂಬ ಸಿನಿಮಾ ಮೂಲಕ ಬಾಲಿವುಡ್‌ಗೆ ಪೂನಂ ಪಾಂಡೆ ಪಾದಾರ್ಪಣೆ ಮಾಡಿದ್ದರು. ‘ದಿ ಜರ್ನಿ ಆಫ್ ಕರ್ಮ’, ‘ಲವ್ ಇನ್ ಎ ಟ್ಯಾಕ್ಸಿ’, ಕನ್ನಡದ ‘ಲವ್ ಇನ್ ಪಾಯಿಸನ್’ ಸೇರಿದಂತೆ ಹಲವು ಸಿನಿಮಾಗಳಲ್ಲಿ ನಟಿಸಿದ್ದಾರೆ.


