ನಟಿ ಪೂನಂಗೆ ಫೈಬ್ರೊಮ್ಯಾಲ್ಜಿಯಾ ಕಾಯಿಲೆ: ಬಟ್ಟೆ ತೊಡಲು ಕಷ್ಟ ಎಂದ ನಟಿ

Public TV
1 Min Read
Poonam Kaur 1

ತಾವು ಮೂರು ವರ್ಷಗಳಿಂದ ಫೈಬ್ರೊಮ್ಯಾಲ್ಜಿಯಾ (Fibromyalgia) ಕಾಯಿಲೆಯಿಂದ ಬಳಲುತ್ತಿರುವುದಾಗಿ ನಟಿ, ರಾಜಕಾರಣಿ ಪೂನಂ ಕೌರ್ (Poonam Kaur) ಹೇಳಿಕೊಂಡಿದ್ದಾರೆ. ಮಾಧ್ಯಮವೊಂದರ ಸಂದರ್ಶನದಲ್ಲಿ ಈ ವಿಷಯವನ್ನು ಬಹಿರಂಗ ಪಡಿಸಿರುವ ಪೂನಂ ಕೌರ್, ಈ ಕಾಯಿಲೆಯಿಂದಾಗಿ ಬಟ್ಟೆ ಹಾಕಿಕೊಳ್ಳಲು ಕಷ್ಟ ಪಡುತ್ತಿದ್ದೇನೆ ಎಂದಿದ್ದಾರೆ.

Poonam Kaur 2

ಈ ಕಾಯಿಲೆಗೆ ತುತ್ತಾದವರ ಬದುಕು ನರಕ. ದೀರ್ಘಕಾಲದ ಅಸ್ವಸ್ಥತೆ, ಖಿನ್ನತೆ, ತಲೆ ನೋವು, ದೇಹದ ಸ್ನಾಯುಗಳು ಬಿಗಿಯಾಗಿ ನೋವು ಹೀಗೆ ನಾನಾ ರೀತಿಯ ಸಂಕಟವನ್ನು ಅನುಭವಿಸಬೇಕಾಗುತ್ತಿದೆ. ಮೂರು ವರ್ಷಗಳಿಂದ ನಾನು ಈ ಕಾಯಿಲೆಗೆ ಚಿಕಿತ್ಸೆ ಪಡೆದುಕೊಳ್ಳುತ್ತಿರುವುದಾಗಿ ಅವರು ಹೇಳಿಕೊಂಡಿದ್ದಾರೆ.

Poonam Kaur 3

ಫೈಬ್ರೊಮ್ಯಾಲ್ಜಿಯಾ ಕಾರಣದಿಂದಾಗಿ ಅವರು ಎರಡು ವರ್ಷಗಳ ಕಾಲ ಸಡಿಲವಾದ ಬಟ್ಟೆಗಳನ್ನು ಧರಿಸಿದ್ದಾರಂತೆ. ನಾಟಿ ವೈದ್ಯೆ ಡಾ.ಮಂತೇನ ಅವರ ಬಳಿ ಚಿಕಿತ್ಸೆ ಪಡೆಯುತ್ತಿರುವುದಾಗಿಯೂ ಅವರು ಮಾತನಾಡಿದ್ದಾರೆ.

 

ಸಿನಿಮಾ ನಟನೆ, ರಾಜಕಾರಣ ಮತ್ತು ಸಮಾಜಮುಖಿ ಕೆಲಸಗಳ ಮೂಲಕ ಪೂನಂ ಕೌರ್ ಗುರುತಿಸಿಕೊಂಡಿದ್ದಾರೆ. ಕಾಯಿಲೆ ಕಾರಣದಿಂದಾಗಿ ಅವರು ಸಿನಿಮಾ ರಂಗದಿಂದ ಸ್ವಲ್ಪ ದಿನಗಳ ಕಾಲ ದೂರವೂ ಉಳಿದಿದ್ದರು.

Share This Article