ಬಿಜೆಪಿ ಸೇರಿದ ನಟಿ ಪೂಜಾ ರಮೇಶ್

Public TV
1 Min Read
Pooja Ramesh 1

ಮಿಸ್ ಇಂಡಿಯಾ ವಿಜೇತೆ, ಚಿಕ್ಕಮಗಳೂರು ಮೂಲದ ನಟಿ ಪೂಜಾ ರಮೇಶ್ (Pooja Ramesh) ಬಿಜೆಪಿ (BJP) ಸೇರಿಕೊಂಡಿದ್ದಾರೆ. ಸಚಿವೆ ಶೋಭಾ ಕರಂದ್ಲಾಜೆ (Shobha Karandlaje) ಇವರನ್ನು ಪಕ್ಷಕ್ಕೆ ಬರಮಾಡಿಕೊಂಡು ಶುಭ ಹಾರೈಸಿದ್ದಾರೆ.

Pooja Ramesh 2

ಸದ್ಯ ಪೂಜಾ ರಮೇಶ್ ನಾಲ್ಕು ಚಿತ್ರಗಳಲ್ಲಿ ಬ್ಯುಸಿಯಾಗಿದ್ದು, ಇದರ ಮಧ್ಯೆ ಸಮಾಜಸೇವೆಯಲ್ಲಿ ಗುರುತಿಸಿಕೊಂಡು ರಾಜಕೀಯ ಅಂಗಳಕ್ಕೆ ಪ್ರವೇಶ ಮಾಡಿದ್ದಾರೆ. ಈ ಹಿಂದೆ ರಾಯಚೂರು ಕ್ಷೇತ್ರದಿಂದ ಎಎಪಿನಿಂದ ಶಾಸಕ ಸ್ಥಾನಕ್ಕೆ ಚುನಾವಣೆಗೆ ನಿಂತು ಅನುಭವ ಪಡೆದುಕೊಂಡಿದ್ದರು. ಸದ್ಯ ಭಾರತೀಯ ಜನತಾಪಕ್ಷಕ್ಕೆ ಸೇರ್ಪಡೆಯಾಗಿದ್ದಾರೆ. ಗ್ಯಾಪ್‌ದಲ್ಲಿ ಸಿನಿಮಾಗಳಲ್ಲಿ ತೊಡಗಿಕೊಂಡಿದ್ದಾರೆ.

 

ಕನ್ನಡದ ಅನೇಕ ನಟ ನಟಿಯರು ಈಗಾಗಲೇ ವಿವಿಧ ಪಕ್ಷಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ. ಈಗಾಗಲೇ ಚುನಾವಣೆ ಪ್ರಚಾರದಲ್ಲೂ ಅವರು ತೊಡಗಿಕೊಂಡಿದ್ದಾರೆ. ಅದಕ್ಕೆ ಹೊಸ ಸೇರ್ಪಡೆ ಪೂಜಾ ರಮೇಶ್.

Share This Article