ಮಾತಿನ ಭರದಲ್ಲಿ ಪೂಜಾ ಹೆಗ್ಡೆ ಯಡವಟ್ಟು- ಹಿಗ್ಗಾಮುಗ್ಗಾ ಟ್ರೋಲ್ ಆದ ನಟಿ

Public TV
1 Min Read
pooja hegde 1 1

ಕುಡ್ಲದ ಬೆಡಗಿ ಪೂಜಾ ಹೆಗ್ಡೆ (Pooja Hegde) ನಟಿಸಿದ ಸಿನಿಮಾಗಳೆಲ್ಲಾ ಗಲ್ಲಾಪೆಟ್ಟಿಗೆಯಲ್ಲಿ ಮಕಾಡೆ ಮಲಗಿದೆ. ಹೀನಾಯ ಸೋಲನ್ನೇ ಕಂಡಿರುವ ಪೂಜಾ ಈಗ ವಿವಾದವೊಂದನ್ನು ಮೈಮೇಲೆ ಎಳೆದುಕೊಂಡಿದ್ದಾರೆ. ಮಾತಿನ ಭರದಲ್ಲಿ ನಟಿ ಯಡವಟ್ಟು ಮಾಡಿಕೊಂಡು ಸಖತ್ ಟ್ರೋಲ್ ಆಗ್ತಿದ್ದಾರೆ. ಇದನ್ನೂ ಓದಿ:ಹೆಚ್ಚಾಯ್ತು ಬೇಡಿಕೆ- ಸಿನಿಮಾ ಆಫರ್‌ಗೆ ಡೋಂಟ್ ಕೇರ್ ಎಂದ Bigg Boss ವಿನ್ನರ್ ಹನುಮಂತ

pooja hegde

ಶಾಹಿದ್ ಕಪೂರ್ ಜೊತೆಗಿನ ‘ದೇವ’ (Deva) ಸಿನಿಮಾದ ಪ್ರಚಾರ ಕಾರ್ಯದ ವೇಳೆ, ಮಾಧ್ಯಮಗಳ ಜೊತೆ ಮಾತನಾಡುವಾಗ ಪೂಜಾ ಹೆಗ್ಡೆ ತೆಲುಗಿನ ‘ಅಲಾ ವೈಕುಂಠಪುರಮುಲೋ’ ಸಿನಿಮಾದ ಬಗ್ಗೆಯೂ ಮಾತನಾಡಿದ್ದಾರೆ. ಆಗ ಒಂದು ಎಡವಟ್ಟು ಆಗಿದೆ. ‘ಅಲಾ ವೈಕುಂಠಪುರಮುಲೋ’ ಒಂದು ತಮಿಳು ಸಿನಿಮಾ. ಅದು ಪ್ಯಾನ್ ಇಂಡಿಯಾ ಸಿನಿಮಾವಲ್ಲ, ಆದರೂ ಅದನ್ನು ಹಿಂದಿ ಪ್ರೇಕ್ಷಕರು ನೋಡಿ ಮೆಚ್ಚಿಕೊಂಡಿದ್ದಾರೆ. ‘ಡಿಜೆ’ ಸಿನಿಮಾವನ್ನು ಕೂಡ ನೋಡಿದ್ದಾರೆ. ಕೆಲಸ ಚೆನ್ನಾಗಿದ್ರೆ, ಅದು ಎಲ್ಲ ಕಡೆಗೆ ರೀಚ್ ಆಗುತ್ತದೆ ಎಂಬುದು ಗೊತ್ತಾಗುತ್ತದೆ ಎಂದು ಪೂಜಾ ಹೇಳಿದ್ದಾರೆ.

ಹೀಗೆ ಪ್ರಶ್ನೆಯೊಂದಕ್ಕೆ ತೆಲುಗಿನ ‘ಅಲಾ ವೈಕುಂಠಪುರಮುಲೋ’ ಸಿನಿಮಾವನ್ನು ಉದಾಹರಣೆಗೆ ತೆಗೆದುಕೊಂಡ ಪೂಜಾ, ಅದನ್ನು ತಮಿಳು ಸಿನಿಮಾ ಅಂತ ಹೇಳಿದ್ದು, ಪ್ರೇಕ್ಷಕರ ಕೋಪಕ್ಕೆ ಕಾರಣವಾಗಿದೆ. ತಾವೇ ನಟಿಸಿದ ತೆಲುಗಿನ ಸಿನಿಮಾವನ್ನು ತಮಿಳು ಚಿತ್ರ ಎನ್ನುತ್ತೀರಿ. ನೀವು ನಟಿಸಿದ ಸಿನಿಮಾ ಯಾವ ಭಾಷೆಯದ್ದು, ಎಂಬುದು ಕೂಡ ನಿಮಗೆ ಗೊತ್ತಿಲ್ವಾ? ಎಂದೆಲ್ಲಾ ನಟಿಗೆ ಸೋಶಿಯಲ್ ಮೀಡಿಯಾದಲ್ಲಿ ನೆಟ್ಟಿಗರು ಟೀಕಿಸಿದ್ದಾರೆ.

Share This Article