ಸೋಲಿನ ಸುಳಿಯಲ್ಲಿರುವ ಪೂಜಾ ಹೆಗ್ಡೆಗೆ ‘ಸಂಕಿ’ ಸಿನಿಮಾ ಕೈಹಿಡಿಯುತ್ತಾ?

Public TV
2 Min Read

ಮಂಗಳೂರಿನ ಬೆಡಗಿ ಪೂಜಾ ಹೆಗ್ಡೆಗೆ (Pooja Hegde) ಬಂಪರ್ ಅವಕಾಶವೊಂದು ಸಿಕ್ಕಿದೆ. ಸಾಲು ಸಾಲು ಸಿನಿಮಾಗಳ ಸೋಲಿನ ಸುಳಿಯಲ್ಲಿದ್ದ ಪೂಜಾ ಇದೀಗ ಬಾಲಿವುಡ್ ನಟ ಸುನೀಲ್ ಶೆಟ್ಟಿ (Suniel Shetty) ಪುತ್ರನ ಜೊತೆ ಸಿನಿಮಾ ಮಾಡಲು ಮುಂದಾಗಿದ್ದಾರೆ. ಐರೆನ್ ಲೆಗ್ ಆಗಿ ಹೈಲೆಟ್ ಆಗಿರುವ ಹುಡುಗಿ ಪೂಜಾಗೆ ಈ ಚಿತ್ರದ ಕೈ ಹಿಡಿಯುತ್ತಾ? ‘ಸಂಕಿ’ ಚಿತ್ರದ ಬಗ್ಗೆ ಏನಿದೆ ಅಪ್‌ಡೇಟ್ಸ್. ಇಲ್ಲಿದೆ ಮಾಹಿತಿ.

pooja hegde

‘ಕಿಸಿ ಕಾ ಬಾಯ್ ಕಿಸಿ ಕಿ ಜಾನ್’ ಚಿತ್ರದಲ್ಲಿ ಸಲ್ಮಾನ್ ಖಾನ್ (Salman Khan) ಜೊತೆ ಪೂಜಾ ಹೆಗ್ಡೆ (Pooja Hegde) ಕಡೆಯದಾಗಿ ನಟಿಸಿದ್ದರು. ಅದಾದ ನಂತರ ಸಿನಿಮಾ ಆಫರ್ಸ್ ಕಮ್ಮಿಯಾಗಿತ್ತು. ಮತ್ತೆ ಟಾಲಿವುಡ್‌ಗೆ ಮುಖ ಮಾಡ್ತಾರೆ ಐರೆನ್ ಲೆಗ್ ನಟಿ ಎಂದೇ ಸುದ್ದಿ ಹಬ್ಬಿತ್ತು. ಆದರೆ ಫ್ಯಾನ್ಸ್ಗೆ ಈಗ ನಟಿ ಗುಡ್ ನ್ಯೂಸ್ ಕೊಟ್ಟಿದ್ದಾರೆ.

pooja hegde 3

ಇತ್ತೀಚೆಗೆ ನಟಿಸಿದ ಪೂಜಾ ಹೆಗ್ಡೆ ಸಿನಿಮಾಗಳು ಗಲ್ಲಾಪೆಟ್ಟಿಗೆಯಲ್ಲಿ ಮಕಾಡೆ ಮಲಗಿದೆ. ಸ್ಟಾರ್ ನಟರ ಸಿನಿಮಾದಿಂದ ಪೂಜಾ ಕಿಕ್ ಔಟ್ ಆಗಿದ್ದು ಇದೆ. ‌’ಸಂಕಿ’ (Sanki) ಬಾಲಿವುಡ್ ಸಿನಿಮಾ ಗೆಲ್ಲಲೇಬೇಕಾದ ಅನಿವಾರ್ಯತೆ ಇದೆ. ಸಂಕಿ ಗೆದ್ದರೆ ಪೂಜಾ ಹೆಗ್ಡೆಗೆ ಬಾಲಿವುಡ್‌ನಲ್ಲಿ ಗಟ್ಟಿ ನೆಲೆ ಗಿಟ್ಟಿಸಿಕೊಳ್ತಾರೆ. ಹಾಗಾದ್ರೆ ‘ಸಂಕಿ’ ಸಿನಿಮಾ ಹೇಗಿರಲಿದೆ?

ahan shetty

‘ಸಂಕಿ’ (Sanki) ಎಂಬ ರೊಮ್ಯಾಂಟಿಕ್ ಸಿನಿಮಾದಲ್ಲಿ ಸುನೀಲ್ ಶೆಟ್ಟಿ ಪುತ್ರ ಅಹಾನ್ ಶೆಟ್ಟಿಗೆ ನಾಯಕಿಯಾಗಿ ನಟಿಸಲು ಪೂಜಾ ಹೆಗ್ಡೆ ಆಯ್ಕೆಯಾಗಿದ್ದಾರೆ. ಬಾಲಿವುಡ್‌ನ ಖ್ಯಾತ ನಿರ್ಮಾಪಕ ಸಾಜಿದ್ ನಾಡಿಯಾಡ್ವಾಲಾ ಈ ಚಿತ್ರವನ್ನು ನಿರ್ಮಾಣ ಮಾಡುತ್ತಿದ್ದಾರೆ. ಇದನ್ನೂ ಓದಿ:‘ಕೆರೆಬೇಟೆ’ ಅನುಭವಕ್ಕೆ ಥ್ರಿಲ್ ಆದ ಚಿಲ್ಲರ್ ಮಂಜು

ahan shetty 1

‘ಸಂಕಿ’ ಚಿತ್ರವು ರೊಮ್ಯಾಂಟಿಕ್ ಆ್ಯಕ್ಷನ್ ಚಿತ್ರವಾಗಿದೆ. ‘ಆಶಿಕಿ 2’ ಸಿನಿಮಾದಂತೆ ಆಧುನೀಕರಿಸಿ ಸಂಕಿ ಸಿನಿಮಾ ಮೂಡಿ ಬರಲಿದೆ ಎಂದು ಚಿತ್ರತಂಡ ತಿಳಿಸಿದೆ. ‘ಸಂಕಿ’ ಚಿತ್ರ ಮ್ಯೂಸಿಕಲ್ ಲವ್ ಸ್ಟೋರಿಯಾಗಿರಲಿದೆ. ಅಹಾನ್ ಶೆಟ್ಟಿ- ಪೂಜಾ ಹೆಗ್ಡೆ ನಟನೆಯ ಈ ಸಿನಿಮಾ ಜುಲೈನಿಂದ ಚಿತ್ರೀಕರಣ ಶುರುವಾಗಲಿದೆ. ಚಿತ್ರದಲ್ಲಿ 7 ಹಾಡುಗಳು ಇರಲಿದೆ.

ಮುಂದಿನ ವರ್ಷ ಪ್ರೇಮಿಗಳ ದಿನ ಫೆ.14ಕ್ಕೆ ಈ ಸಿನಿಮಾ ರಿಲೀಸ್ ಆಗುತ್ತಿದೆ. ಹೊಚ್ಚ ಹೊಸ ಲವ್ ಸ್ಟೋರಿ ಹೇಳೋಕೆ ಅಹಾನ್- ಪೂಜಾ ಹೆಗ್ಡೆ ಸಜ್ಜಾಗಿದ್ದಾರೆ. ಇದನ್ನೂ ಓದಿ:ಪತಿ ಹುಟ್ಟುಹಬ್ಬಕ್ಕೆ ವಿಶೇಷವಾಗಿ ಶುಭಕೋರಿದ ಯಾಮಿ ಗೌತಮ್

2021ರಲ್ಲಿ ‘ತಡಪ್’ ಚಿತ್ರದ ಮೂಲಕ ಅಹಾನ್ ಶೆಟ್ಟಿ ಬಾಲಿವುಡ್ ನಾಯಕನಾಗಿ ಎಂಟ್ರಿ ಕೊಟ್ಟಿದ್ದರು. ಇದೀಗ ಮೊದಲ ಬಾರಿಗೆ ಪೂಜಾ ಹೆಗ್ಡೆ (Pooja Hegde) ಜೊತೆ ಅಹಾನ್ ಶೆಟ್ಟಿ (Ahan Shetty) ನಟಿಸುತ್ತಿರೋದ್ರಿಂದ ಈ ಜೋಡಿ ತೆರೆಯ ಮೇಲೆ ಮೋಡಿ ಮಾಡ್ತಾರಾ ಕಾದುನೋಡಬೇಕಿದೆ.

Share This Article