1.39 ಲಕ್ಷ ಮೊತ್ತದ ಲಂಗ-ದಾವಣಿಯಲ್ಲಿ ಮಿಂಚಿದ ಪೂಜಾ ಹೆಗ್ಡೆ

Public TV
1 Min Read
pooja hegde

ಬಾಲಿವುಡ್ ಬ್ಯೂಟಿ ಪೂಜಾ ಹೆಗ್ಡೆ (Pooja Hegde) ಅವರು ಮೂಲತಃ ಮಂಗಳೂರಿನವರು. ಸಮಯ ಸಿಕ್ಕಾಗಲೆಲ್ಲಾ ಅವರು ತಮ್ಮ ಹುಟ್ಟೂರಿಗೆ ನಟಿ ಭೇಟಿ ನೀಡುತ್ತಿರುತ್ತಾರೆ. ಇದೀಗ ಉಡುಪಿಗೆ (Udupi) ಭೇಟಿ ಕೊಟ್ಟಿರುವ ಪೂಜಾ ಅವರು ದುಬಾರಿ ಮೊತ್ತದ ಲಂಗ-ದಾವಣಿಯಲ್ಲಿ ನಟಿ ಮಿಂಚಿದ್ದಾರೆ.

pooja hegde

ಸೌತ್ ಮತ್ತು ಬಾಲಿವುಡ್‌ನಲ್ಲಿ ಮಿಂಚುತ್ತಿರುವ ಪೂಜಾ ಹೆಗ್ಡೆ ಅವರಿಗೆ ಮಂಗಳೂರು ಅಂದರೆ ವಿಶೇಷ ಪ್ರೀತಿಯಿದೆ. ಮುಂಬೈನಲ್ಲಿ ಸೆಟಲ್ ಆಗಿದ್ದರೂ ಕೂಡ ತಾವು ಹುಟ್ಟಿದ ಊರಿನ ಬಗ್ಗೆ ಅಭಿಮಾನವಿದೆ. ಇತ್ತೀಚೆಗೆ ನಡೆದ ಬೆಂಗಳೂರಿನ ಕಂಬಳದಲ್ಲಿ (Kambala) ಪೂಜಾ ಹೆಗ್ಡೆ ಭಾಗವಹಿಸಿದ್ದರು. ಇದಾದ ಬಳಿಕ ಈಗ ಉಡುಪಿಗೆ ಭೇಟಿ ನೀಡಿದ್ದು, ಕುಟುಂಬದ ಕಾರ್ಯಕ್ರಮವೊಂದರಲ್ಲಿ ಮಿಂಚಿದ್ದಾರೆ.

pooja hegde 1ಈ ವೇಳೆ, ಪಿಂಕ್ ಮತ್ತು ಹಸಿರು ಬಣ್ಣದ ಲಂಗ-ದಾವಣಿಯಲ್ಲಿ ಮುದ್ದಾಗಿ ನಟಿ ಕಾಣಿಸಿಕೊಂಡಿದ್ದಾರೆ. ಪೂಜಾ ಮಸ್ತ್ ಆಗಿ ಫೋಟೋಶೂಟ್ ಮಾಡಿಸಿದ್ದಾರೆ. 1.39 ಲಕ್ಷ ಮೊತ್ತದ ದುಬಾರಿ ಮೊತ್ತದ ಧಿರಿಸಿನಲ್ಲಿ ನಟಿ ಕಾಣಿಸಿಕೊಂಡಿರೋದು ವಿಶೇಷ. ಇದನ್ನೂ ಓದಿ:‘ಹನುಮಾನ್’ ಸೀಕ್ವೆಲ್: ಸ್ಕ್ರಿಪ್ಟ್ ಪೂಜೆ ನೆರವೇರಿಸಿದ ನಿರ್ದೇಶಕ

 

View this post on Instagram

 

A post shared by Pooja Hegde (@hegdepooja)

ಲಂಗ-ದಾವಣಿ ಧರಿಸಿ, ಹೂ ಮುಡಿದು ಮಿಂಚುತ್ತಿರುವ ಪೂಜಾ ಲುಕ್ ನೋಡಿ ಅಭಿಮಾನಿಗಳು ಮದುವೆ ಯಾವಾಗ ಎಂದು ಕಾಮೆಂಟ್ ಮಾಡಿದ್ದಾರೆ. ಬಗೆ ಬಗೆಯ ಕಾಮೆಂಟ್‌ಗಳು ಪೂಜಾ ನಯಾ ಫೋಟೋಗೆ ಹರಿದು ಬರುತ್ತಿದೆ.

ಕಳೆದ ವರ್ಷ ಸಲ್ಮಾನ್ ಖಾನ್‌ಗೆ ನಾಯಕಿಯಾಗಿ ‘ಕಿಸಿ ಕಾ ಭಾಯ್ ಕಿಸಿ ಕೀ ಜಾನ್’ ಚಿತ್ರದಲ್ಲಿ ಪೂಜಾ ನಟಿಸಿದ್ದರು. ಅದಾದ ಬಳಿಕ ಪೂಜಾಗೆ ಚಿತ್ರರಂಗದಲ್ಲಿ ಚಾರ್ಮ್ ಕಮ್ಮಿಯಾಗಿದೆ. ಹೇಳಿಕೊಳ್ಳುವಂತಹ ಅವಕಾಶಗಳು ಅವರಿಗೆ ಸಿಗುತ್ತಿಲ್ಲ.

Share This Article