ಕರಾವಳಿ ಬೆಡಗಿ ಪೂಜಾ ಹೆಗ್ಡೆ (Pooja Hegde) ನಟಿಸಿರುವ ಸಾಲು ಸಾಲು 7 ಸಿನಿಮಾಗಳು ಫ್ಲಾಪ್ ಆಗಿವೆ. ಈ ಮಂಗಳೂರಿನ ಬೆಡಗಿಗೆ ಅದೃಷ್ಟ ಕೈಹಿಡಿಯೋದು ಯಾವಾಗ ಎಂದು ಅಭಿಮಾನಿಗಳು ಎದುರು ನೋಡುತ್ತಿದ್ದಾರೆ. ಇದನ್ನೂ ಓದಿ:ಮೆಗಾಸ್ಟಾರ್ ಕುಟುಂಬದಲ್ಲಿ ಸಂಭ್ರಮ- ಮೊದಲ ಮಗುವಿನ ನಿರೀಕ್ಷೆಯಲ್ಲಿ ವರುಣ್ ತೇಜ್ ದಂಪತಿ
ಇತ್ತೀಚಿನ ವರ್ಷಗಳಲ್ಲಿ ಪೂಜಾ ನಟಿಸಿರುವ ಸತತ 7 ಸಿನಿಮಾಗಳು ಗಲ್ಲಾಪೆಟ್ಟಿಗೆಯಲ್ಲಿ ಮಕಾಡೆ ಮಲಗಿವೆ. ಸ್ಟಾರ್ ನಟರಿಗೆ ಅವರು ನಾಯಕಿಯಾದ್ರೂ ಸಕ್ಸಸ್ ಸಿಗಲಿಲ್ಲ. ಪ್ರಭಾಸ್ ಜೊತೆ ರಾಧೆ ಶ್ಯಾಮ್, ದಳಪತಿ ವಿಜಯ್ ಜೊತೆ ಬೀಸ್ಟ್, ರಾಮ್ ಚರಣ್ ಜೊತೆ ಆಚಾರ್ಯ, ರಣವೀರ್ ಸಿಂಗ್ ಜೊತೆ ಸರ್ಕಸ್, ಸಲ್ಮಾನ್ ಖಾನ್ ಜೊತೆ ‘ಕಿಸಿ ಕಾ ಭಾಯ್ ಕಿಸಿ ಕಿ ಜಾನ್’, ಶಾಹಿದ್ ಕಪೂರ್ ಜೊತೆ ದೇವ ಸಿನಿಮಾಗಳಲ್ಲಿ ನಟಿಸಿದ್ದರು. ಈ ಸಿನಿಮಾಗಳೆಲ್ಲಾ ಸಕ್ಸಸ್ ಸಿಗದೆ ನೆಲಕಚ್ಚಿದೆ. ಇದನ್ನೂ ಓದಿ:ವೇದಿಕೆಯಲ್ಲಿ ಸಮಂತಾ ಕಣ್ಣೀರಿಟ್ಟಿದ್ಯಾಕೆ?- ಪ್ರಚಾರದ ಗಿಮಿಕ್ ಎಂದವರಿಗೆ ನಟಿ ಸ್ಪಷ್ಟನೆ
ಮೇ 1ರಂದು ಸೂರ್ಯ (Suriya) ಜೊತೆ ನಟಿಸಿದ್ದ ‘ರೆಟ್ರೋ’ ಸಿನಿಮಾಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಬ್ಯಾಕ್ ಟು ಬ್ಯಾಕ್ ಸಿನಿಮಾಗಳು ಸಕ್ಸಸ್ ಸಿಗದೆ ಇರೋದನ್ನು ನೋಡಿ ಅಭಿಮಾನಿಗಳು ಕಂಗಲಾಗಿದ್ದಾರೆ. ಕರಾವಳಿ ಬೆಡಗಿಗೆ ಅದೃಷ್ಟ ಕೈ ಹಿಡಿಯೋದು ಯಾವಾಗ ಎಂಬುದೇ ಅಭಿಮಾನಿಗಳ ಪ್ರಶ್ನೆಯಾಗಿದೆ.
‘ಒಕಾ ಲೈಲಾ ಕೋಸಂ’ ಚಿತ್ರದ ಮೂಲಕ ಪೂಜಾ ಟಾಲಿವುಡ್‌ಗೆ ಎಂಟ್ರಿ ಕೊಟ್ಟರು. ಈ 7 ಫ್ಲಾಪ್ ಚಿತ್ರಕ್ಕೂ ಮುನ್ನ ಸಮತಾ, ಮಹರ್ಷಿ, ಅಲ ವೈಕುಂಠಪುರಮಲ್ಲೋ, ಮೋಸ್ಟ್ ಎಲಿಜಿಬಲ್ ಬ್ಯಾಚುಲರ್ ಸಿನಿಮಾಗಳ ಮೂಲಕ ಪೂಜಾ ಸಕ್ಸಸ್ ಕಂಡಿದ್ದಾರೆ.
ಸಾಲು ಸಾಲು ಸಿನಿಮಾ ಸೋತ್ರೂ ಅವರಿಗೆ ಬೇಡಿಕೆಯೇನು ಕಮ್ಮಿಯಾಗಿಲ್ಲ. ತಲೈವಾ ನಟನೆಯ ‘ಕೂಲಿ’ ಚಿತ್ರದಲ್ಲಿ ಪೂಜಾ ಸೊಂಟ ಬಳುಕಿಸಿದ್ದಾರೆ. ವಿಜಯ್ ಜೊತೆ ‘ಜನ ನಾಯಗನ್’, ಸುನೀಲ್ ಶೆಟ್ಟಿ ಪುತ್ರನ ಸಿನಿಮಾದಲ್ಲೂ ನಾಯಕಿಯಾಕಿದ್ದಾರೆ.