ಬೆಂಗಳೂರು: ಶಾಸಕರಿಗಿಂತ ಸ್ಯಾಂಡಲ್‍ವುಡ್‍ನ ನಟಿ ನಗರದಲ್ಲಿ ಪವರ್ ಫುಲ್ ಆಗಿದ್ದು, ಬೆಂಗಳೂರಿನ ಶಾಸಕರುಗಳು ಬಿಡಿಎಯಲ್ಲಿ ಕೆಲಸ ಆಗ್ತಿಲ್ಲ ಅಂತ ಹೇಳಿದ್ರೂ ಕೆಲಸ ಮಾತ್ರ ಆಗುತ್ತಿರಲಿಲ್ಲ. ಆದರೆ ಈ ನಟಿಯ ಕಡೆಯ ಫೈಲ್ ಬಂದರೆ ಬಿಡಿಎಯಲ್ಲಿ ನೀರು ಕುಡಿದಷ್ಟೆ ಸಲಿಸಾಗಿ ಕೆಲಸ ಆಗುತ್ತದೆ ಎಂದು ಕಾಂಗ್ರೆಸ್ ಶಾಸಕರು ಗರಂ ಆಗಿದ್ದಾರೆ.
ನಟಿ ಪೂಜಾ ಗಾಂಧಿ, 2-3 ಬಾರಿ ಗೆದ್ದ ಶಾಸಕರಿಗಿಂತ 5 ವರ್ಷದಲ್ಲಿ 3 ಪಕ್ಷ ಬದಲಿಸಿದ್ದಾರೆ. ನಟಿ ಮಣಿಯ ಕೆಲಸ ಬಿಡಿಎಯಲ್ಲಿ ನಡೆಯುತ್ತದೆ. ನಮ್ಮ ಕೆಲಸ ನಡೆಯಲ್ಲ ಎಂದು ನಗರದ ಕಾಂಗ್ರೆಸ್ ಶಾಸಕರು ಮಾತನಾಡಿಕೊಳ್ಳುತ್ತಿದ್ದಾರೆ.
ನಾವು ಶಾಸಕರಾಗುವ ಬದಲು ಬಣ್ಣ ಹಚ್ಚಿಕೊಂಡರೆ ಕೆಲಸ ಆಗುತ್ತಾ ಅಂತ ನಗರದ ಕಾಂಗ್ರೆಸ್ ಶಾಸಕರು ಗರಂ ಆಗಿ ಡಿಸಿಎಂ ಪರಮೇಶ್ವರ್ ರನ್ನ ಕೇಳಿದ್ದಾರೆ. ಅಷ್ಟೇ ಅಲ್ಲದೇ ಏನು ಮಾಡುತ್ತೀರೋ ಗೊತ್ತಿಲ್ಲ ಸರ್ ಬಿಡಿಎ ಆಯುಕ್ತ ರಾಕೇಶ್ ಸಿಂಗ್ ರನ್ನ ಬದಲಿಸಿ ಅಂತ ಶಾಸಕರಾದ ಬೈರತಿ ಬಸವರಾಜು ಹಾಗೂ ಸೋಮಶೇಖರ್ ನೇತೃತ್ವದ ಕಾಂಗ್ರೆಸ್ ಶಾಸಕರ ತಂಡ ಡಿಸಿಎಂ ಪರಮೇಶ್ವರ್ ಗೆ ದೂರು ನೀಡಿದ್ದಾರೆ.
ಸಮ್ಮಿಶ್ರ ಸರ್ಕಾರ ಬಂದು 5 ತಿಂಗಳು ಕಳೆದರೂ ಬಿಡಿಎಯಲ್ಲಿ ಮೊದಲಿನ ವೇಗದಲ್ಲಿ ಕೆಲಸ ಆಗುತ್ತಿಲ್ಲ ಎಂಬುದು ಕಾಂಗ್ರೆಸ್ ಶಾಸಕರ ದೂರಾಗಿದೆ. ಬಿಡಿಎ ಆಯುಕ್ತ ರಾಕೇಶ್ ಸಿಂಗ್ ಸರಿಯಾಗಿ ಕೆಲಸ ಮಾಡುತ್ತಿಲ್ಲ. ಅವರನ್ನ ಬದಲಿಸಿ ಅಂತ ನಗರದ ಕಾಂಗ್ರೆಸ್ ಶಾಸಕರು ಮೊದಲೇ ಡಿಸಿಎಂ ಪರಮೇಶ್ವರ್ ದೂರು ನೀಡಿದ್ದರು. ಎರಡು ಮೂರು ಬಾರಿ ಗೆದ್ದ ಶಾಸಕರುಗಳಾದ ನಮ್ಮ ಕೆಲಸವೇ ಬಿಡಿಎಯಲ್ಲಿ ಆಗುತ್ತಿಲ್ಲ. ಆದರೆ ನಟಿ ಪೂಜಾ ಗಾಂಧಿ ಕೆಲಸ ಮಾತ್ರ ಬಿಡಿಎಯಲ್ಲಿ ಸಲಿಸಾಗಿ ಆಗುತ್ತೆ ಅಂತ ಕಾಂಗ್ರೆಸ್ ಶಾಸಕರು ಡಿಸಿಎಂ ಪರಮೇಶ್ವರ್ ಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.
ರಾಕೇಶ್ ಸಿಂಗ್
ಈ ಹಿಂದೆ ಮಾಜಿ ಸಿಎಂ ಸಿದ್ದರಾಮಯ್ಯರಿಗೂ ದೂರು ನೀಡಿ ಬಿಡಿಎ ಆಯುಕ್ತ ರಾಕೇಶ್ ಸಿಂಗ್ ಬದಲಿಸಿ ಅಂತ ಒತ್ತಡ ಹೇರಿದ್ದರು. ಒಂದೇ ಕೆಲಸಕ್ಕೆ ನಾವು ಹತ್ತಾರು ಬಾರಿ ಬಿಡಿಎ ಮೆಟ್ಟಿಲು ಹತ್ತಿ ಇಳಿಯಬೇಕು. ಆದರೆ ನಟಿ ಪೂಜಾ ಗಾಂಧಿ ಕಡೆಯಿಂದ ಬರುವ ಫೈಲ್ ಗೆ ಮಾತ್ರ ಕೂಡಲೆ ಪ್ರತಿಕ್ರಿಯೆ ಸಿಗುತ್ತದೆ ಯಾಕೆ ಅನ್ನೋದು ಶಾಸಕರ ಪ್ರೆಶ್ನೆ ಆಗಿದೆ.
ರಾಜಕೀಯದಲ್ಲಿ ಏನೂ ಅಲ್ಲದೆ 3-4 ಪಕ್ಷ ಬದಲಿಸಿದ ಪೂಜಾಗಾಂಧಿಗೆ ಇರುವ ಬೆಲೆ, ಮೂರು ಮೂರು ಬಾರಿ ಗೆದ್ದು ಶಾಸಕರಾದ ನಮ್ಮ ಮಾತಿಗೆ ಇಲ್ವಾ ಅಂತ ಗರಂ ಆಗಿ ಪ್ರಶ್ನಿಸಿದ್ದಾರೆ. ಏನು ಮಾಡುತ್ತೀರೋ ಗೊತ್ತಿಲ್ಲ, ನಮ್ಮ ಸಮಸ್ಯೆ ಬಗೆ ಹರಿಸಿ. ಬಿಡಿಎ ಆಯುಕ್ತ ರಾಕೇಶ್ ಸಿಂಗ್ ರನ್ನ ಮೊದಲು ಬದಲಿಸಿ ಅಂತ ಪಟ್ಟು ಹಿಡಿದಿದ್ದರು ಎಂದು ಪಕ್ಷದ ಮೂಲಗಳಿಂದ ತಿಳಿದು ಬಂದಿದೆ.
ಶಾಸಕರ ಒತ್ತಾಯಕ್ಕೆ ಮಣಿದು ಸ್ವಲ್ಪ ಸಮಯಾವಕಾಶ ಕೊಡಿ ಎಲ್ಲವನ್ನು ಸರಿಪಡಿಸುತ್ತೀನಿ ಅಂತ ಪರಮೇಶ್ವರ್ ಶಾಸಕರನ್ನ ಸಮಾಧಾನ ಪಡಿಸಿದ್ದಾರೆ ಎಂದು ತಿಳಿದು ಬಂದಿದೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv
ಪಬ್ಲಿಕ್ ಟಿವಿ ಆಪ್ ಡೌನ್ ಲೋಡ್ ಮಾಡಿ: play.google.com/publictv
ಯೂ ಟ್ಯೂಬ್‍ನಲ್ಲಿ ಪಬ್ಲಿಕ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿ: youtube.com/publictvnewskannada
ಫೇಸ್‍ಬುಕ್‍ನಲ್ಲಿ ಪಬ್ಲಿಕ್ ಟಿವಿಯನ್ನು ಲೈಕ್ ಮಾಡಿ: facebook.com/publictv
ಟ್ವಿಟ್ಟರ್‌ನಲ್ಲಿ ಪಬ್ಲಿಕ್ ಟಿವಿಯನ್ನು ಫಾಲೋ ಮಾಡಿ: twitter.com/publictvnews