ರಾಮ್ ಗೋಪಾಲ್ ವರ್ಮಾ ನಿರ್ದೇಶನದ ‘ಲಡಕಿ’ ಸಿನಿಮಾ ವಿಶ್ವದಾದ್ಯಂತ ಬಿಡುಗಡೆ ಆಗುತ್ತಿದೆ. ಈ ಸಿನಿಮಾದ ನಾಯಕಿ ಪೂಜಾ ಭಾಲೇಕರ್ ಅಂತೂ ಅಚ್ಚರಿ ಮೇಲೆ ಅಚ್ಚರಿ ಪಡುವಷ್ಟು ಬೋಲ್ಡ್, ಸೆಕ್ಸಿಯಾಗಿ ಕಾಣಿಸಿಕೊಂಡಿದ್ದಾರೆ. ಬಹುತೇಕ ಬಿಕಿನಿಯ ಫೋಟೋಗಳನ್ನು ರಾಮ್ ಗೋಪಾಲ್ ವರ್ಮಾ ಸಿನಿಮಾದ ಪ್ರಚಾರಕ್ಕಾಗಿ ಬಳಸಿಕೊಳ್ಳುತ್ತಿದ್ದಾರೆ. ಹಾಗಾಗಿ ಪೂಜಾ ಭಾಲೇಕರ್ ಅವರನ್ನು ಹಲವು ರೀತಿಯಲ್ಲಿ ಪ್ರಶ್ನೆಗಳನ್ನು ಕೇಳುತ್ತಿದ್ದಾರಂತೆ ಅಭಿಮಾನಿಗಳು.
Advertisement
ಈ ಸಿನಿಮಾದಲ್ಲಿ ನೀವು ಬಿಕಿನಿ ಹಾಗೂ ಬಹುತೇಕ ತುಂಡುಡುಗೆಯಲ್ಲೇ ಕಾಣಿಸಿಕೊಂಡಿದ್ದೀರಿ. ಇಂತಹ ಕಾಸ್ಟ್ಯೂಮ್ ಹಾಕಿ ಶೂಟ್ ಮಾಡುವಾಗ ಮುಜುಗರ ಅನಿಸಲಿಲ್ಲವಾ? ಎಂದು ಪ್ರಶ್ನೆ ಮಾಡಿದ್ದಾರೆ. ಈ ಪ್ರಶ್ನೆಗೆ ಅಷ್ಟೇ ಹಾಟ್ ಹಾಟ್ ಆಗಿಯೇ ಉತ್ತರ ನೀಡಿರುವ ಪೂಜಾ ಭಾಲೇಕರ್, ‘ಸಿನಿಮಾದ ಹೀರೋಗಳು ಆದರೆ ಟಿಶರ್ಟ್ ತೆಗೆದು ಆಬ್ಸ್ ತೋರಿಸುತ್ತಾರೆ. ಇಂತಹ ಸ್ವಾತಂತ್ರ್ಯವನ್ನು ನಮಗೂ ಏಕೆ ಕೊಡಬಾರದು. ನೀವು ಯಾಕೆ ಅದನ್ನು ಬೇರೆ ರೀತಿಯಲ್ಲಿ ತೆಗೆದುಕೊಳ್ಳುತ್ತೀರಿ ಎಂದು ಉತ್ತರಿಸಿದ್ದಾರೆ. ಇದನ್ನೂ ಓದಿ:ಆಗಸ್ಟ್ ನಲ್ಲಿ ‘ಅವನೇ ಶ್ರೀಮನ್ನಾರಾಯಣ’ ನಿರ್ದೇಶಕರ ಸಿನಿಮಾ ಟೈಟಲ್ ಲಾಂಚ್ : ಶಿವರಾಜ್ ಕುಮಾರ್ ಹೀರೋ
Advertisement
Advertisement
ಯಾವ ದೃಶ್ಯದಲ್ಲಿ ಯಾವ ರೀತಿಯ ಬಟ್ಟೆ ಹಾಕಿಕೊಳ್ಳಬೇಕು ಎಂದು ನಾನು ಮತ್ತು ನಿರ್ದೇಶಕರು ಒಟ್ಟಿಗೆ ಕೂತು ಚರ್ಚೆ ಮಾಡುತ್ತಿದ್ದೆವು. ಸೀರೆ ಹಾಕಿಕೊಂಡು ಫೈಟ್ ಮಾಡುವುದಕ್ಕೆ ಆಗುತ್ತಾ? ಎಂದೂ ಪ್ರಶ್ನೆ ಮಾಡಿರುವ ಪೂಜಾ, ನಾನು ಯಾವ ರೀತಿಯ ಸಿನಿಮಾಗಳಲ್ಲಿ ನಟಿಸುತ್ತೇನೆ ಮತ್ತು ಎಂತಹ ಪಾತ್ರವನ್ನು ಮಾಡುತ್ತೇನೆ ಅದು ನನ್ನ ಆಯ್ಕೆ. ಸಮಾಜ ಏನೇ ಹೇಳಿದರೂ, ನಾನು ಅದಕ್ಕೆ ತಲೆ ಕೆಡಿಸಿಕೊಳ್ಳುವುದಿಲ್ಲ ಎಂದು ಬೋಲ್ಡ್ ಸ್ಟೇಟ್ ಮೆಂಟ್ ಕೊಟ್ಟಿದ್ದಾರೆ ಪೂಜಾ.