ಪರಪ್ಪನ ಅಗ್ರಹಾರದಿಂದ ಇಂದು (ಡಿ.17) ಪವಿತ್ರಾ ಗೌಡ (Pavithra Gowda) ರಿಲೀಸ್ ಆದ ಬೆನ್ನಲ್ಲೇ ನಟಿಯ ಮಾಜಿ ಪತಿ ಸಂಜಯ್ ಸಿಂಗ್ (Sanjay Singh) ಪ್ರತಿಕ್ರಿಯಿಸಿ, ಮುಂದೆಯೂ ದರ್ಶನ್ (Darshan) ಜೊತೆ ಪವಿತ್ರಾ ಚೆನ್ನಾಗಿರುತ್ತೇನೆ ಅಂದರೆ ಇರಲಿ ಎಂದು ಮಾತನಾಡಿದ್ದಾರೆ. ಇದನ್ನೂ ಓದಿ:ಹೊಸ ಪ್ರತಿಭೆಗಳ ಜೊತೆ ಕೈ ಜೋಡಿಸಿದ ಶ್ರೀಮುರಳಿ- ಬರ್ತ್‌ಡೇಗೆ ‘ಪರಾಕ್’ ಸಿನಿಮಾ ಅನೌನ್ಸ್
ಪವಿತ್ರಾಗೆ ಜಾಮೀನು ಸಿಕ್ಕಿರೋದು ಖುಷಿ ಆಗುತ್ತಿದೆ. ಈ ಕೇಸ್ ಮುಗಿದು ಹೋದರೆ ಸಾಕು ಅನಿಸುತ್ತಿದೆ. ಯಾರು ತಪ್ಪು ಮಾಡಿದ್ದಾರೆ. ಅವರಿಗೆ ಶಿಕ್ಷೆ ಸಿಗಲಿ. ನಾನು ಮೊದಲೇ ಹೇಳ್ತಿದ್ದೆ ಈಗಲೂ ಹೇಳ್ತಿದ್ದೀನಿ, ಪವಿತ್ರಾ ಮುಗ್ಧೆ ಆಕೆ ಯಾವ ತಪ್ಪು ಮಾಡಿಲ್ಲ. ಇನ್ಮುಂದೆಯೂ ದರ್ಶನ್ ಜೊತೆ ಪವಿತ್ರಾ ಚೆನ್ನಾಗಿರುತ್ತಾಳೆ ಅಂದರೆ ಇರಲಿ. ಆಕೆ ಸ್ಟ್ರಾಂಗ್ ಲೇಡಿ, ಈ ಪ್ರಕರಣದಲ್ಲಿ ಪವಿತ್ರಾದೇನು ತಪ್ಪಿಲ್ಲ. ಆಕೆಗೆ ಕೆಟ್ಟ ಮೆಸೇಜ್ ಬಂದಿರೋದಕ್ಕೆ ಯಾರಿಗೆ ಹೇಳಬೇಕಿತ್ತೋ ಅವರಿಗೆ ತಿಳಿಸಿದ್ದಾರೆ. ಇದರಲ್ಲಿ ಆಕೆಯದ್ದು ಏನೂ ತಪ್ಪಿಲ್ಲ ಎಂದಿದ್ದಾರೆ. ಇನ್ನೂ ದರ್ಶನ್ ಆಸ್ಪತ್ರೆಯಲ್ಲಿದ್ದಾರೆ ಅಂತ ಗೊತ್ತಾಯ್ತು, ಅವರು ಬೇಗ ಚೇತರಿಸಿಕೊಳ್ಳಲಿ ಎಂದರು.
ಇನ್ನೂ ಪವಿತ್ರಾ ಮನೆ ದೇವರು ವಜ್ರಮುನೇಶ್ವರ, ಹೀಗಾಗಿ ಜೈಲಿಂದ ರಿಲೀಸ್ ಆದ್ಮೇಲೆ ಆ ದೇವರಿಗೆ ಹರಕೆ ತೀರಿಸಿದ್ದಾರೆ. ಈ ಹಿಂದೆ ನಾನು ಮತ್ತು ಪವಿತ್ರಾ ಎಷ್ಟೋ ಸಲ ಆ ದೇವಸ್ಥಾನಕ್ಕೆ ಹೋಗಿದ್ದೇವೆ. ನಮ್ಮ ಮಗಳ ಮುಡಿ ಕೊಡುವ ಶಾಸ್ತ್ರವನ್ನು ಅಲ್ಲೇ ಮಾಡಿದ್ದೇವೆ. ಅಲ್ಲಿ ನಮ್ಮ ಕೆಲಸ ಆಗೋದಿದ್ರೆ ದೇವರು ಬಲಗಡೆಯಿಂದ ಹೂ ಪ್ರಸಾದ ಕೊಡುತ್ತದೆ. ಪವಿತ್ರಾಗೆ ಆ ದೇವರ ಬಗ್ಗೆ ಭಾರೀ ನಂಬಿಕೆ ಇದೆ ಎಂದು ಹಳೆಯ ದಿನಗಳನ್ನು ಸ್ಮರಿಸಿದರು.
ಈಗ ಬೆಂಗಳೂರಲ್ಲಿ ಇದ್ದರೂ ನಾನಂತೂ ಅವರಿಗೆ ಕಾಲ್ ಮಾಡಲ್ಲ ಮಾತಾಡಲ್ಲ. ಆದರೆ ನಾನು ಅವರ ಕಾಲ್‌ಗೆ ಕಾಯುತ್ತಿದ್ದೇನೆ. ಅವರಾಗಿಯೇ ಕಾಲ್ ಮಾಡಿದ್ದರೂ ನನಗೆ ಖುಷಿ. ಅವರ ಮೇಲಿನ ನನ್ನ ಪ್ರೀತಿ ಶಾಶ್ವತವಾಗಿ ಇರುತ್ತದೆ. ಪವಿತ್ರಾಗೆ ಸದಾ ಒಳ್ಳೆಯದಾಗಲಿ ಅಂತ ಬಯಸುತ್ತೇನೆ ಎಂದಿದ್ದಾರೆ ಮಾಜಿ ಪತಿ.