‘ಮಿಲನಾ’ (Milana) ನಟಿ ಪಾರ್ವತಿ ಮೆನನ್ (Parvathy Menon) ದಕ್ಷಿಣ ಸ್ಟಾರ್ ನಟಿಯರಲ್ಲಿ ಒಬ್ಬರು. ತಮ್ಮ ಸಹಜ ನಟನೆಯ ಮೂಲಕ ಪಾರ್ವತಿ ಗಮನ ಸೆಳೆದಿದ್ದಾರೆ. ಸದ್ಯ ಖಾಸಗಿ ಬದುಕಿನ ವಿಚಾರವಾಗಿ ನಟಿ ಸುದ್ದಿಯಲ್ಲಿದ್ದಾರೆ. ಗುಟ್ಟು ಗುಟ್ಟಾಗಿ ನಟಿ ಮದುವೆಯಾದ್ರಾ? ಎಂಬ ಅನುಮಾನ ಅಭಿಮಾನಿಗಳಲ್ಲಿ ಕಾಡುತ್ತಿವೆ. ಪಾರ್ವತಿ ಮದುವೆಯಾಗಿರುವ (Wedding) ಫೋಟೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಇದನ್ನೂ ಓದಿ:ಅಂಬಾನಿ ಮನೆ ಮಗನ ಪ್ರಿ ವೆಡ್ಡಿಂಗ್‌ನಲ್ಲಿ ಸೆಲೆಬ್ರಿಟಿಗಳ ದಂಡು
ಬಹುಭಾಷಾ ನಟಿಯಾಗಿ ಗುರುತಿಸಿಕೊಂಡಿರುವ ಪಾರ್ವತಿಗೆ ಈಗ 36 ವರ್ಷ. ಸಾಮಾನ್ಯವಾಗಿ ಏಲ್ಲೇ ಹೋದರೂ ಮೊದಲು ಎದುರಾಗುವ ಪ್ರಶ್ನೆಯೇ ಮದುವೆ ಯಾವಾಗ? ಎಂದೇ ಕೇಳುತ್ತಾರೆ. ಸಿನಿಮಾಗಳಲ್ಲಿ ಬ್ಯುಸಿಯಿರುವ ನಟಿ ದಿಢೀರ್ ಎಂದು ಮದುವೆ ಫೋಟೋ ಹರಿಬಿಟ್ಟಿದಕ್ಕೆ ಫ್ಯಾನ್ಸ್ ದಂಗಾಗಿದ್ದಾರೆ. ಅಸಲಿಗೆ ಇದು ರಿಯಲ್ ಮದುವೆನಾ? ಅಲ್ಲವೇ ಅಲ್ಲ. ರೀಲ್ ಮದುವೆ ಅಂದರೆ ನೀವು ನಂಬಲೇಬೇಕು.
- Advertisement
- Advertisement
‘ಉಲ್ಲೋಜುಕ್ಕು’ (Ullozhukku) ಎಂಬ ಸಿನಿಮಾದಲ್ಲಿ ಪಾರ್ವತಿ ನಟಿಸಿದ್ದಾರೆ. ಪ್ರಶಾಂತ್ ಮುರಳಿ ಈ ಚಿತ್ರದ ನಾಯಕ. ಸದ್ಯ ಈ ಚಿತ್ರದ 45 ಸೆಕೆಂಡಿನ ಪ್ರೋಮೋವೊಂದು ರಿಲೀಸ್ ಮಾಡಿದ್ದಾರೆ. ಪಾರ್ವತಿ ಮತ್ತು ಪ್ರಶಾಂತ್ ಮುರಳಿ ದಂಪತಿಗಳ ಪಾತ್ರ ನಿರ್ವಹಿಸುತ್ತಿದ್ದಾರೆ. ರೀಲ್‌ನಲ್ಲಿ ಆಗಷ್ಟೇ ಮದುವೆಯಾಗಿರುವ ನವಜೋಡಿ ದೋಣಿಯಲ್ಲಿ ಕುಳಿತು ಕ್ಯಾಮೆರಾಗಳಿಗೆ ಪೋಸ್ ನೀಡಿದ್ದಾರೆ. ಸದ್ಯ ಪ್ರೋಮೋ ಎಲ್ಲರ ಗಮನ ಸೆಳೆದಿದೆ. ಅಂದಹಾಗೆ, ಇದೇ ಜೂನ್ 21ಕ್ಕೆ ಸಿನಿಮಾ ರಿಲೀಸ್ ಆಗಲಿದೆ.
ಇನ್ನೂ ಮಾಲಿವುಡ್ (Mollywood) ನಟಿ ಪಾರ್ವತಿ ಅವರು ಕನ್ನಡದ ಮಿಲನಾ, ಪೃಥ್ವಿ, ಮಳೆ ಬರಲಿ ಮಂಜು ಇರಲಿ, ಅಂದರ್ ಬಾಹರ್ ಸೇರಿದಂತೆ ಹಲವು ಸಿನಿಮಾಗಳಲ್ಲಿ ನಟಿಸಿದ್ದಾರೆ.