ಬಾಲಿವುಡ್ ಖ್ಯಾತ ನಟಿ ಪರಿಣಿತಿ ಚೋಪ್ರಾ ತಮ್ಮ ಮದುವೆ ಬಗ್ಗೆ ಮಾತನಾಡಿದ್ದಾರೆ. ಇನ್ನೂ ತಾವು ಸಿಂಗಲ್ ಇರುವುದಾಗಿ ಹೇಳಿಕೊಂಡಿರುವ ಅವರು, ಮಿಂಗಲ್ ಆಗೋಕೆ ರೆಡಿ ಇರುವುದಾಗಿಯೂ ತಿಳಿಸಿದ್ದಾರೆ. ಬಾಲಿವುಡ್ ನಲ್ಲಿ ನಡೆಯುತ್ತಿರುವ ಮದುವೆಗಳನ್ನು ಕಂಡಾಗ ತಮಗೂ ಮದುವೆ ಆಗಬೇಕು ಎನ್ನುವ ಆಸೆ ಮೂಡುತ್ತಂತೆ. ಹಾಗಾಗಿ ಒಳ್ಳೆಯ ಹುಡುಗ ಇದ್ದರೆ ತಿಳಿಸಿ ಎಂದಿದ್ದಾರೆ.
ಸಂದರ್ಶನವೊಂದರಲ್ಲಿ ಮಾತನಾಡಿರುವ ಪರಿಣಿತಿ, ‘ಅನೇಕ ನಟ ನಟಿಯರು ಮದುವೆ ಆಗುತ್ತಿದ್ದಾರೆ. ಅವರನ್ನೆಲ್ಲ ನೋಡುತ್ತಿದ್ದರೆ, ನನಗೂ ಮದುವೆ ಆಗುವ ಆಸೆ ಆಗುತ್ತದೆ. ಮಕ್ಕಳನ್ನು ಹೊಂದಬೇಕು ಅನಿಸುತ್ತದೆ. ನಾನಿನ್ನೂ ಸಿಂಗಲ್. ಮಿಂಗ್ ಆಗುವುದಕ್ಕೆ ತಯಾರಿದ್ದೇನೆ. ಹುಡುಗ ಸಿಗಬೇಕು ಅಷ್ಟೇ’ ಎಂದು ಅವರು ತಮ್ಮ ವೈಯಕ್ತಿಕ ಜೀವನದ ಬಗ್ಗೆ ಮಾತನಾಡಿದ್ದಾರೆ.
ಡೇಟಿಂಗ್ ವಿಚಾರವನ್ನೂ ಹೇಳಿಕೊಂಡಿರುವ ಪರಿಣಿತಿ, ತಾವು ಈವರೆಗೂ ಯಾರೊಂದಿಗೂ ಡೇಟಿಂಗ್ ಮಾಡಿಲ್ಲ ಎನ್ನುತ್ತಾರೆ. ಡೇಟಿಂಗ್ ವಿಚಾರದಲ್ಲಿ ನಾನು ದೂರ. ಯಾರೊಂದಿಗೂ ನನ್ನ ಹೆಸರು ತಳುಕು ಹಾಕಿಕೊಂಡಿಲ್ಲ. ಆ ರೀತಿಯಲ್ಲಿ ಅಂತರ ಕಾಪಾಡಿಕೊಂಡು ಬಂದಿದ್ದೇನೆ. ಹಾಗಾಗಿ ಒಳ್ಳೆಯ ಹುಡುಗ ಸಿಗುತ್ತಾನೆ ಎನ್ನುವ ನಂಬಿಕೆ ನನಗಿದೆ. ಆದಷ್ಟು ಬೇಗ ಸಿಗಲಿ ಎಂದಿದ್ದಾರೆ.
15ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿರುವ ಅವರು, ಹೇಳಿಕೊಳ್ಳುವಂತಹ ಯಶಸ್ಸು ಸಿಗದೇ ಇದ್ದರೂ, ಹ್ಯಾಪಿ ಜೀವನ ಕಳೆಯುತ್ತಿದ್ದಾರಂತೆ. ಸಿಕ್ಕಿರುವ ಪಾತ್ರಗಳು ತಮಗೆ ಖುಷಿ ಕೊಟ್ಟಿರುವುದರಿಂದ ತಮಗೆ ಯಾವುದೇ ನೋವಿಲ್ಲ ಎಂದಿದ್ದಾರೆ. ಕಿರುತೆರೆಯಲ್ಲೂ ಪರಿಣಿತಿ ಬ್ಯುಸಿಯಾಗಿದ್ದು, ಹಿರಿ ಮತ್ತು ಕಿರುತೆರೆಯ ಕೆಲಸವನ್ನು ತೂಗಿಸಿಕೊಂಡು ಹೋಗುತ್ತಿದ್ದಾರಂತೆ.