ಬಾಲಿವುಡ್ ನಟಿ ಪರಿಣಿತಿ ಚೋಪ್ರಾ (Parineeti Chopra) ಇತ್ತೀಚೆಗೆ ರಾಜಕಾರಣಿ ರಾಘವ್ ಚಡ್ಡಾ (Raghav Chadha) ಜೊತೆ ಮದುವೆಯಾಗಿದ್ದಾರೆ. ಈ ಬೆನ್ನಲ್ಲೇ ಪರಿಣಿತಿ ವೆಕೇಷನ್‌ಗಾಗಿ ಮಾಲ್ಡೀವ್ಸ್‌ಗೆ ಹಾರಿದ್ದಾರೆ. ಬೋಲ್ಡ್ ಫೋಟೋ ಶೇರ್ ಮಾಡಿ ಇದು ಹನಿಮೂನ್ ಫೋಟೋ ಅಲ್ಲ ಅಂತ ಮೊದಲೇ ಕ್ಲ್ಯಾರಿಟಿ ಕೊಟ್ಟಿದ್ದಾರೆ.
ಸಮುದ್ರ ತೀರದಲ್ಲಿ ಸ್ವಿಮಿಂಗ್ ಪೂಲ್‌ನಲ್ಲಿ ಬೋಲ್ಡ್ ಡ್ರೆಸ್ ಧರಿಸಿ ಪರಿಣಿತಿ ನಿಂತಿದ್ದಾರೆ. ಅವರ ಕೈಯಲ್ಲಿ ಇನ್ನೂ ಮೆಹೆಂದಿ ಹಾಗೆಯೇ ಇದೆ. ಈ ಫೋಟೋ ನೋಡಿ ಅನೇಕರು ಹನಿಮೂನ್ ಫೋಟೋ ಎಂದು ಭಾವಿಸಿದ್ದಾರೆ. ಅದಕ್ಕೆ ಫೋಟೋ ಶೇರ್ ಮಾಡುವಾಗಲೇ ನಟಿ, ಇದು ಹನಿಮೂನ್ ಫೋಟೋ ಅಲ್ಲ, ಅತ್ತಿಗೆ ತೆಗೆದ ಫೋಟೋ ಎಂದು ಸ್ಪಷ್ಟನೆ ನೀಡಿದ್ದಾರೆ. ಹುಡುಗಿಯರ ಟ್ರಿಪ್ ಎಂದು ಕ್ಲ್ಯಾರಿಟಿ ನೀಡಿದ್ದಾರೆ.
View this post on Instagram
ಕೆಲ ನೆಟ್ಟಿಗರು, ನೀವು ಮೊದಲೇ ಸ್ಪಷ್ಟನೆ ನೀಡಿದ್ದು ಒಳ್ಳೆಯದಾಯ್ತು ಎಂದಿದ್ದಾರೆ. ಇನ್ನೂ ಕೆಲವರು ಪತಿಯನ್ನು ಬಿಟ್ಟು ಟ್ರಿಪ್‌ಗೆ ಹೋದ್ರಾ ಎಂದು ಪ್ರಶ್ನೆ ಮಾಡಿದ್ದಾರೆ. ಇದನ್ನೂ ಓದಿ:ನವೆಂಬರ್ ನಲ್ಲಿ ಅಜಯ್ ರಾವ್ ನಟನೆಯ ‘ಮನ್ ರೇ’ ಶೂಟಿಂಗ್
ಹಲವು ವರ್ಷಗಳಿಂದ ಪ್ರೀತಿಸಿ ಪರಿಣಿತಿ-ರಾಘವ್, ಗುರುಹಿರಿಯರ ಸಮ್ಮತಿ ಪಡೆದು ಮದುವೆಯಾಗಿದ್ದಾರೆ. ಸೆ.24ರಂದು ರಾಜಸ್ಥಾನದಲ್ಲಿ ಅದ್ದೂರಿಯಾಗಿ ಮದುವೆ ನಡೆದಿದೆ. ಸಾನಿಯಾ ಮಿರ್ಜಾ, ಮನೀಷ್ ಮಲ್ಹೋತ್ರಾ ಸೇರಿದಂತೆ ಹಲವರು ಮದುವೆಯಲ್ಲಿ ಭಾಗಿಯಾಗಿದ್ದರು.
[web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]