ಬಾಲಿವುಡ್ ಖ್ಯಾತ ನಟಿ ಪರಿಣಿತಿ ಚೋಪ್ರಾ (Parineeti Chopra) ಮದುವೆ ಕೆಲಸಗಳಲ್ಲಿ ಬ್ಯುಸಿಯಾಗಿದ್ದಾರೆ. ಪ್ರೀತಿಸಿದ ಗೆಳೆಯ, ರಾಜಕಾರಣಿ ರಾಘವ್ ಚಡ್ಡಾ ಜೊತೆ ಹೊಸ ಜೀವನಕ್ಕೆ ಕಾಲಿಡುತ್ತಿದ್ದು, ಇಬ್ಬರೂ ಸೇರಿ ಗಣ್ಯರಿಗೆ ಮದುವೆ (Marriage) ಆಮಂತ್ರಣ ಪತ್ರಿಕೆ ಹಂಚುವಲ್ಲಿ ನಿರತರಾಗಿದ್ದಾರೆ. ಒಟ್ಟು ಇನ್ನೂರು ಗಣ್ಯರಿಗೆ ಅಂದು ಆಹ್ವಾನ ನೀಡುತ್ತಿದ್ದಾರೆ ಎಂದು ಹೇಳಲಾಗುತ್ತಿದೆ. ಕೆಲ ಗಣ್ಯರು ಹೊರ ದೇಶದವರು ಆಗಿದ್ದಾರೆ ಎನ್ನುವುದು ವಿಶೇಷ.
ಪರಿಣಿತಿ ಚೋಪ್ರಾ-ರಾಘವ್ ಚಡ್ಡಾ (Raghav Chadha) ಜೋಡಿ ಇದೇ ಸೆ.24ಕ್ಕೆ ದಾಂಪತ್ಯ ಜೀವನಕ್ಕೆ ಕಾಲಿಡುತ್ತಿದ್ದಾರೆ. ಮದುವೆ ಬಳಿಕ ಆರತಕ್ಷತೆ ಕಾರ್ಯಕ್ರಮ ಇರಲಿದ್ದು, ಮದುವೆ (Wedding) ಆರತಕ್ಷತೆಯ ಕಾರ್ಡ್ ಇದೀಗ ಸೋಷಿಯಲ್ ಮೀಡಿಯಾದಲ್ಲಿ ಸದ್ದು ಮಾಡ್ತಿದೆ.
ರಾಘವ್- ಪರಿಣಿತಿ ಸೆ.24ರಂದು ಉದಯಪುರದಲ್ಲಿ (Udaipur) ವೈವಾಹಿಕ ಜೀವನಕ್ಕೆ ಕಾಲಿಡಲಿದ್ದಾರೆ. ಪಂಜಾಬ್ ಸಂಪ್ರದಾಯದಂತೆ ಮದುವೆ ನಡೆಯಲಿದೆ. ವಿವಾಹ ಸಮಾರಂಭಗಳು ಸೆ.22ರಿಂದ ಪ್ರಾರಂಭವಾಗಲಿದ್ದು, ಸೆ.24ರವರೆಗೆ ನಡೆಯಲಿದೆ. ಮದುವೆಯ ಕುರಿತು ಸಂಪೂರ್ಣ ವಿವರ ಈ ಕಾರ್ಡ್‍ನಲ್ಲಿದೆ. ಸೆ.30ರಂದು ಚಂಡೀಗಢದ ತಾಜ್ ಹೋಟೆಲ್‍ನಲ್ಲಿ ಆರತಕ್ಷತೆ ನಡೆಯಲಿದೆ. ಇದನ್ನೂ ಓದಿ:ಕೈಯಲ್ಲಿ ಎದೆಮುಚ್ಚಿಕೊಂಡು ಸೋನು ಪೋಸ್- ಮತ್ಸ್ಯ ಕನ್ಯೆ ಅಂದ್ರು ಫ್ಯಾನ್ಸ್
ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್- ಪಂಜಾಬ್ ಸಿಎಂ ಭಗವಂತ್ ಮಾನ್ ಸೇರಿದಂತೆ ಇತರ ರಾಜಕೀಯ ನಾಯಕರು ಉದಯಪುರಕ್ಕೆ ಬರಲಿದ್ದಾರೆ. ಅವರಿಗೆ ವಿಶೇಷ ವ್ಯವಸ್ಥೆ ಮಾಡಲಾಗಿದೆ. ಇದಲ್ಲದೇ ಮದುವೆ ನಡೆಯುವ ಲೀಲಾ ಪ್ಯಾಲೇಸ್ ಬಳಿ ಇರುವ ಐಷಾರಾಮಿ ಹೋಟೆಲ್‍ಗಳನ್ನು ಕಾಯ್ದಿರಿಸಲಾಗಿದೆ. ಪರಿಣಿತಿ, ಸಹೋದರಿ ಪ್ರಿಯಾಂಕಾ ಚೋಪ್ರಾ(Priyanka Chopra)- ನಿಕ್ ಜೋನಾಸ್ ಕೂಡ ಮದುವೆಯಲ್ಲಿ ಪಾಲ್ಗೊಳ್ಳಲಿದ್ದಾರೆ.
ಹಲವು ವರ್ಷಗಳ ಪ್ರೀತಿಗೆ ಪರಿಣಿತಿ- ರಾಘವ್ ಮೇ 13ರಂದು ಉಂಗುರದ ಮುದ್ರೆ ಒತ್ತಿದ್ದರು. ಕುಟುಂಬಸ್ಥರ ಸಮ್ಮುಖದಲ್ಲಿ ಅದ್ದೂರಿಯಾಗಿ ಪರಿಣಿತಿ ಚೋಪ್ರಾ ಎಂಗೇಜ್ ಆಗಿದ್ದರು.
Web Stories