ಬಾಲಿವುಡ್ ನಟಿ ಪರಿಣಿತಿ ಚೋಪ್ರಾ ಅವರ ಪತಿ, ರಾಜಕಾರಣಿ ರಾಘವ್ ಚಡ್ಡಾ ಅವರ ಕಣ್ಣಿಗೆ ಬಲವಾಗಿ ಏಟು ಬಿದ್ದಿರುವ ಪರಿಣಾಮ, ಅವರಿಗೆ ಲಂಡನ್ ನಲ್ಲಿ ಶಸ್ತ್ರ ಚಿಕಿತ್ಸೆ (Surgery) ನಡೆಸಲಾಗಿದೆ. ಕಣ್ಣಿನ ರೆಟಿನಾದಲ್ಲಿ ರಂಧ್ರವಿರುವ ಕಾರಣದಿಂದಾಗಿ ಶಸ್ತ್ರ ಚಿಕಿತ್ಸೆ ಮಾಡಲಾಗಿದೆ ಎನ್ನುವ ಮಾಹಿತಿ ಇದೆ. ಸದ್ಯ ಲಂಡನ್ (London) ನಲ್ಲೇ ಪತಿಯ ಆರೈಕೆಯಲ್ಲಿದ್ದಾರೆ ಪರಿಣಿತಿ.
ಈ ನಡುವೆ ಪರಿಣಿತಿ ಚೋಪ್ರಾ (Parineeti Chopra) ವೈವಾಹಿಕ ಬದುಕಿನ ಬಗ್ಗೆ ಈಗ ಭಾರೀ ಚರ್ಚೆ ಆಗುತ್ತಿದೆ. ಮದುವೆಯಾಗಿ ಮಕ್ಕಳಿರುವ ರಾಘವ್ (Raghav Chadha) ಜೊತೆ ಪರಿಣಿತಿ ಮದುವೆಯಾದ್ರಾ? ಎಂಬ ವಿಚಾರ ಚರ್ಚೆಯಾಗುತ್ತಿದೆ. ರಾಘವ್‌ಗೆ ಇದು 2ನೇ ಮದುವೆನಾ ಎಂದು ನೆಟ್ಟಿಗರು ಪ್ರಶ್ನಿಸುತ್ತಿದ್ದಾರೆ.
ಪರಿಣಿತಿ ಇತ್ತೀಚೆಗೆ ಸಂದರ್ಶನವೊಂದರಲ್ಲಿ ನೀಡಿರುವ ಹೇಳಿಕೆ ಈಗ ರಾಘವ್ ಮೊದಲ ಮದುವೆ ಬಗ್ಗೆ ಚರ್ಚೆ ಹುಟ್ಟು ಹಾಕಿದೆ. ನಾವಿಬ್ಬರೂ ಲಂಡನ್ ಕಾರ್ಯಕ್ರಮದಲ್ಲಿ ಭೇಟಿಯಾದೆವು. ಸಾಮಾನ್ಯವಾಗಿ ನಾನು ಜಸ್ಟ್ ಹಾಯ್ ಹೇಳಿ ಮುಂದುವರಿಯುತ್ತೇನೆ. ಆದರೆ ರಾಘವ್ ವಿಚಾರದಲ್ಲಿ ಹಾಗಾಗಲಿಲ್ಲ, ನಾನು ಅವರಲ್ಲಿ ಉಪಾಹಾರಕ್ಕಾಗಿ ಭೇಟಿಯಾಗೋಣ ಎಂದು ಹೇಳಿದೆ.
ಅಂದು ನಮ್ಮ ಗ್ಯಾಂಗ್ ಕೂಡ ಇತ್ತು, ನಮ್ಮ ಈ ಟೀಮ್‌ನಲ್ಲಿ 8 ರಿಂದ 10 ಜನರಿದ್ದರು. ಹಾಗೂ ಮರುದಿನ ನಾವು ಭೇಟಿಯಾದೆವು. ನನಗೆ ಆತನ ಬಗ್ಗೆ ಯಾವುದೇ ಐಡಿಯಾಗಳಿರಲಿಲ್ಲ, ಆತ ಯಾರು ಏನು ಮಾಡುತ್ತಿದ್ದಾನೆ ಎಂಬ ಬಗ್ಗೆ ನನಗೆ ತಿಳಿದಿರಲಿಲ್ಲ. ಭೇಟಿಯಾದ ಕೆಲವೇ ನಿಮಿಷಗಳಲ್ಲಿ ನಾನು ಇವರನ್ನೇ ಮದುವೆಯಾಗುತ್ತೇನೆ ಎಂದು ಅನಿಸಿತು.
ಅವರಿಗೆ ಮದುವೆಯಾಗಿದೆಯೋ, ಮಕ್ಕಳಿದ್ದಾರೋ ಅಥವಾ ಅವರ ವಯಸ್ಸು ಎಷ್ಟಿರಬಹುದು ಎಂದು ಯಾವುದೇ ವಿಚಾರ ನನಗೆ ತಿಳಿದಿರಲಿಲ್ಲ ಎಂದು ಪತಿ ಜೊತೆಗಿನ ಮೊದಲ ಭೇಟಿಯ ಬಗ್ಗೆ ಪರಿಣಿತಿ ಮಾತನಾಡಿದ್ದಾರೆ. ಈ ಹೇಳಿಕೆಯನ್ನು ಕೇಳಿ ಫ್ಯಾನ್ಸ್ ಕನ್ಫೂಸ್ ಆಗಿದ್ದಾರೆ. ಸದ್ಯ ಚರ್ಚೆಯಾಗುತ್ತಿರುವ ರಾಘವ್ ಮೊದಲ ಮದುವೆ ಮ್ಯಾಟರ್ ನಿಜನಾ? ಸುಳ್ಳಾ ಎಂಬುದನ್ನು ನಟಿಯೇ ತಿಳಿಸಬೇಕಿದೆ.