ಪ್ರೆಗ್ನೆನ್ಸಿ ಸುದ್ದಿಗೆ ತಕ್ಕ ಉತ್ತರ ಕೊಟ್ಟ ಪರಿಣಿತಿ ಚೋಪ್ರಾ

Public TV
1 Min Read
parineeti

ಬಾಲಿವುಡ್ ನಟಿ ಪರಿಣಿತಿ ಚೋಪ್ರಾ (Parineeti Chopra) ಸದ್ಯ ‘ಅಮರ್ ಸಿಂಗ್ ಚಮ್ಕಿಲಾ’ ಸಿನಿಮಾದ ಪ್ರಚಾರ ಕಾರ್ಯಕ್ರಮದಲ್ಲಿ ಬ್ಯುಸಿಯಾಗಿದ್ದಾರೆ. ಇದರ ನಡುವೆ ಹಬ್ಬಿರುವ ಪ್ರೆಗ್ನೆನ್ಸಿ ಸುದ್ದಿಗೆ ಪರಿಣಿತಿ ಚೋಪ್ರಾ ತಕ್ಕ ಉತ್ತರ ನೀಡಿದ್ದಾರೆ.

parineeti chopra

‘ಅಮರ್ ಸಿಂಗ್ ಚಮ್ಕಿಲಾ’ ಚಿತ್ರದ ಸಂದರ್ಶನಕ್ಕೆ ಬರುವಾಗ ನಟಿ ಫಿಟೆಡ್ ಬಟ್ಟೆಯನ್ನು ಧರಿಸಿದ್ದಾರೆ. ಈ ಮೂಲಕ ಪ್ರೆಗ್ನೆಂಟ್ ವದಂತಿಗೆ ನಟಿ ಸ್ಪಷ್ಟನೆ ನೀಡಿದ್ದಾರೆ. ಇದನ್ನೂ ಓದಿ:ಡಿಜಿಟಲ್ ವರ್ಷನ್‌ನಲ್ಲಿ ಬರಲಿದೆ ‘ಸ್ಟುಡೆಂಟ್ ಆಫ್ ದಿ ಇಯರ್ 3’

 

View this post on Instagram

 

A post shared by @parineetichopra

ಪರಿಣಿತಿ ಚೋಪ್ರಾ ಅವರು ರಾಜಕಾರಣಿ ರಾಘವ್ ಚಡ್ಡಾ ಜೊತೆ ಮದುವೆಯಾಗಿ ವೈಯಕ್ತಿಕ ಜೀವನದಲ್ಲಿ ಬ್ಯುಸಿಯಾಗಿದ್ದಾರೆ. ಇದರ ನಡುವೆ ಪರಿಣಿತಿ ನಟನೆಯ ಮುಂಬರುವ ಚಿತ್ರಗಳ ಪ್ರಚಾರ ಕಾರ್ಯದಲ್ಲಿ ಭಾಗಿಯಾಗಿ ತಂಡಕ್ಕೆ ಸಾಥ್ ನೀಡುತ್ತಿದ್ದಾರೆ. ಈ ನಡುವೆ ಸುಳ್ಳು ಸುದ್ದಿ ಹಬ್ಬಿರುವುದು ಅವರಿಗೆ ಬೇಸರ ತರಿಸಿದೆ. ಇದನ್ನೂ ಓದಿ:ಸಾಗರ್ ಪುರಾಣಿಕ್ ನಿರ್ದೇಶನದ ‘ವೆಂಕ್ಯಾ’ ಚಿತ್ರಕ್ಕೆ ಶಿಮ್ಲಾ ಬೆಡಗಿ ರೂಪಾಲಿ ಎಂಟ್ರಿ

PARINEETI CHOPRA

ಕೆಲ ದಿನಗಳಿಂದ ಪರಿಣಿತಿ ಚೋಪ್ರಾ ಪ್ರೆಗ್ನೆಂಟ್ ಆಗಿದ್ದಾರೆ ಎಂದು ಸುದ್ದಿಯಾಗಿತ್ತು. ಅದಕ್ಕೆ ಸರಿಯಾಗಿ ಲೂಸ್ ಟಾಪ್ ಧರಿಸಿ ಪರಿಣಿತಿ ಕಾಣಿಸಿಕೊಂಡಿದ್ದರು. ಈ ಸುದ್ದಿಗೆ ಪರಿಣಿತಿ ಲುಕ್ ಮತ್ತಷ್ಟು ಪುಷ್ಠಿ ನೀಡಿತ್ತು.

ವಿಮಾನ ನಿಲ್ದಾಣಕ್ಕೆ ಎಂಟ್ರಿ ಕೊಟ್ಟಾಗ ಬಿಳಿ ಶರ್ಟ್ಸ್ ಮತ್ತು ಶಾಟ್ಸ್ ಅನ್ನು ನಟಿ ಧರಿಸಿದ್ದರು. ಡ್ರೆಸ್ ತುಂಬಾ ಲೂಸ್ ಆಗಿತ್ತು. ನಿಧಾನವಾಗಿ ನಡೆಯುತ್ತಾ ಪಾಪರಾಜಿಗಳಿಗೆ ನಟಿ ಸ್ಮೈಲ್ ಮಾಡಿದ್ದರು. ಪರಿಣಿತಿ ಲುಕ್ ನೋಡಿದ್ರೆ ಪ್ರೆಗ್ನೆಂಟ್ ಎಂದೇ ಹೇಳಲಾಗಿತ್ತು. ನಟಿ ಪ್ರೆಗ್ನೆಂಟ್ ಆದ್ರಾ ಎಂದು ನೆಟ್ಟಿಗರು ಪ್ರಶ್ನೆ ಮಾಡಿದ್ದರು.

Share This Article