ಬಾಲಿವುಡ್ (Bollywood) ಬ್ಯೂಟಿ ಪರಿಣಿತಿ ಚೋಪ್ರಾ-ರಾಘವ್ ಚಡ್ಡಾ (Raghav Chadha) ಜೋಡಿ ಇದೇ ಸೆ.24ಕ್ಕೆ ದಾಂಪತ್ಯ ಜೀವನಕ್ಕೆ ಕಾಲಿಡುತ್ತಿದ್ದಾರೆ. ಮದುವೆ ಬಳಿಕ ಆರತಕ್ಷತೆ ಕಾಯಕ್ರಮ ಇರಲಿದ್ದು, ಮದುವೆ (Wedding) ಆರತಕ್ಷತೆಯ ಕಾರ್ಡ್ ಇದೀಗ ಸೋಷಿಯಲ್ ಮೀಡಿಯಾದಲ್ಲಿ ಸದ್ದು ಮಾಡ್ತಿದೆ. ಇದನ್ನೂ ಓದಿ:ಸಾಗರದೂರಲ್ಲಿ ಸಪ್ತಸಾಗರ ಮೂವಿ ಟೀಂ- ಅಲಂಕಾರ್ ಥಿಯೇಟರ್‌ಗೆ ರಕ್ಷಿತ್ ಶೆಟ್ಟಿ
ರಾಘವ್- ಪರಿಣಿತಿ ಸೆ.24ರಂದು ಉದಯಪುರದಲ್ಲಿ ವೈವಾಹಿಕ ಕಾಲಿಡಲಿದ್ದಾರೆ. ಪಂಜಾಬ್ ಸಂಪ್ರದಾಯದಂತೆ ಮದುವೆ ನಡೆಯಲಿದೆ. ವಿವಾಹ ಸಮಾರಂಭಗಳು ಸೆ.22ರಿಂದ ಪ್ರಾರಂಭವಾಗಲಿದ್ದು, ಸೆ.24ರವರೆಗೆ ನಡೆಯಲಿದೆ. ಮದುವೆಯ ಕುರಿತು ಸಂಪೂರ್ಣ ವಿವರ ಈ ಕಾರ್ಡ್‍ನಲ್ಲಿದೆ. ಸೆ.30ರಂದು ಚಂಡೀಗಢದ ತಾಜ್ ಹೋಟೆಲ್‍ನಲ್ಲಿ ಆರತಕ್ಷತೆ ನಡೆಯಲಿದೆ.
ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್- ಪಂಜಾಬ್ ಸಿಎಂ ಭಗವಂತ್ ಮಾನ್ ಸೇರಿದಂತೆ ಇತರ ರಾಜಕೀಯ ನಾಯಕರು ಉದಯಪುರಕ್ಕೆ ಬರಲಿದ್ದಾರೆ. ಅವರಿಗೆ ವಿಶೇಷ ವ್ಯವಸ್ಥೆ ಮಾಡಲಾಗಿದೆ. ಇದಲ್ಲದೇ ಮದುವೆ ನಡೆಯುವ ಲೀಲಾ ಪ್ಯಾಲೇಸ್ ಬಳಿ ಇರುವ ಐಷಾರಾಮಿ ಹೋಟೆಲ್‍ಗಳನ್ನು ಕಾಯ್ದಿರಿಸಲಾಗಿದೆ. ಪರಿಣಿತಿ, ಸಹೋದರಿ ಪ್ರಿಯಾಂಕಾ ಚೋಪ್ರಾ(Priyanka Chopra)- ನಿಕ್ ಜೋನಾಸ್ ಕೂಡ ಮದುವೆಯಲ್ಲಿ ಪಾಲ್ಗೊಳ್ಳಲಿದ್ದಾರೆ.
ಹಲವು ವರ್ಷಗಳ ಪ್ರೀತಿಗೆ ಪರಿಣಿತಿ- ರಾಘವ್ ಮೇ 13ರಂದು ಉಂಗುರದ ಮುದ್ರೆ ಒತ್ತಿದ್ದರು. ಕುಟುಂಬಸ್ಥರ ಸಮ್ಮುಖದಲ್ಲಿ ಅದ್ದೂರಿಯಾಗಿ ಪರಿಣಿತಿ ಚೋಪ್ರಾ ಎಂಗೇಜ್ ಆಗಿದ್ದರು.
[web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]