ಬಾಲಿವುಡ್‌ನ (Bollywood) ಡ್ಯಾನ್ಸಿಂಗ್ ಕ್ವೀನ್ ನೋರಾ ಫತೇಹಿ (Nora Fatehi) ಸದ್ಯ ಹಿಂದಿಯ ಹಲವು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಇನ್ನೂ ನಟ-ನಟಿಯರು ಏಲ್ಲೇ ಹೋದರೂ ಹೇಗೆ ಇದ್ದರೂ ಪಾಪರಾಜಿಗಳು ಫೋಟೋ ಮತ್ತು ವಿಡಿಯೋ ಮಾಡುತ್ತಾರೆ. ನಟಿಮಣಿಯರ ಖಾಸಗಿ ಭಾಗದ ಮೇಲೆ ಫೋಕಸ್ ಮಾಡುವವರಿಗೆ ಈಗ ನೋರಾ ತಿರುಗೇಟು ನೀಡಿದ್ದಾರೆ.

ನಾನು ಸುಂದರವಾದ ದೇಹವನ್ನು ಪಡೆದಿದ್ದೇನೆ. ನನಗೆ ಅದರ ಬಗ್ಗೆ ಹೆಮ್ಮೆ ಇದೆ. ನಾನು ಅದರಲ್ಲಿ ನಾಚಿಕೆ ಪಡುವುದಿಲ್ಲ ಎಂದು ನೋರಾ ಮಾತನಾಡಿದ್ದಾರೆ. ಪಾಪರಾಜಿಗಳ ಮೀತಿ ಮೀರಿದ ವರ್ತನೆ ನಟಿ ಗರಂ ಆಗಿದ್ದಾರೆ. ಇದನ್ನೂ ಓದಿ:‘ಟಗರು ಪಲ್ಯ’ ಚಿತ್ರದ ನಂತರ ಅಮೃತಾ ಪ್ರೇಮ್ ಏನ್ಮಾಡ್ತಿದ್ದಾರೆ?
ಅಂದಹಾಗೆ, 5 ಸಾವಿರ ರೂ. ಹಿಡಿದುಕೊಂಡು ಬಂದ ನೋರಾ ಫತೇಹಿ ಬಾಲಿವುಡ್‌ನಲ್ಲಿ 5 ಕೋಟಿ ರೂ.ಗೂ ಅಧಿಕ ಸಂಭಾವನೆ ಪಡೆಯುತ್ತಿದ್ದಾರೆ. ಕನ್ನಡದ ಧ್ರುವ ಸರ್ಜಾ ನಟನೆಯ ‘ಕೆಡಿ’ (KD Kannada Film) ಸಿನಿಮಾದಲ್ಲಿ ನೋರಾ ಸೊಂಟ ಬಳುಕಿಸಿ ಬಂದಿದ್ದಾರೆ.


