ಬಾಲಿವುಡ್‌ನಲ್ಲಿ ಸೆಲೆಬ್ರಿಟಿಗಳು ಲಾಭಕ್ಕಾಗಿ ಮದುವೆಯಾಗ್ತಾರೆ- ನೋರಾ ಫತೇಹಿ ಸ್ಫೋಟಕ ಹೇಳಿಕೆ

Public TV
1 Min Read
nora fatehi

ಬಾಲಿವುಡ್ (Bollywood) ಬ್ಯೂಟಿ ನೋರಾ ಫತೇಹಿ (Nora Fatehi) ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಐಟಂ ಡ್ಯಾನ್ಸ್‌ಗಳ ಮೂಲಕ ಮೋಡಿ ಮಾಡಿದ್ದಾರೆ. ಇದೀಗ ಸಂದರ್ಶನವೊಂದರಲ್ಲಿ ನೋರಾ, ಬಾಲಿವುಡ್‌ನ ಕರಾಳ ಸತ್ಯದ ಬಗ್ಗೆ ಬಾಯ್ಬಿಟ್ಟಿದ್ದಾರೆ. ಸೆಲೆಬ್ರಿಟಿಗಳು ಲಾಭಕ್ಕಾಗಿ ಮದುವೆಯಾಗ್ತಾರೆ ಎಂದು ಸ್ಫೋಟಕ ಮಾಹಿತಿ ಬಿಚ್ಚಿಟ್ಟಿದ್ದಾರೆ. ಇದನ್ನೂ ಓದಿ:ಚಿತ್ರರಂಗಕ್ಕೆ ರಿತಾನ್ಯಾ ಎಂಟ್ರಿ- ಪುತ್ರಿಗೆ ದುನಿಯಾ ವಿಜಯ್ ಸಲಹೆ

Nora Fatehi 1

ಫೇಮಸ್ ಇರುವ ತಮ್ಮ ಹೆಂಡತಿ ಅಥವಾ ಗಂಡನ ಹೆಸರನ್ನು ಈ ಜನರು ಬಳಸಿಕೊಳ್ಳುತ್ತಾರೆ. ಅದರಿಂದ ಚಿತ್ರರಂಗದಲ್ಲಿ ಸಂಪರ್ಕ ಹೆಚ್ಚಿಸಿಕೊಳ್ಳುತ್ತಾರೆ. ಹಣ ಗಳಿಸಲು ಮತ್ತು ಚಾಲ್ತಿಯಲ್ಲಿ ಇರಲು ಮದುವೆ ಆಗುತ್ತಾರೆ. ಆ ವ್ಯಕ್ತಿಯನ್ನು ಮದುವೆ (Wedding) ಆದರೆ ಮುಂದಿನ 3 ವರ್ಷಗಳ ಕಾಲ ತಾನು ಸುದ್ದಿಯಲ್ಲಿ ಇರಬಹುದು ಎಂಬುದು ಅವರ ಲೆಕ್ಕಚಾರ. ಯಾಕೆಂದರೆ, ಆ ವ್ಯಕ್ತಿಯ ಬಳಿ ಸಿನಿಮಾಗಳು ಇವೆ. ಆ ಸಿನಿಮಾ ಸೂಪರ್ ಹಿಟ್ ಆಗಲಿದೆ. ಆ ಅಲೆಯಲ್ಲಿ ಫೇಮಸ್‌ ಆಗಬಹುದು ಎಂಬ ಲೆಕ್ಕಾಚಾರ ಆಗಿರುತ್ತದೆ ಎಂದು ನೋರಾ ಮಾತನಾಡಿದ್ದಾರೆ.

nora fatehi

ದುಡ್ಡಿಗಾಗಿ ಇದನ್ನೆಲ್ಲ ಮಾಡುತ್ತಾರೆ. ಹಣಕ್ಕಾಗಿ ತಮ್ಮ ಜೀವನವನ್ನೇ ಹಾಳು ಮಾಡಿಕೊಳ್ಳುತ್ತಾರೆ. ಇಷ್ಟವೇ ಇಲ್ಲದ ವ್ಯಕ್ತಿಯನ್ನು ಮದುವೆ ಆಗಿ ಜೀವನ ಮಾಡುವುದಕ್ಕಿಂತ ಕೆಟ್ಟದ್ದು ಬೇರೆ ಏನೂ ಇಲ್ಲ. ವೈಯಕ್ತಿಕ ಜೀವನ, ಮಾನಸಿಕ ಆರೋಗ್ಯ ಮತ್ತು ಸಂತಸವನ್ನು ತ್ಯಾಗ ಮಾಡುವುದರಲ್ಲಿ ಅರ್ಥವಿಲ್ಲ. ಕೆಲಸ ಮತ್ತು ವೈಯಕ್ತಿಕ ಬದುಕನ್ನು ಮಿಶ್ರಣ ಮಾಡಬಾರದು ನೋರಾ ಫತೇಹಿ ಮಾತನಾಡಿದ್ದಾರೆ.

ಬಾಲಿವುಡ್‌ನಲ್ಲಿ ಹಲವು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಪರಭಾಷೆಗಳಲ್ಲಿ ನೋರಾಗೆ ಬೇಡಿಕೆ ಇದೆ. ನಟನೆ ಮಾತ್ರವಲ್ಲ ಜಾಹೀರಾತು ಇಂಡಸ್ಟ್ರಿಯಲ್ಲಿ ಗುರುತಿಸಿಕೊಳ್ತಿದ್ದಾರೆ. ಕನ್ನಡದ ‘ಕೆಡಿ’ (KD Film) ಸಿನಿಮಾದಲ್ಲಿ ಧ್ರುವ ಸರ್ಜಾ (Dhruva Sarja) ಜೊತೆ ಸೊಂಟ ಬಳುಕಿಸಿದ್ದಾರೆ.

Share This Article