CinemaKarnatakaLatestMain PostSandalwoodSouth cinema

ಸಿನಿಮಾ ವಿಮರ್ಶೆಕನಿಂದ ನಟಿ ನಿತ್ಯಾ ಮೆನನ್ ಗೆ ಕಿರುಕುಳ: ಸಿಡಿದೆದ್ದ ಕನ್ನಡದ ನಟಿ

Advertisements

ನ್ನಡ ಸಿನಿಮಾ ರಂಗದ ಮೂಲಕ ಬಣ್ಣದ ಪ್ರಪಂಚಕ್ಕೆ ಕಾಲಿಟ್ಟ ನಟಿ ನಿತ್ಯಾ ಮೆನನ್. ಜೋಶ್, ಮೈನಾ , ಕೋಟಿಗೊಬ್ಬ 2 ಸೇರಿದಂತೆ ಹಲವು ಕನ್ನಡದ ಸಿನಿಮಾಗಳಲ್ಲಿ ನಟಿಸಿರುವ ದಕ್ಷಿಣದ ಹೆಸರಾಂತ ತಾರೆ ನಿತ್ಯಾ ಮೆನನ್ ಅವರಿಗೆ ಸಿನಿಮಾ ವಿಮರ್ಶೆಕನಿಂದ ಸಾಕಷ್ಟು ಬಾರಿ ಮಾನಸಿಕ ಕಿರುಕುಳ ಆಗಿದೆಯಂತೆ. ಆ ಹುಡುಗನ ಭವಿಷ್ಯ ಹಾಳಾಗಬಾರದು ಎನ್ನುವ ಕಾರಣಕ್ಕಾಗಿ ದೂರನ್ನು ಕೊಡದೇ ಇರಲು ಅವರು ನಿರ್ಧರಿಸಿದ್ದಾರಂತೆ.

ಕೇರಳದ ಪ್ರಸಿದ್ಧ ಯೂಟ್ಯೂಬ್ ಚಾನೆಲ್ ವೊಂದರಲ್ಲಿ ವಿಮರ್ಶೆ ಮಾಡುವ ಯುವಕನೊಬ್ಬ, ತಮ್ಮನ್ನು ಮದುವೆಯಾಗುವಂತೆ ನಿತ್ಯವೂ ಕಿರುಕುಳ ನೀಡುತ್ತಿದ್ದಾನೆಂದು, ಅವನ 30ಕ್ಕೂ ಹೆಚ್ಚು ನಂಬರ್ ಗಳನ್ನು ಬ್ಲ್ಯಾಕ್ ಮಾಡಿರುವುದಾಗಿಯೂ ನಿತ್ಯಾ ಹೇಳಿದ್ದಾರೆ. ಹಲವರು ಆತನ ವಿರುದ್ಧ ದೂರು ದಾಖಲಿಸುವಂತೆ ಸಲಹೆ ನೀಡಿದರು. ಆದರೆ, ಆ ಹುಡುಗನ ಭವಿಷ್ಯದ ದೃಷ್ಟಿಯಿಂದ ನಾನು ಹಾಗೆ ಮಾಡಲಿಲ್ಲ ಎಂದಿದ್ದಾರೆ ನಟಿ.  ಇದನ್ನೂ ಓದಿ:ಗಾಳಿಪಟ 2 ಸಿನಿಮಾದ ‘ಪ್ರಾಯಶಃ’ ಸಾಂಗ್ ರಿಲೀಸ್ ಮಾಡಿದ ಕಿಚ್ಚ ಸುದೀಪ್

ಈ ಹಿಂದೆ ಮದುವೆ ವಿಚಾರವಾಗಿ ಆ ಹುಡುಗ ಕೂಡ ಬಹಿರಂಗವಾಗಿಯೇ ಹೇಳಿಕೆ ನೀಡಿದ್ದನಂತೆ. ಅಲ್ಲದೇ, ಅದನ್ನು ಸೋಷಿಯಲ್ ಮೀಡಿಯಾದಲ್ಲೂ ಹಂಚಿಕೊಂಡಿದ್ದನಂತೆ. ನನಗೆ ಗೌರವ ಕೊಡದೇ ನಿತ್ಯಾ ಮೆನನ್ ಅನ್ನು ಇನ್ನೆಂದಿಗೂ ಮದುವೆ ಆಗಲಾರೆ. ಅವರೇ ಬಂದು ಕೇಳಿಕೊಂಡರೂ ಮದುವೆ ಆಗುವುದಿಲ್ಲ ಎಂದು ಹೇಳಿಕೆ ನೀಡಿದ್ದನಂತೆ. ಅದನ್ನೂ ಕೂಡ ನಿತ್ಯಾ ಈ ಸಂದರ್ಭದಲ್ಲಿ ನೆನಪಿಸಿಕೊಂಡಿದ್ದಾರೆ.

Live Tv

Leave a Reply

Your email address will not be published.

Back to top button