ಕನ್ನಡದ ನಟಿ ನಿತ್ಯಾ ಮೆನನ್ (Nithya Menen) ಅವರು ತಮಿಳಿನ ‘ತಿರುಚಿತ್ರಂಬಲಂ’ (Thiruchitrambalam) ಎಂಬ ಚಿತ್ರಕ್ಕೆ ನ್ಯಾಷನಲ್ ಅವಾರ್ಡ್ (70th National Award) ಗೆದ್ದಿರುವುದಕ್ಕೆ ಇದೀಗ ಮೊದಲ ಪ್ರತಿಕ್ರಿಯೆ ನೀಡಿದ್ದಾರೆ. ರಾಷ್ಟ್ರ ಪ್ರಶಸ್ತಿ ಸಿಕ್ಕಿದಕ್ಕೆ ಹೆಮ್ಮೆಯಿದೆ ಎಂದಿದ್ದಾರೆ. ಇದನ್ನೂ ಓದಿ:‘ಕೆಜಿಎಫ್ 2’ ನಿರ್ದೇಶಕನನ್ನು ಹಾಡಿ ಹೊಗಳಿದ ಪ್ರಭಾಸ್

ಅನೇಕರು ನನಗೆ ಕರೆ ಮಾಡಿ ಶುಭಕೋರಿದ್ದಾರೆ. ಅವರಿಗೆ ಅವಾರ್ಡ್ ಸಿಕ್ಕಿದೆ ಎಂಬ ರೀತಿಯಲ್ಲಿ ಸಂಭ್ರಮಿಸುತ್ತಿದ್ದಾರೆ. ಇದು ನಿಜಕ್ಕೂ ಖುಷಿಯ ವಿಚಾರ. ‘ತಿರುಚಿತ್ರಂಬಲಂ’ ಚಿತ್ರದಿಂದ ನನಗೆ ಅತ್ಯುತ್ತಮ ನಾಯಕಿ ಎಂದು ಅವಾರ್ಡ್ ಸಿಕ್ಕಿದ್ದು, ಹೆಮ್ಮೆ ತಂದಿದೆ. ನಾನು ಈ ಪ್ರಶಸ್ತಿಗೆ ಅರ್ಹ ಎಂದು ನಟಿ ಮಾತನಾಡಿದ್ದಾರೆ.
ಅಂದಹಾಗೆ, 2022ರಲ್ಲಿ ತೆರೆಕಂಡ ‘ತಿರುಚಿತ್ರಂಬಲಂ’ ಸಿನಿಮಾದಲ್ಲಿ ಧನುಷ್‌ಗೆ (Dhanush) ನಾಯಕಿಯಾಗಿ ನಿತ್ಯಾ ಮೆನನ್ ನಟಿಸಿದ್ದರು. ಮಿತ್ರನ್ ಆರ್ ಚಿತ್ರಕ್ಕೆ ನಿರ್ದೇಶನ ಮಾಡಿದ್ದರು.


