ಕ್ರಾಂತಿ ಸಿನಿಮಾದ ಸ್ಪೆಷಲ್ ಸಾಂಗ್‍ನಲ್ಲಿ ಪುಷ್ಪವತಿ ಹೆಜ್ಜೆ ಹಾಕಿದ್ದರು. ಆ ವೇಳೆ ಸೆಟ್‍ನಲ್ಲಿ ನಟ ದರ್ಶನ್ (Darshan) ಅವರನ್ನು ಉಪಚರಿಸಿದ ರೀತಿ ಬಗ್ಗೆ ನಟಿ ನಿಮಿಕಾ ರತ್ನಾಕರ್ (Nimika Ratnakar) ಹೇಳಿಕೊಂಡಿದ್ದಾರೆ. ಸದ್ಯ ಫೀನಿಕ್ಸ್ ಸಿನಿಮಾದ (Phoenix Cinema) ಶೂಟಿಂಗ್‍ನಲ್ಲಿ ಭಾಗಿಯಾಗಿರುವ ನಿಮಿಕಾ ರತ್ನಾಕರ್, ಸಿನಿಮಾದಲ್ಲಿ ತಮ್ಮ ಪಾತ್ರ ಹಾಗೂ ಸಿನಿಮಾ ಶೂಟಿಂಗ್ ಎಕ್ಸ್‌ಪೀರಿಯನ್ಸ್ ಹಂಚಿಕೊಂಡಿದ್ದಾರೆ.
ಫೀನಿಕ್ಸ್ ಸಿನಿಮಾ ಮಹಿಳಾ ಪ್ರಧಾನ ಸಿನಿಮಾವಾಗಿದ್ದು, ಚಿತ್ರದ ಕೊನೆಯ ದಿನದ ಶೂಟಿಂಗ್‍ನ್ನ ಬೆಂಗಳೂರಿನ ಕಂಠೀರವ ಸ್ಟುಡಿಯೋದಲ್ಲಿ ಚಿತ್ರೀಕರಿಸಿದೆ ಚಿತ್ರತಂಡ. ಈ ವೇಳೆ ಮಾಧ್ಯಮಗಳ ಜೊತೆ ಮಾತನಾಡಿದ ನಿಮಿಕಾ ರತ್ನಾಕರ್ ದರ್ಶನ್ ಅವರ ಜೊತೆ ಕ್ರಾಂತಿ ಸಿನಿಮಾದ ಅನುಭವವನ್ನ ಹಂಚಿಕೊಂಡಿದ್ದಾರೆ. “ದರ್ಶನ್ ಸರ್ ಇರೋದಕ್ಕೂ, ಕೆಲವರು ಅವರನ್ನ ತೋರಿಸೋದಕ್ಕೂ ವ್ಯತ್ಯಾಸವಿದೆ. ಪ್ರತಿದಿನ ಅಮ್ಮ ತಿಂಡಿ ಆಯ್ತಾ, ಊಟ ಆಯ್ತಾ ಅಂತಾ ಕೇಳ್ತಿದ್ರು. ಅಮೇಝಿಂಗ್ ವ್ಯಕ್ತಿ ದರ್ಶನ್ ಸರ್” ಎಂದು ಹೇಳಿದ್ದಾರೆ. ಇದನ್ನೂ ಓದಿ: ಸಂಜಯ್ ದತ್ ಕತ್ತಿಗೆ ರೇಜರ್ ಹಿಡಿದಿದ್ದ ಡಬಲ್ ಮರ್ಡರ್ ಅಪರಾಧಿ!
ಓಂ ಪ್ರಕಾಶ್ ರಾವ್ ನಿರ್ದೇಶನದ ಫೀನಿಕ್ಸ್ ಸಿನಿಮಾದ ಚಿತ್ರೀಕರಣದಲ್ಲಿ ಭಾಗಿಯಾಗಿದ್ದಾರೆ ನಿಮಿಕಾ. ಇನ್ನು ಓಂ ಪ್ರಕಾಶ್ ರಾವ್ ಅವರ ಮುಂದಿನ 50ನೇ ಸಿನಿಮಾದಲ್ಲೂ ನಿಮಿಕಾ ಮುಖ್ಯ ಪಾತ್ರದಲ್ಲಿ ನಟಿಸಲಿದ್ದಾರಂತೆ. ಇದನ್ನೂ ಓದಿ: ಫೀನಿಕ್ಸ್ ಸಿನಿಮಾದ ಕಥೆ ದರ್ಶನ್ ಅವರಿಗೆ ಮಾಡಿದ್ದು: ಓಂ ಪ್ರಕಾಶ್ ರಾವ್ ಸ್ಫೋಟಕ ಮಾತು