‘ಲಕ್ಷ್ಮಿ ಬಾರಮ್ಮ’, ‘ಬಿಗ್ ಬಾಸ್ ಸೀಸನ್ 9’ರ (Bigg Boss Kannada 9) ಮೂಲಕ ಮನೆ ಮಾತಾದ ನಟಿ ನೇಹಾ ಗೌಡ (Neha Gowda) ಮೊದಲ ಬಾರಿಗೆ ಮಗಳ ಮುದ್ದಾದ ಫೋಟೋವನ್ನು ಹಂಚಿಕೊಂಡಿದ್ದಾರೆ. ನ.14 ಮಕ್ಕಳ ದಿನಾಚರಣೆ ಪ್ರಯುಕ್ತ ಮಗಳ ಸುಂದರ ಫೋಟೋ ನಟಿ ರಿವೀಲ್ ಮಾಡಿದ್ದಾರೆ. ಇದನ್ನೂ ಓದಿ:‘ಪುಷ್ಪ 2’ ಡಬ್ಬಿಂಗ್‌ನಲ್ಲಿ ಶ್ರೀವಲ್ಲಿ- ಬಿಗ್ ಅಪ್‌ಡೇಟ್ ಹಂಚಿಕೊಂಡ ರಶ್ಮಿಕಾ ಮಂದಣ್ಣ
ಮಕ್ಕಳ ದಿನಾಚರಣೆಯಂದು ನಮ್ಮ ಪುಟ್ಟ ಮಗುವಿನ ಫೋಟೋ ಹಂಚಿಕೊಳ್ಳುತ್ತಿರೋದಕ್ಕೆ ಖುಷಿಯಿದೆ. ನಮ್ಮ ಜೀವನದಲ್ಲಿ ಮಗಳ ಆಗಮನವಾಗಿರೋದು ಖುಷಿಯಿದೆ ಎಂದು ಮುದ್ದು ಮಗಳ ಫೋಟೋ ಶೇರ್ ಮಾಡಿ ನೇಹಾ ಸಂಭ್ರಮಿಸಿದ್ದಾರೆ. ಅಂದಹಾಗೆ, ಅ.29ರಂದು ನಟಿ ಹೆಣ್ಣು ಮಗುವಿಗೆ ಜನ್ಮ ನೀಡಿದರು. ಹಾಗಾಗಿ ನಟನೆಯಿಂದ ನೇಹಾ ವಿರಾಮ ತೆಗೆದುಕೊಂಡಿದ್ದಾರೆ.
View this post on Instagram
ಅಂದಹಾಗೆ, ನೇಹಾ ಮತ್ತು ಚಂದನ್ (Chandan) ಹಲವು ವರ್ಷಗಳ ಪ್ರೀತಿಸುತ್ತಿದ್ದರು. 2018ರಂದು ಫೆಬ್ರವರಿಯಲ್ಲಿ ದಾಂಪತ್ಯ (Wedding) ಜೀವನಕ್ಕೆ ಕಾಲಿಟ್ಟರು.