‘ಲಕ್ಷ್ಮಿ ಬಾರಮ್ಮ’, ‘ಬಿಗ್ ಬಾಸ್ ಕನ್ನಡ 9’ರ ಶೋ (BBK 9) ಮೂಲಕ ಮನೆ ಮಾತಾದ ನಟಿ ನೇಹಾ ಗೌಡ (Neha Gowda) ಅವರ ಮಗಳ ನಾಮಕರಣ (Naming Ceremony) ಅದ್ಧೂರಿಯಾಗಿ ಜರುಗಿದೆ. ಮನೆಯ ಪುಟ್ಟಲಕ್ಷ್ಮಿಗೆ ಮುದ್ದಾದ ಹೆಸರನ್ನೇ ನೇಹಾ ದಂಪತಿ ನಾಮಕರಣ ಮಾಡಿದ್ದಾರೆ. ಮಗಳಿಗೆ ‘ಶಾರದ’ ಎಂದು ಹೆಸರಿಟ್ಟಿದ್ದಾರೆ.
ಬೆಂಗಳೂರಿನಲ್ಲಿ ಅದ್ಧೂರಿಯಾಗಿ ನೇಹಾ ಮಗಳ ನಾಮಕರಣ ಸಮಾರಂಭ ಜರುಗಿದೆ. ಈ ಕಾರ್ಯಕ್ರಮಕ್ಕೆ ಕಿರುತೆರೆ ನಟ- ನಟಿಯರು ಭಾಗಿಯಾಗಿ ನೇಹಾ ಮಗಳಿಗೆ ಶುಭಕೋರಿದ್ದಾರೆ. ಇದನ್ನೂ ಓದಿ:ಕೇರಳದಲ್ಲಿ ದರ್ಶನ್ ಶತ್ರು ಸಂಹಾರ ಪೂಜೆ – ದಾಸನಿಗೆ ಸಾಥ್ ನೀಡಿದ ಕೊಲೆ ಆರೋಪಿ ಪ್ರಜ್ವಲ್ ರೈ
ಇನ್ನೂ ಈಗೀನ ಟ್ರೆಂಡ್‌ನೆಲ್ಲಾ ಪಕ್ಕಕ್ಕಿಟ್ಟು ಮಗಳಿಗೆ ಶಾರದ ಮಾತೆಯ ಹೆಸರನ್ನಿಟ್ಟಿದ್ದಾರೆ. ಪುತ್ರಿಗೆ ‘ಶಾರದ’ (Sharada) ಎಂದು ನೇಹಾ ದಂಪತಿ ನಾಮಕರಣ ಮಾಡಿದ್ದಾರೆ. ಮಗಳಿಗೆ ಅರ್ಥಪೂರ್ಣವಾಗಿ ಹೆಸರನ್ನು ಇಟ್ಟಿದಕ್ಕೆ ಫ್ಯಾನ್ಸ್ ಮೆಚ್ಚುಗೆ ಸೂಚಿಸಿದ್ದಾರೆ.
ಅಂದಹಾಗೆ, ನೇಹಾ ಮತ್ತು ಚಂದನ್ (Chandan Gowda) ಹಲವು ವರ್ಷಗಳಿಂದ ಸ್ನೇಹಿತರಾಗಿದ್ದರು. ಆ ಸ್ನೇಹವೇ ಪ್ರೀತಿಗೆ ತಿರುಗಿ ಮದುವೆಗೆ ಮುನ್ನುಡಿ ಬರೆದರು. ಗುರುಹಿರಿಯರ ಒಪ್ಪಿಗೆಯ ಮೇರೆಗೆ 2018ರಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟರು.
ಇನ್ನೂ ಕಳೆದ ವರ್ಷ ಅಕ್ಟೋಬರ್‌ನಲ್ಲಿ ಹೆಣ್ಣು ಮಗುವಿಗೆ ನಟಿ ಜನ್ಮ ನೀಡಿದರು. ಪ್ರಸ್ತುತ ಮಗಳ ಆರೈಕೆಯಲ್ಲಿ ನೇಹಾ ತೊಡಗಿಸಿಕೊಂಡಿದ್ದಾರೆ. ನಟನೆಯಿಂದ ಅವರು ಅಂತರ ಕಾಯ್ದುಕೊಂಡಿದ್ದಾರೆ.